About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಕಾಂಗ್ರೆಸ್‌ ಶಾಸಕನ ಭಯೋತ್ಪಾದಕ ನಂಟು?

ದೆಹಲಿ: ಕಳುವಾಗಿದ್ದ ಶಸ್ತ್ರಗಳ ಪ್ರಕರಣದಲ್ಲಿ ಮಣಿಪುರದ ಕಾಂಗ್ರೆಸ್‌ ಶಾಸಕ ಯಮ್ತುಂಗ್‌ ಹಾಕಿಪ್‌ರನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬಂಧಿಸಿದೆ.

ದೇಶದ ವಿರುದ್ಧ ಯುದ್ಧ ಸಾರಿದ ಭಯೋತ್ಪಾದಕರಿಗೆ ನೀಡಲು ಈ ಶಸ್ತ್ರಗಳನ್ನು ಹಾಕಿಪ್‌ ಪೊಲೀಸ್‌ ಠಾಣೆಯಿಂದ ಅಕ್ರಮವಾಗಿ ಕಳುವು ಮಾಡಿದ್ದಾರೆ ಎಂಬಬಲವಾದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ. ಒಟ್ಟಾರೆ 56 ಪಿಸ್ತೂಲ್‌ಗಳು ಹಾಗು 58 ಮ್ಯಾಗಝಿನ್‌ಗಳು ವಿವಿಧ ಹಂತಗಳಲ್ಲಿ 2014 ಹಾಗು 2107ರ ನಡುವೆ ಮಣಿಪುರ ರೈಫಲ್ಸ್‌ನ ಇಂಫಾಲ್‌‌ ಆವರಣದಿಂದ ನಾಪತ್ತೆಯಾಗಿದ್ದವು.

ಇಂಫಾಲದಲ್ಲಿರುವ ಎನ್‌ಐಎ  ವಿಶೇಷ ನ್ಯಾಯಾಲದ ಎದುರು ಹಾಜರುಪಡಿಸಲಾಗಿದೆ. ಹಾಕಿಪ್‌ರನ್ನು ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದ ಸಮಸ್ಯೆ ಇದೆ ಎಂದು ನೆವ ಹೇಳುತ್ತಿರುವ ಈತನನ್ನು ಸರಕಾರೀ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದುವರೆಗೂ 14 ಶಸ್ತ್ರಗಳನ್ನು ಎನ್‌ಐಎ ವಶಪಡಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ.

Tags

Related Articles

Leave a Reply

Your email address will not be published. Required fields are marked *

Language
Close