About Us Advertise with us Be a Reporter E-Paper

Breaking NewsUncategorizedದೇಶಪ್ರಚಲಿತ
Trending

2007ರ ಹೈದರಾಬಾದ್ ಅವಳಿ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ತಪ್ಪಿತಸ್ಥರು

ಹೈದರಾಬಾದ್: 2007ರ ಅವಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ತಪ್ಪಿತಸ್ಥರೆಂದು ನಾಂಪಲ್ಲಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಈ ಸ್ಫೋಟ ಪ್ರಕರಣದಲ್ಲಿ 44 ಮಂದಿ ಮೃತಪಟ್ಟಿದ್ದು, 68 ಮಂದಿ ಗಾಯಗೊಂಡಿದ್ದರು.

ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿರುವ ಕೋರ್ಟ್ ಮೊಹಮ್ಮದ್ ಅಕ್ಬರ್ ಇಸ್ಮಾಯಿಲ್ ಚೌಧರಿ ಹಾಗೂ ಅನೀಕ್ ಶಫೀಖ್ ಸಯೀದ್ ನನ್ನು ತಪ್ಪಿತಸ್ಥರೆಂದು ತಿಳಿಸಿದ್ದು, ಇನ್ನುಳಿದವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

2007 ರ ಆಗಸ್ಟ್ 25 ರಂದು ಜನಪ್ರಿಯ ಉಪಾಹಾರ ಗೋಕುಲ್ ಚಾಟ್‍ನಲ್ಲಿ ಬಾಂಬ್  ಸ್ಫೋಟದಲ್ಲಿ 32 ಜನರ ಸಾವಿಗೆ ಕಾರಣವಾದವು ಮತ್ತು 47 ಮಂದಿ ಗಾಯಗೊಂಡಿದ್ದರು. ಇನ್ನೊಂದು ಏಕಕಾಲದಲ್ಲಿ ಲುಂಬಿನಿ ಪಾರ್ಕ್ ಬಳಿಯ ಓಪನ್ ಏರ್ ಥಿಯೇಟರ್ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ 12 ಮಂದಿ ಮೃತಪಟ್ಟು, 21 ಮಂದಿ ಗಾಯಗೊಂಡಿದ್ದರು. ಅಲ್ಲದೆ ಅದೇ ದಿನ ದಿಲ್ ಸುಕ್‍ನಗರದಲ್ಲಿ ಕಾಲು ಸೇತುವೆ ಮೇಲೆ ಜೀವಂತ ಬಾಂಬ್ ಪತ್ತೆಯಾಗಿತ್ತು.

ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ತೆಲಂಗಾಣ ಪೊಲೀಸರು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಐವರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಐವರೂ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣದಲ್ಲಿ ಇದೀಗ ತಪ್ಪಿತಸ್ಥನಾಗಿರುವ ಅನೀಕ್ ಶಫೀಕ್ ಸಯೀದ್, ರಿಯಾಜ್ ಭಟ್ಕಳ್ ಹಾಗೂ ಇಸ್ಮಾಯಿಲ್ ಚೌಧರಿ ಮೂವರು ಸೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close