About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯಲೈಫ್ ಸ್ಟೈಲ್

ಚಿತ್ರಕಲಾ ಪರಿಷತ್‌ನಲ್ಲಿ ಕರಕುಶಲಗಳ ‘ಚಿತ್ತಾರ’ ನಾಳೆಯಿಂದ

ಬೆಂಗಳೂರು: ಕರ್ನಾಟ ಚಿತ್ರಕಲಾ ಪರಿಷತ್‍‍ನಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಟವು ‘ಚಿತ್ತಾರ’ ಹೆಸರಿನಲ್ಲಿ ಶಾಪಿಂಗ್ ಬಜಾರ್‍‍ನ್ನು ಶುಕ್ರವಾರದಿಂದ ಆರಂಭವಾಗಲಿದೆ.

ಇಲ್ಲಿನ ಚಿತ್ರಕಲಾ ಪರಿಷತ್‍‍ನಲ್ಲಿ ಈ ಮೇಳ ಏರ್ಪಡಿಸಿದ್ದು, ಆಗಸ್ಟ್ 3 ರಿಂದ 12ರವರೆಗೆ ಪ್ರತೀ ದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ನಡೆಯಲಿದೆ. ಸುಮಾರು 100ಕ್ಕೂ ಅಧಿಕ ಮಳಿಗೆಗಳುಮಳಿಗೆಗಳಿವೆ. ಸ್ಥಳೀಯವಾಗಿ ಕರಕುಶಲಕರ್ಮಿಗಳು ತಯಾರಿಸಿರುವ ಅಪರೂಪದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.

ಈ ಮೇಳದಲ್ಲಿ ರೀಟೆಲ್ ದರದಲ್ಲಿ ಉತ್ಪನ್ನಗಳು ದೊರೆಯಲಿದೆ. ಟೆರ್ರಾಕೋಟ್ ಗೃಹಾಲಂಕಾರಿಕ ವಸ್ತುಗಳು, ಲೋಹದಿಂದ ತಯಾರಿಸಿದ ಕರಕುಶಲ ವಸ್ತುಗಳು, ಫ್ಲವರ್ ವಾಸ್‍‍ಗಳು, ಪುರಾತನ ಕಾಲದ ಪಿಠೋಪಕರಣಗಳು, ಫೈಬರ್
ಬಾಸ್ಕೆಟ್‍‍ಗಳು, ಅಸ್ಸಾಮ್‌ನ ಕಪ್ಪು ಮಡಕೆಗಳು ಹಾಗೂ ಬಣ್ಣಬಣ್ಣದ ಹೂ ಕುಂಡಳು ಮೇಳದಲ್ಲಿ ದೊರೆಯಲಿವೆ.

ಕೈಮಗ್ಗದ ಮೂಲಕ ತಯಾರಿಸಿರುವ ಸೀರೆ, ಕುರ್ತಾ, ಆಭರಣ, ಫ್ಯಾಶನ್‍‍ ಆಕ್ಸೆಸರಿಗಳು ದೊರೆಯಲಿದೆ. ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಕಾರ್ಪೆಟ್‍‍, ಪೇಂಟಿಂಗ್‍‍, ಸೆರಾಮಿಕ್‍‍ ಮಡಕೆ, ಸಾವಯವ ಉತ್ಪನ್ನಗಳು, ಅಲಂಕಾರಕ ವಸ್ತುಗಳು ದೊರೆಯಲಿವೆ.

Tags

Related Articles

Leave a Reply

Your email address will not be published. Required fields are marked *

Language
Close