About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ
Trending

ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಮುನಾಫ್ ಪಟೇಲ್

ಮುಂಬೈ: ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗಿ ಮುನಾಫ್ ಪಟೇಲ್ ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.

ಮುನಾಫ್ ಪಟೇಲ್ 2011ರ ವಿಶ್ವಕಪ್ ತಂಡದಲ್ಲಿ ಆಡಿದ್ದರು. 2003 ರಲ್ಲಿ ರಾಜ್‍ಕೋಟ್‍ನಲ್ಲಿ ನಡೆದ ಟೀಂ ಇಂಡಿಯಾ ಎ ತಂಡದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮುನಾಫ್ ಪಟೇಲ್ ಆಡಿದ್ದರು. 2006ರ ಮಾರ್ಚ್ ನಲ್ಲಿ ಆಫ್ರಿಕಾದ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟಿದ್ದರು. ಬಳಿಕ ಏಕದಿನ ಪಂದ್ಯದಲ್ಲೂ ಆಡಿದರು.

ಮುನಾಫ್ ಪಟೇಲ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಗಾಯದ ಸಮಸ್ಯೆಯಿಂದಲೇ ಹೆಚ್ಚಾಗಿ ತಂಡದಿಂದ ಹೊರಗುಳಿದಿದ್ದರು. ಇದುವರೆಗೆ 13 ಟೆಸ್ಟ್, 70 ಏಕದಿನ ಹಾಗೂ 3 ಟಿ-20 ಪಂದ್ಯಗಳನ್ನು ಆಡಿದ್ದಾರೆ. “ನಿವೃತ್ತಿ ಘೋಷಣೆ ಮಾಡಿರುವ ಬಗ್ಗೆ ನನಗೆ ವಿಷಾದ ಇಲ್ಲ. ಏಕೆಂದರೆ ನನ್ನೊಂದಿಗೆ ಆಡಿದ್ದ ಧೋನಿ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಈಗಾಗಲೇ ನಿವೃತ್ತಿ ನೀಡಿದ್ದಾರೆ. ಎಲ್ಲಾ ಆಟಗಾರರು ವೃತ್ತಿ ಜೀವನಕ್ಕೆ ಒಂದಲ್ಲಾ ಒಂದು ದಿನ ನಿವೃತ್ತಿ ಹೇಳಬೇಕಾಗುತ್ತದೆ” ಎಂದು ಹೇಳಿದ್ದಾರೆ. “2011ರ ವಿಶ್ವಕಪ್ ತಂಡದ ಭಾಗವಾಗಿದ್ದೇ ಎಂಬುವುದು ನನಗೆ ಹೆಮ್ಮೆಯ ಸಂಗತಿ” ಎಂದು ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close