About Us Advertise with us Be a Reporter E-Paper

ವಿ +

ಅಲೋಚನೆ ಮೇಲೂ ಕಂಟ್ರೋಲ್

ಪ್ರತಿ ಮನುಷ್ಯನ ಮನಸ್ಸಿನಲ್ಲಿ ದಿನನಿತ್ಯ 50,000ದಿಂದ 70,000ಸಾವಿರದಷ್ಟು ಯೋಚನೆಗಳು ಹುಟ್ಟುತ್ತವೆ. ಇದರಲ್ಲಿ ಸಕರಾತ್ಮಕ ಹಾಗೂ ನಕರಾತ್ಮಕ ಅಲೋಚನೆಗಳು ಸೇರಿವೆ. ಒಂದೆರಡು ಆಲೋಚನೆಗಳನ್ನು ನಿಯಂತ್ರಿಸಲು ಕಷ್ಟಪಡುವವರು ಇಷ್ಟೊಂದು ಯೋಚನೆಗಳನ್ನು ಹಿಡಿತದಲ್ಲಿಡಲು ಸಾಧ್ಯವೇ? ಎಂತಹ ಗಟ್ಟಿ ಮನಸ್ಸುಳ್ಳವರಿಗೂ ಇದು ಅಸಾಧ್ಯ. ಇದರ ಬಗ್ಗೆ ತಪ್ಪಿತಸ್ಥ ಭಾವನೆಯನ್ನು ಹೊಂದುವ ಅವಶ್ಯಕತೆಯೂ ಇಲ್ಲ. ಇದು ನೈಸರ್ಗಿಕ. ನಕರಾತ್ಮಕ ಆಲೋಚನೆಗಳಿಂದ ಕೆಲವೊಮ್ಮೆ ಕಿರಿಕಿರಿ, ಕಸಿವಿಸಿ ಉಂಟಾಗಬಹುದು. ಪೂರ್ತಿ ದಿನವನ್ನೇ ಹಾಳುಗೆಡಹುವ ಇವುಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವೆನಿಸುತ್ತದೆ.

ಇದಕ್ಕೇನು ಮಾಡಬೇಕು?
ಮೊದಲಿಗೆ ಯಾವ ಅಲೋಚನೆ ಬಗ್ಗೆ ಗಮನವನ್ನಿಡಬೇಕೆಂದು ಮೊದಲು ತೀರ್ಮಾನಿಸಿ. 1; ಸ್ನೇಹಿತೆ ತನ್ನ ಮಾತಿನಿಂದ ಮನಸ್ಸಿಗೆ ಕಿರಿಕಿರಿ ಮಾಡುತ್ತಿದ್ದಾಳೆ. 2; ಸ್ನೇಹಿತೆ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದಳು. ಮೊದಲ ಯೋಚನೆಯನ್ನು ಬಿಟ್ಟು, ಎರಡನೆಯದರ ಕಡೆಗೆೆ ಗಮನ ಯಾರಾದರೂ ಕಿರಿಕಿರಿ ಮಾಡುತ್ತಿದ್ದರೆ ಅಥವಾ ಮನಸ್ಸಿನಲ್ಲಿ ನಕರಾತ್ಮಕ ಆಲೋಚನೆಗಳನ್ನು ಹುಟ್ಟುಹಾಕಿದ್ದರೆ ಇದನ್ನು ಸಕರಾತ್ಮಕವಾಗಿ ಬದಲಾಯಿಸಬೇಕು. ಮನಸ್ಸನ್ನು ಸದಾ ಸಕರಾತ್ಮಕತೆಯ ಕಡೆಗೇ ಕೇಂದ್ರೀಕರಿಸಬೇಕು. ಆಗ ಎಷ್ಟೇ ಕೆಟ್ಟ ಆಲೋಚನೆಗಳು ಉಂಟಾದರೂ ಕೊನೆಗೆ ಅದು ಸಕರಾತ್ಮಕವಾಗಿ ಬದಲಾಗಿಯೇ ಬಿಡುತ್ತದೆ. ಒಮ್ಮೆ ಮನಸ್ಸಿನಲ್ಲಿ ಉದ್ಭವವಾದ ಅನಾವಶ್ಯಕ ಯೋಚನೆಯನ್ನು ತೊರೆದಾಗ ಮನಸ್ಸು ಮತ್ತೆ ಸದೃಢವಾಗತೊಡಗುತ್ತದೆ. ಒಂದರ ಹಿಂದೆ ಒಂದರಂತೆ ಉತ್ತಮ ಯೋಚನೆಗಳೇ ಮೂಡತೊಡಗುತ್ತದೆ. ಅಯಸ್ಕಾಂತದಂತೆ ನಮ್ಮೊಳಗೆ ಶಕ್ತಿಯ ಪ್ರವಾಹವನ್ನೇ ಹರಿಸಲಾರಂಬಿಸುತ್ತದೆ.

ಅಲೋಚನೆಗಳನ್ನು ಜೋಡಿಸುವ ಬಗೆ
ಆಲೋಚನೆಗಳನ್ನು ಜೋಡಿಸುವ ಕಾರ್ಯ ಹೊರಗಿನಿಂದ ಆಗುವುದಲ್ಲ. ಅದು ನಮ್ಮಿಂದಲೇ ಆಗಬೇಕಾಗಿದೆ. ಆ ಶಕ್ತಿ ಕೂಡ ನಮ್ಮಲ್ಲೇ ಅಡಗಿದೆ. ಒಮ್ಮೆ ಪ್ರಯತ್ನಪಟ್ಟಾಗ ನಂತರ ಎಲ್ಲವೂ ತನ್ನಿಂತಾನೇ ಬದಲಾಗುತ್ತಲೇ ಹೋಗುತ್ತದೆ. ನಮ್ಮೊಳಗೆ ನಾವು ಬದಲಾದಾಗ, ಇಡೀ ಜಗತ್ತಿನಲ್ಲಿರುವ ಉತ್ತಮ ಅಂಶಗಳೇ ಕಣ್ಣಿಗೆ ಬೀಳತೊಡಗುತ್ತದೆ. ಸುತ್ತಮುತ್ತ ಒಳ್ಳೆಯ ವಿಚಾರಗಳೇ ತುಂಬುತ್ತವೆ. ಅಚಾನಕ್ಕಾಗಿ ಒಳ್ಳೆಯದೇನೋ ಘಟಿಸಲಿದೆ. ಬದುಕು ಅತ್ಯಾಕರ್ಷಕ ಹಾಗೂ ಸರಳವಾಗಿದೆ. ಇವೆಲ್ಲವನ್ನೂ ಮನಸ್ಸಿನಲ್ಲಿ ಸ್ಥಾಪಿಸಿಕೊಂಡಾಗ, ಪದೇ ಪದೇ ಚಿತ್ರೀಕರಿಸಿಕೊಂಡಾಗ ಅಲೋಚನೆಯ ಧಾಟಿ ಬದಲಾಗುತ್ತದೆ. ಸಕರಾತ್ಮಕತೆಯೇ ಬದುಕನ್ನು ಸರಿಯಾದ ದಿಕ್ಕಿನೆಡೆಗೆ ಕೊಂಡೊಯ್ಯುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close