About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಕೋಮುವಾದಿ ಶಕ್ತಿಗಳನ್ನು 2019ರ ಚುನಾವಣೆಯಲ್ಲಿ ಸೋಲಿಸಬೇಕು

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮಾಜಿ ಅಧ್ಯಕ್ಷ ಪ್ರೊ. ರವಿ ವರ್ಮಕುಮಾರ್

ತುಮಕೂರು: ದೇಶದಲ್ಲಿ ಬೇರು ಬಿಟ್ಟಿರುವ ಕೋಮುವಾದಿ ಶಕ್ತಿಗಳನ್ನು 2019ರ ಚುನಾವಣೆಯಲ್ಲಿ ಸೋಲಿಸಬೇಕು. ಇಲ್ಲದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮಾಜಿ ಅಧ್ಯಕ್ಷ ಪ್ರೊ.ರವಿ ವರ್ಮಕುಮಾರ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅಭಿನಂದನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರೊ. ಜಿ.ಎಂ.ಎಸ್ 85 ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಕೆ.ಈ.ಸಿದ್ದಯ್ಯ ರಚಿಸಿರುವ ಬತ್ತದ ತಿಳಿನೀರ ಹಾದಿ ಬಿಡುಗಡೆ ಮಾಡಿ ಮಾತನಾಡಿದರು.

ದೇಶದಲ್ಲಿ ಫ್ಯಾಸಿಸ್ಟ್ ಮತ್ತು ಕೋಮುವಾದಿ ಶಕ್ತಿಗಳು ವಿಜೃಂಭಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ  ಮತ್ತು ಅಮಿತ್ ಶಾ ಇಬ್ಬರೇ ಇಡೀ ಕೇಂದ್ರ ಸರ್ಕಾರವನ್ನು ನಿಯಂತ್ರಿಸುತ್ತಿದ್ದಾರೆ. ಸೊಹ್ರಾಬುದ್ದೀನ್ ಹತ್ಯೆ ಪ್ರಕರಣದಲ್ಲಿ ಅಮಿತ್ ಶಾ  ಪ್ರಮುಖ ಆರೋಪಿ. ಆದರೂ ಅವರಿಗೆ ಶಿಕ್ಷೆಯಾಗಿಲ್ಲ. ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರೂ ಕೊಲೆಯಾದರು. ಪ್ರಕರಣದ ಪ್ರಮುಖ ಸಾಕ್ಷಿಗಳು ಹತ್ಯೆಯಾದರು. ಯಾವ ಪ್ರಕರಣದಲ್ಲೂ ಆರೋಪಿಗಳಿಗೆ  ಶಿಕ್ಷೆಯಾಗಲಿಲ್ಲ ಎಂದರು.

ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಮಾತನಾಡಿ, ಜಿ.ಏಂ.ಶ್ರೀನಿವಾಸಯ್ಯ ನಂಬಿದ ನಂಬಿಕೆಯಂತೆ ಬದುಕಿ ತೋರಿಸಿದರು. ಕಷ್ಟದ ಹಾದಿಯಲ್ಲಿ ಬಂದ ಜಿಎಂಎಸ್‌ಗೆ ಸಿನಿಕತನವಿಲ್ಲ. ಹಾಗಾಗೀಯೇ ಅವರ ಇಂದಿಗೂ ನಮಗೆ ಮಾದರಿಯಾಗಿದ್ದಾರೆ. ಅವರ ಅರ್ಹತೆಗೆ ತಕ್ಕ ಗೌರವ ಸಿಗಲಿಲ್ಲ ಎಂದರು.

ನಕ್ಸಲರು ಹೋಗುವ ಹಾದಿಯ ಬಗ್ಗೆ ನಮಗೆ ನಂಬಿಕೆ ಇಲ್ಲ. ಅವರು ಎತ್ತುವ ಪ್ರಶ್ನೆಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಮಾಜದಲ್ಲಿ ಭಯೋತ್ಪಾದನೆ, ನಕ್ಸಲ್ ಜಾತಿ ಹಿಂಸೆ, ಕ್ರೌರ್ಯ ಅಪಾಯಕಾರಿ. ಜಾತಿ ಹಿಂಸೆಯಿಂದ ಹೆಚ್ಚು ಕೊಲೆಗಳು ನಡೆಸಿದಿವೆ. ಹಿಂಸಾಚಾರ ನಡೆದಿದೆ. ಜಾತಿಯ ಹಿಂಸೆಯಲ್ಲಿ ಬಲಿಯಾದವರ ಸಂಖ್ಯೆ ಅತಿ ಹೆಚ್ಚು. ಅದರ ಬಗ್ಗೆ ನಾವು ಮಾತನಾಡುವುದಿಲ್ಲ. ನಿಜವಾಗಿಯೂ ಚರ್ಚೆಯಾಗಬೇಕಾಗಿರುವುದು ಜಾತಿ ಹಿಂಸೆಯ ಪ್ರಶ್ನೆ ಎಂದು ಹೇಳಿದರು.

ಜನಪರ ಚಿಂತಕ ಪ್ರೊ.ಕೆ.ದೊರೈರಾಜ್ ಮಾತನಾಡಿ, ಜ್ಞಾನ, ವಿವೇಕ ಮತ್ತು ಮಾನವೀಯತೆಯ ಪ್ರತೀಕ ಜಿ.ಎಂ.ಎಸ್. ಅವರನ್ನು ಮೇಸ್ಟ್ರು ಅಂತಲೇ ಎಲ್ಲರೂ ಕರೆಯುವುದು. ಅವರಿಂದ ಕಲಿಯಬೇಕಾದುದು ಬಹಳಷ್ಟಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿ.ಎಸ್.ಸೋಮಣ್ಣ, ಬಾ.ಹ.ರಮಾ ಕುಮಾರಿ, ಮಲ್ಲಿಕಾ ಬಸವರಾಜ್, ಬಿ.ಉಮೇಶ್, ಡಾ.ಅರುಂಧತಿ ಇತರರಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close