ವಿಶ್ವವಾಣಿ

ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್: 68 ರನ್‌ಗೆ ಒಂದು ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌

Cricket - England v India - Third Test - Trent Bridge, Nottingham, Britain - August 19, 2018 India's Virat Kohli and team mates during the match Action Images via Reuters/Paul Childs

ಓವಲ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನ ಉಭಯ ತಂಡಗಳು ದಿಟ್ಟ ಹೋರಾಟ ನೀಡುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದಿರುವ ಇಂಗ್ಲೆಂಡ್ ಮೊದಲ ವಿಕೆಟ್ ಕಳೆದುಕೊಂಡರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ.

ವಿದಾಯದ ಪಂದ್ಯ ಆಡುತ್ತಿರುವ ಅಲಿಸ್ಟೈರ್ ಕುಕ್ ಅಂತಿಮ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಆದರೆ ಮತ್ತೊರ್ವ ಆರಂಭಿಕ ಕೆಟನ್ ಜೆನ್ನಿಂಗ್ಸ್ 23 ರನ್ ಸಿಡಿಸಿ ಔಟಾದರು.

ಬ್ಯಾಟಿಂಗ್ ಆರ್ಡರ್‌ನಲ್ಲಿ ಬಡ್ತಿ ಪಡೆದು ಕಣಕ್ಕಿಳಿದ ಮೊಯಿನ್ ಹಾಗೂ ಅಲಿಸ್ಟೈರ್ ಕುಕ್ ತಂಡಕ್ಕೆ ಆಸರೆಯಾಗಿದ್ದಾರೆ. ಭೋಜನವಿರಾಮದ ವೇಳೆಗೆ ಇಂಗ್ಲೆಂಡ್ 1 ವಿಕೆಟ್ ನಷ್ಟಕ್ಕೆ 68 ರನ್ ಸಿಡಿಸಿದೆ. ಭಾರತದ ಪರ ರವೀಂದ್ರ ಜಡೇಜಾ ಒಂದು ವಿಕೆಟ್ ಕಬಳಿಸಿದ್ದಾರೆ.