ಕಾಂಗ್ರೆಸ್‌ ಕೈಗಳಲ್ಲಿ ಮುಸ್ಲಿಮರ ರಕ್ತ ಮೆತ್ತಿಕೊಂಡಿದೆ: ಸಲ್ಮಾನ್‌ ಖುರ್ಷಿದ್‌

Posted In : ದೇಶ

ಅಲಿಘಡ: ತಮ್ಮ ಪಕ್ಷದ ಕೈಗಳು ಮುಸ್ಲಿಮರ ರಕ್ತದಿಂದ ಮೆತ್ತಿಕೊಂಡಿದೆ ಎಂದು ಹೇಳಿರುವ ಕಾಂಗ್ರೆಸ್‌ ಹಿರಿಯ ನಾಯಕ ಸಲ್ಮಾನ್‌ ಖುರ್ಷಿದ್‌ ವಿವಾದಕ್ಕೆ ಈಡಾಗಿದ್ದಾರೆ.

ಅಲಿಘಡ ಮುಸ್ಲಿಂ ವಿವಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಬಾಗವಹಿಸಿದ್ದ ಖುರ್ಷಿದದ್‌ ಮಾತನಾಡಿ, “ಮುಸ್ಲಿಮರ ರಕ್ತದಿಂದ ಕಾಂಗ್ರೆಸ್‌ ಪಕ್ಷದ ಕೈಗಳು ಮೆತ್ತಿಕೊಂಡಿವೆ. ಪಕ್ಷದ ನಾಯಕನಾಗಿ, ನನ್ನ ಕೈಯಲ್ಲೂ ಆ ಕಲೆಗಳು ಹಾಗೆಯೇ ಉಳಿದಿವೆ ಎಂದು ನನಗೆ ಅನಿಸುತ್ತದೆ” ಎಂದು ಹೇಳಿದ್ದಾರೆ.

 ಇದೇ ವೇಳೆ ವಿದ್ಯಾರ್ಥಿಯೊಬ್ಬ ಎದ್ದು ನಿಂತು, “ರಾಷ್ಟ್ರಪತಿ ಆದೇಶದ ಮೇಲೆ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಮುಸ್ಲಿಮರು ಹಾಗು ದಲಿತರಗೆ ಅನ್ಯಾಯವಾಗಿದೆ. ಹಶಿಮ್‌ಪುರ, ಮಲ್ಯಾನಾ, ಮೀರತ್‌, ಮುಝಫ್ಫರ್‌ನಗರ, ಭಾಗಲ್ಪುರ, ಮರಾದಾಬಾದ್‌, ಅಲಿಘಡ ಹಾಗು ಬಾಬ್ರಿ ಮಸೀದಿ ಧ್ವಂಸದ ಪ್ರಕರಣದಗಳು ಕಾಂಗ್ರೆಸ್‌ ಆಡಳಿತಾವಧಿಯಲ್ಲೇ ಸಂಭವಿಸಿವೆ. ಕಾಂಗ್ರೆಸ್ ಕೈಯಲ್ಲಿ ಮೆತ್ತಿಕೊಂಡಿರುವ ಈ ರಕ್ತದ ಕಲೆಗಳನ್ನು ಅಳಿಸಲು ಆಗುವುದೇ?” ಎಂದು ಖುರ್ಷಿದ್‌ರನ್ನು ಕೇಳಿದ್ದ.

ಖುರ್ಷಿದ್‌ರ ಮಾತುಗಳಿಗೆ ಪ್ರತಿಕ್ರಯಿಸಿದ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, “ತನ್ನ ಪಾಪಗಳಿಗೆ ತಕ್ಕ ಬೆಲೆ ತೆರುವ ಸಮಯ ಕಾಂಗ್ರೆಸ್‌ಗೆ ಬಂದಿದೆ” ಎಂದು ಹೇಳಿದ್ದಾರೆ.

 

Leave a Reply

Your email address will not be published. Required fields are marked *

ten + one =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top