ನಾಲಗೆ ನಿಯಂತ್ರಣದಲ್ಲಿರಲಿ

Posted In : ಸಂಪಾದಕೀಯ-1

ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೆಲ ರಾಜಕಾರಣಿಗಳ ನಾಲಗೆ ಉದ್ದವಾಗುತ್ತಿದೆ. ಚುನಾವಣಾ ಕಾವು ಹೆಚ್ಚಾಗು ತ್ತಿದ್ದಂತೆ ಇದು ಇನ್ನೂ ಹೆಚ್ಚಾಗಬಹುದು.

ವಿರೋಧಿಗಳನ್ನು ಟೀಕಿಸುವ ಭರದಲ್ಲಿ ಸ್ವಯಂನಿಯಂತ್ರಣ ಕಳೆದುಕೊಳ್ಳು ವುದು ಸರಿಯಲ್ಲ. ಕಟು ಶಬ್ಧಗಳನ್ನು ಬಳಸಿದರೆ ಮಾತ್ರ ಎಲ್ಲರ ಗಮನವನ್ನು ಸೆಳೆಯಬಹುದು ಎಂದುಕೊಂಡಿದ್ದರೆ ಅದು ತಪ್ಪು.  ಯದ್ವಾತದ್ವಾ ಟೀಕಿಸಿದರೆ ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿ, ಮತಗಳಾಗಿ ಪರಿವರ್ತನೆಯಾಗುತ್ತದೆ ಎಂದು ಭಾವಿಸಿದರೆ ಅದು ಮೂರ್ಖತನ. ಪ್ರಜ್ಞಾವಂತ ಮತದಾರರು ಎಲ್ಲವನ್ನೂ ಗಮನಿಸುತ್ತಿರುತ್ತಾರೆ ಎಂಬುದನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಬಾಯಿಗೆ ಬಂದಂತೆ ಬಯ್ದಾಡುತ್ತಿದ್ದರೆ ಇದು ಸಮಾಜಕ್ಕೆ ಎಂತಹ ಸಂದೇಶ ರವಾನಿ ಸುತ್ತದೆ ಎಂಬ ಅರಿವಿರಬೇಕು. ವಿರೋಧಿಗಳ ಟೀಕೆಗೆ ಒಂದಷ್ಟು ದಿವಸ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದುಬಿಟ್ಟರೆ -ಫಲಿತಾಂಶ ಅದ್ಭುತ ವಾಗಿರುತ್ತದೆ. ಅದಕ್ಕೆ ತಾಳ್ಮೆ ಅವಶ್ಯಕ.

ವೈಯಕ್ತಿಕ ವಿಷಯ, ಕುಟುಂಬ ವರ್ಗದವರನ್ನು ಗುರಿಯಾಗಿಟ್ಟುಕೊಂಡು ಟೀಕೆ ಮಾಡುವುದರಿಂದ ಆ ಕ್ಷಣದಲ್ಲಿ ಜತೆಗಿದ್ದವರು ಅಥವಾ ಸಭೆ-ಸಮಾರಂಭಗಳಲ್ಲಿ ಪಾಲ್ಗೊಂಡಿದ್ದ ಬೆಂಬಲಿಗರು ಒಂದಷ್ಟು ಚಪ್ಪಾಳೆ ಹೊಡೆಯಬಹುದು. ಆದರೆ ಇದರಿಂದ ಯಾವುದೇ ದೂರಗಾಮಿ ಪ್ರಯೋಜನ ಉಂಟಾಗುವುದಿಲ್ಲ. ದಶಕಗಳ ಹಿಂದೆಯೂ ರಾಜಕಾರಣಿಗಳು ಟೀಕಿಸುತ್ತಿದ್ದರು. ಆದರೆ ಅದು ಸಭ್ಯತೆಯ ಎಲ್ಲೆ ಮೀರುತ್ತಿರಲಿಲ್ಲ, ಇದನ್ನು ಎಲ್ಲಾ ಪಕ್ಷಗಳೂ ಅಲಿಖಿತ ನಿಯಮದಂತೆ ಪಾಲಿಸಿಕೊಂಡು ಬರುತ್ತಿದ್ದವು. ಆದರೆ ಈಗ ಎಲ್ಲವೂ ಬದಲಾಗಿದೆ. ಎದುರಾಳಿಯ ಜನ್ಮ ಜಾಲಾಡಬೇಕು, ವಾಚಾಮಗೋಚರವಾಗಿ ಟೀಕಿಸಬೇಕೆಂಬುದೇ ಆದ್ಯತೆ ಆಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಒಳ್ಳೆಯ ಬೆಳವಣಿಗೆಯಲ್ಲ.

ಸರಿ ಬೆಸ ಸರಿಯಾಗಿರಲಿ

ರಾಷ್ಟ್ರ ರಾಜಧಾನಿ ದೆಹಲಿಯೀಗ ನಿಜಕ್ಕೂ ದಟ್ಟ ಹೊಗೆಯ ಗೂಡಿನಂತಾಗಿದೆ. ಈ ಪರಿಸ್ಥಿತಿ ಸುಧಾರಿಸುವುದು ದೆಹಲಿ ಸರಕಾರ ಕ್ಕೀಗ ದೊಡ್ಡ ಸವಾಲೆನಿಸಿದೆ. ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್‌ಜಿಟಿ) ನೀಡಿದ್ದ ನೂರು ಸಲಹೆಗಳಲ್ಲಿ ವಾಯುಮಾಲಿನ್ಯ ತಡೆಗೆ ಸರಿ-ಬೆಸ ನೋಂದಣಿ ವಾಹನಗಳ ಸಂಚಾರದ ವ್ಯವಸ್ಥೆ ಜಾರಿ ಮಾಡಲು ನಿರ್ಧರಿಸಿತ್ತು. ಆದರೆ ಶನಿವಾರ ನ್ಯಾಯಪೀಠದ ವಿಚಾರಣೆ ನಡೆದ ನಂತರ ದೆಹಲಿ ಸರಕಾರ ಇದ್ದಕ್ಕಿದ್ದಂತೆ ತನ್ನ ನಿಲುವಿನಿಂದ ಹಿಂದೆ ಸರಿದಿದೆ. ಸೋಮವಾರದಿಂದ ಆರಂಭ ವಾಗಬೇಕಿದ್ದ ಸರಿ-ಬೆಸ ವಾಹನ ಗಳ ಸಂಚಾರ ಮುಂದೂಡಲಾಗಿದೆ.

ಇದು ನಿಜಕ್ಕೂ ಸರಿಯಾದ ಕ್ರಮವಲ್ಲ. ವಾಯುಮಾಲಿನ್ಯ ಇತರ ಸಮಸ್ಯೆಗಳಂತಲ್ಲ, ಸರಕಾರವೇ ಇದರ ಬಗ್ಗೆ ಲಘುವಾಗಿ ವರ್ತಿಸಿ ದರೆ ಜನರ ಜೀವಕ್ಕೆ ಹೊಣೆ ಯಾರು?. ನ್ಯಾಯಪೀಠ ಹೇರಿದ್ದ ಕೆಲ ಷರತ್ತುಗಳ ವಿರುದ್ಧ ಸರಕಾರ ಮೇಲ್ಮನವಿ ಸಲ್ಲಿಸಿ ಅಲ್ಲಿ ಅಂತಿಮವಾಗುವ ನಿರ್ಧಾರದ ಅನುಷ್ಠಾನಕ್ಕೆ ಒಂದಷ್ಟು ಸಮಯ ಹಿಡಿಯುತ್ತದೆ. ಈಗಾಗಲೇ ವಾಯುಮಾಲಿನ್ಯವು ದೆಹಲಿಯ ಗಡಿ ಮೀರಿ ಹರಿಯಾಣದ ಗುರುಗ್ರಾಮ, ಉತ್ತರ ಪ್ರದೇಶದ ವಾರಣಾಸಿ, ಲಕ್ನೋ, ಕಾನ್ಪುರದವರೆಗೂ ಹರಿಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಉತ್ತರ ಭಾರತ ಸಂಪೂರ್ಣವಾಗಿ ವಿಷಾನಲಿದ ಛೇಂಬರ್ ಆದರೂ ಅಚ್ಚರಿಯಿಲ್ಲ.

Leave a Reply

Your email address will not be published. Required fields are marked *

10 + 4 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top