About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಬಾಂಗ್ಲಾ ನುಸುಳುಕೋರರು ದೇಶದ ಅತಿಥಿಗಳೆಂದ ಕಾಂಗ್ರೆಸ್‌ ನಾಯಕ

ದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ ಪರವಾಗಿ ಮಾತನಾಡಿದ ಪಕ್ಷದ ನಾಯಕ ಚರಣ್‌ ದಾಸ್ ಮಹಂತ್‌, ಅತಿಥಿಗಳಿಗೆ ದೇಶದಲ್ಲಿ ಜಾಗ ನೀಡಬೇಕು ಎಂದಿದ್ದಾರೆ.

“ಇಂದಿರಾ ಗಾಂಧಿ ಅವಧಿಯಾಗಲೇ ಅಥವಾ ಅದಕ್ಕೂ ಮುಂಚಿನ ಕಾಲಘಟ್ಟವೇ ಆಗಲಿ, ದೇಶಕ್ಕೆ ಬಂದವರಿಗೆ ಭಾರತ ಆಶ್ರಯ ನೀಡುತ್ತಲೇ ಬಂದಿದೆ. ಯಾರನ್ನೂ ಇಲ್ಲಿಂದ ಹೋಗಿ ಎಂದು ಹೇಳಿಲ್ಲ. ಕೆಲವರು ಅತಿಥಿಗಳಾಗಿ, ಕೆಲವರು ಬಡವರಾಗಿ ಬರುತ್ತಾರೆ, ನಾವು ಅವರಿಗೆ ರಕ್ಷಣೆ ಕೊಡಬೇಕು” ಎಂದು ಮಹಂತ್‌ ತಿಳಿಸಿದ್ದಾರೆ.

ಮಹಂತ್‌ ಮಾತಿಗೆ ಪ್ರತಿಕ್ರಿಯಿಸಿದ ಛತ್ತೀಸಗಡ ಮುಖ್ಯಮಂತ್ರಿ ರಮಣ್‌ ಸಿಂಗ್ , “ಭಾರತವನ್ನು ಧರ್ಮಶಾಲೆಯನ್ನಾಗಿ ಮಾಡಬೇಕೆಂದಿದ್ದೀರೇನು? ಕೆಲವರು ಬಲವಂತವಾಗಿ ಬಂದು  ಸಂಪನ್ಮೂಲಗಳನ್ನು ಬಳಸುತ್ತಾರೆ. ಇದು ಒಪ್ಪಲಾಗದು. ಅವರುನ್ನು ಮರಳಿ ಕಳುಹಿಸಬೇಕು. ದೇಶವನ್ನು ಕಾಂಗ್ರೆಸ್‌ ಯಾವ ದಿಕ್ಕಿನಲ್ಲಿ ನಡೆಸಬೇಕೆಂದಿದೆ?” ಎಂದು ಹೇಳಿದ್ದಾರೆ.

ಜುಲೈ 30ರಂದು ಬಿಡುಗಡೆಯಾದ ಅಸ್ಸಾಂ ರಾಜ್ಯದ ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತಂತೆ ವಿಪಕ್ಷಗಳು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಾ ಬಂದಿವೆ. ಇದರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂಚೂಣಿಯಲ್ಲಿದ್ದಾರೆ.

 

 

Tags

Related Articles

Leave a Reply

Your email address will not be published. Required fields are marked *

Language
Close