About Us Advertise with us Be a Reporter E-Paper

Breaking Newsದೇಶ
Trending

ಗೋವು ರಾಷ್ಟ್ರಮಾತೆ ಎಂದು ಮಸೂದೆ ಹೊರಡಿಸಿದ ಉತ್ತರಾಖಂಡ ಸರಕಾರ

ಡೆಹ್ರಾಡೂನ್: ಗೋವನ್ನು ರಾಷ್ಟ್ರಮಾತೆ ಎಂದು ಉತ್ತರಾಖಂಡ ಸರಕಾರ ಮಸೂದೆ ಹೊರಡಿಸಿದೆ. ರಾಜ್ಯ ಸಂಪುಟದಲ್ಲಿ ‘ರಾಷ್ಟ್ರ ಮಾತೆ ಗೋವು’ ಎಂಬ ನಿರ್ಣಯವನ್ನು ಹೊರಡಿಸಲಾಗಿದ್ದು, ಇದನ್ನು ಸಮ್ಮತಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದೆ.

ಉತ್ತರಾಖಂಡ ವಿಧಾನಸಭೆಯಲ್ಲಿ ಪಶು ಸಂಗೋಪನಾ ಸಚಿವೆ ರೇಖಾ ಆರ್ಯ ಅವರು ರಾಷ್ಟ್ರಮಾತೆ ಗೋವು ಎಂದು ಪರಿಗಣಿಸುವ ನಿರ್ಣಯವನ್ನು ಮಂಡನೆ ಮಾಡಿದರು. ಗೋವುಗಳ ಪ್ರಾಮುಖ್ಯತೆ ಏನು ಎಂಬುದನ್ನು ಅರಿತುಕೊಳ್ಳಬೇಕು. ಗೋವುಗಳ ಮೂತ್ರವನ್ನು ಔಷಧಿಯಾಗಿ ಉಪಯೋಗಿಸಲಾಗುತ್ತೆ. ಹಸುವಿನ ಹಾಲು ತಾಯಿಯ ಬಳಿಕ ನವಜಾತ ಶಿಶುವಿಗೆ ಉತ್ತಮ ಎಂದು ವೈಜ್ಞಾನಿಕವಾಗಿ ಪರಿಗಣಿಸಲಾಗಿದೆ ಎಂದು ಆರ್ಯ ವಿವರಿಸಿದರು.

ಹಸುವಿಗೆ ರಾಷ್ಟ್ರಮಾತಾ ಸ್ಥಾನಮಾನವನ್ನು ನೀಡುವ ಮೂಲಕ ದೇಶದಾದ್ಯಂತ ಹಸು ಸಂರಕ್ಷಣೆಯ ಪ್ರಯತ್ನಗಳು ಮತ್ತಷ್ಟು ಬಲಗೊಳ್ಳುತ್ತೆ ಎಂದು ರೇಖಾ ಆರ್ಯಾ ತಿಳಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close