2ನೇ ಹಂತದ ಸಮರಕ್ಕೆ ಕ್ಷಣಗಣನೆ; ಸಕಲ ಸಿದ್ಧತೆ

Posted In : ಬೆಂಗಳೂರು, ರಾಜ್ಯ

ಮಂಡ್ಯ: ಜಿಲ್ಲೆಯ 41 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ 176 ಮಂದಿ ಹಾಗೂ 155 ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ 510 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಡ್ಯ ತಾಲೂಕಿನ 7 ಜಿ.ಪಂ. ಕ್ಷೇತ್ರಗಳಿಗೆ 33 ಮಂದಿ, 28 ತಾ.ಪಂ. ಕ್ಷೇತ್ರಗಳಿಗೆ 93 ಮಂದಿ ಅಖಾಡದಲ್ಲಿದ್ದಾರೆ. ಮದ್ದೂರು ತಾಲೂಕಿನ 7 ಜಿ.ಪಂ. ಕ್ಷೇತ್ರಗಳಿಗೆ 28 ಮತ್ತು 27 ತಾ.ಪಂ. ಕ್ಷೇತ್ರಗಳಿಗೆ 85 ಮಂದಿ ಕಣದಲ್ಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 12,51,307 ಮತದಾರರಿದ್ದು, ಇವರಲ್ಲಿ 6,28,419 ಪುರುಷರು ಹಾಗೂ 6,22,871 ಮಹಿಳೆಯರು ಹಾಗೂ 17 ಮಂದಿ ಇತರೆ ಮತದಾರರಿದ್ದಾರೆ. 

ವಿಜಯಪುರ: ಎರಡನೇ ಹಂತದಲ್ಲಿ ನಡೆಯುತ್ತಿರುವ ವಿಜಯಪುರ ಜಿಲ್ಲೆಯ 157 ತಾಲೂಕು ಪಂಚಾಯಿತಿ ಮತ್ತು 42 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ಮತದಾರರ ಅನುಕೂಲಕ್ಕಾಗಿ 1405 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.  

ಬೀದರ್‌: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಬೀದರ್‌ ಜಿಲ್ಲಾಡಳಿತವೂ ಎಲ್ಲ ಸಿದ್ಧತೆಯನ್ನ ಮಾಡಿಕೊಂಡಿದೆ. ಬೀದರ್ ಎರಡು ಹೊರ ರಾಜ್ಯಗಳಿಗೆ ಹೊಂದಿಕೊಂಡಿರುವ ಜಿಲ್ಲೆಯಾಗಿರುವುದರಿಂದ ಮರಾಠಿ ಮತ್ತು ಉರ್ದು ಭಾಷೆಯಲ್ಲಿ ಮತದಾರ ಪಟ್ಟಿಯನ್ನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಹಾಸನ: ಜಿಲ್ಲೆಯ 40 ಜಿಲ್ಲಾ ಹಾಗೂ 153 ತಾಲೂಕು ಪಂಚಾಯತ್ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣೆ ಸಿಬ್ಬಂದಿಗೆ ಮತಯಂತ್ರ ನೀಡಿ ಮತಗಟ್ಟೆಗಳಿಗೆ ರವಾನಿಸಲಾಗಿದೆ. ಜಲ್ಲೆಯಲ್ಲಿ ಒಟ್ಟು 1738 ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 334 ಅತಿ ಸೂಕ್ಷ್ಮ ಹಾಗೂ 465 ಸೂಕ್ಷ್ಮ ಮತ್ತು 934 ಮತಗಟ್ಟೆಗಳನ್ನು ಸಾಮಾನ್ಯ ಎಂದು ಗುರುತಿಸಲಾಗಿದೆ. 

ಮೈಸೂರು: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣಾ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 1,794 ಮತಗಟ್ಟೆ ನಿರ್ವಹಣೆಗೆ 9,845 ಚುನಾವಾಣಾಧಿಕಾರಿಗಳು ಕರ್ತವ್ಯಕ್ಕೆ, ಸೇರಿಕೊಂಡಿದ್ದು ಸೂಕ್ತ ಬಂದೋಬಸ್ತ್ ಮಾಡಲಾಗಿದೆ.  ಜಿಲ್ಲೆಯ 1,794 ಮತಗಟ್ಟೆಗೆ 259 ಕೆ.ಎಸ್‍ಆರ್.ಟಿಸಿ ಬಸ್ ಗಳಲ್ಲಿ ಅಧಿಕಾರಿಗಳು ತೆರಳಿದ್ದು, ಸುಗಮ ಹಾಗೂ ಮುಕ್ತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇನ್ನು ಸಿ.ಎಂ ಸಿದ್ದರಾಮಯ್ಯ ತಮ್ಮ ಹುಟ್ಟೂರಾದ ಸಿದ್ದರಾಮನಹುಂಡಿಯಲ್ಲಿ ಇಂದು ಮಧ್ಯಾಹ್ನ ಸಮಯದಲ್ಲಿ ಮತ ಚಲಾಯಿಸಲಿದ್ದಾರೆ.   

ರಾಯಚೂರು: ಜಿಲ್ಲಾ ಮತ್ತು ತಾಲೂಕ್ ಪಂಚಾಯತ್ ಚುನಾವಣೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ 38 ಜಿ. ಪಂ. ಹಾಗೂ 142 ತಾ.ಪಂ. ಕ್ಷೇತ್ರಗಳಿಗೆ 1,169 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾ ಮತ್ತು ತಾಲೂಕ್ ಪಂಚಾಯತಿಗೆ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದ್ದು, ಒಟ್ಟು 10,63,460 ಜನ ಮತದಾರರಲ್ಲಿ 5,27,615 ಪುರುಷರು, 5,35,673 ಮಹಿಳೆಯರು, 172 ಇತರ ಮತದಾರರಿದ್ದಾರೆ. 

 

Leave a Reply

Your email address will not be published. Required fields are marked *

four × four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top