ಬೆಂಗಳೂರು: ಕರ್ನಾಟ ಚಿತ್ರಕಲಾ ಪರಿಷತ್ನಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಟವು ‘ಚಿತ್ತಾರ’ ಹೆಸರಿನಲ್ಲಿ ಶಾಪಿಂಗ್ ಬಜಾರ್ನ್ನು ಶುಕ್ರವಾರದಿಂದ ಆರಂಭವಾಗಲಿದೆ.
ಈ ಮೇಳದಲ್ಲಿ ರೀಟೆಲ್ ದರದಲ್ಲಿ ಉತ್ಪನ್ನಗಳು ದೊರೆಯಲಿದೆ. ಟೆರ್ರಾಕೋಟ್ ಗೃಹಾಲಂಕಾರಿಕ ವಸ್ತುಗಳು, ಲೋಹದಿಂದ ತಯಾರಿಸಿದ ಕರಕುಶಲ ವಸ್ತುಗಳು, ಫ್ಲವರ್ ವಾಸ್ಗಳು, ಪುರಾತನ ಕಾಲದ ಪಿಠೋಪಕರಣಗಳು, ಫೈಬರ್
ಬಾಸ್ಕೆಟ್ಗಳು, ಅಸ್ಸಾಮ್ನ ಕಪ್ಪು ಮಡಕೆಗಳು ಹಾಗೂ ಬಣ್ಣಬಣ್ಣದ ಹೂ ಕುಂಡಳು ಮೇಳದಲ್ಲಿ ದೊರೆಯಲಿವೆ.
ಕೈಮಗ್ಗದ ಮೂಲಕ ತಯಾರಿಸಿರುವ ಸೀರೆ, ಕುರ್ತಾ, ಆಭರಣ, ಫ್ಯಾಶನ್ ಆಕ್ಸೆಸರಿಗಳು ದೊರೆಯಲಿದೆ. ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಕಾರ್ಪೆಟ್, ಪೇಂಟಿಂಗ್, ಸೆರಾಮಿಕ್ ಮಡಕೆ, ಸಾವಯವ ಉತ್ಪನ್ನಗಳು, ಅಲಂಕಾರಕ ವಸ್ತುಗಳು ದೊರೆಯಲಿವೆ.