Drugs Case: ಮಾದಕ ಜಾಲ ನಡೆಸಲು ನಾಲ್ಕಂತಸ್ತಿನ ಮನೆಯೇ ಅಡ್ಡ; ಬಯಲಾಯ್ತು ʼಡ್ರಗ್ಸ್ ರಾಣಿʼ ರಹಸ್ಯ
ವಾಯುವ್ಯ ದೆಹಲಿಯ (Delhi) ಸುಲ್ತಾನಪುರಿಯಲ್ಲಿ ಮಾದಕದ್ರವ್ಯದ ಜಾಲವನ್ನು ನಡೆಸುತ್ತಿದ್ದ ಡ್ರಗ್ಸ್ ರಾಣಿ ಎಂದೇ ಕರೆಯಲ್ಪಡುತ್ತಿದ್ದ ಕುಸುಮ್ ಮನೆ ಮೇಲೆ ದಾಳಿ ನಡೆಸಿ ಸುಮಾರು 4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.


ನವದೆಹಲಿ: ವಾಯುವ್ಯ ದೆಹಲಿಯ ಸುಲ್ತಾನಪುರಿಯಲ್ಲಿ ಮಾದಕದ್ರವ್ಯದ ಜಾಲವನ್ನು ನಡೆಸುತ್ತಿದ್ದ ಡ್ರಗ್ಸ್ ರಾಣಿ ಎಂದೇ ಕರೆಯಲ್ಪಡುತ್ತಿದ್ದ (Drugs Case) ಕುಸುಮ್ ಮನೆ ಮೇಲೆ ದಾಳಿ ನಡೆಸಿ ಸುಮಾರು 4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಲ್ತಾನಪುರಿಯ "ಮಾದಕವಸ್ತು ರಾಣಿ" ಎಂದು ಅಧಿಕಾರಿಗಳಿಂದ ಕರೆಯಲ್ಪಡುವ ಕುಸುಮ್ ಪ್ರಸ್ತುತ ನಾಪತ್ತೆಯಾಗಿದ್ದಾಳೆ. ಮಾರ್ಚ್‌ನಿಂದ ಆಕೆಯ ಸುಳಿವು ಪತ್ತೆಯಾಗಿಲ್ಲ. ಆಕೆಯ ನಿವಾಸದ ಮೇಲೆ ದಾಳಿ ನಡೆಸಿ ಆಕೆಯ ಮಗನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
ವಶ ಪಡಿಸಿಕೊಂಡಿದ್ದ ಆಸ್ತಿಯಲ್ಲಿ ಏಳು ಸುಲ್ತಾನಪುರಿಯಲ್ಲಿಯೇ ಮತ್ತು ಒಂದು ರೋಹಿಣಿಯ ಸೆಕ್ಟರ್ 24 ರಲ್ಲಿವೆ. ಇವೆಲ್ಲವೂ ದೊಡ್ಡ ಪ್ರಮಾಣದ ಮಾದಕವಸ್ತು ಕಳ್ಳಸಾಗಣೆಯಿಂದ ಗಳಿಸಿದ ಅಕ್ರಮ ಹಣದಿಂದ ಸಂಪಾದಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕುಸುಮ್ ಮೇಲೆ ಈಗಾಗಲೇ NDPS ಕಾಯ್ದೆಯಡಿ 12 ಪ್ರಕರಣಗಳು ದಾಖಲಾಗಿವೆ. ಕುಸುಮ್ ಅವರ ಮಗ ಅಮಿತ್ ಬಂಧನದ ಸಮಯದಲ್ಲಿ ಅಧಿಕಾರಿಗಳು 550 ಹೆರಾಯಿನ್ ಪ್ಯಾಕೆಟ್‌ಗಳು, ಮಾದಕವಸ್ತು ನೋವು ನಿವಾರಕವಾಗಿ ದುರುಪಯೋಗಪಡಿಸಿಕೊಳ್ಳುವ ಟ್ರಾಮಾಡಾಲ್ ಮಾತ್ರೆಗಳು ಹಾಗೂ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯನ್ನು ವಶಪಡಿಸಿಕೊಂಡಿದ್ದರು.
ಇದಾದ ನಂತರ ಕುಸುಮ್ ಇಬ್ಬರು ಹೆಣ್ಣುಮಕ್ಕಳ ಬ್ಯಾಂಕ್ ವಹಿವಾಟುಗಳನ್ನು ತನಿಖೆ ಮಾಡಲಾಯಿತು. ಕಳೆದ 18 ತಿಂಗಳುಗಳಲ್ಲಿ ಸುಮಾರು 2 ಕೋಟಿ ರೂ.ಗಳ ಠೇವಣಿಗಳು ಪತ್ತೆಯಾಗಿವೆ. ಈ ವರ್ಷದ ಮೊದಲಾರ್ಧದಲ್ಲಿಯೇ, ಹೆಣ್ಣುಮಕ್ಕಳಿಗೆ ಸಂಬಂಧಿಸಿದ ವಿವಿಧ ಖಾತೆಗಳಿಗೆ ಸುಮಾರು 70 ಲಕ್ಷ ರೂ.ಗಳನ್ನು ಜಮಾ ಮಾಡಲಾಗಿದೆ. ಈ ನಿಧಿಯ ಮೂಲಗಳ ಬಗ್ಗೆ ಅವರಿಬ್ಬರು ಮಾಹಿತಿಯನ್ನು ನೀಡಿಲ್ಲ.
ಈ ಸುದ್ದಿಯನ್ನೂ ಓದಿ: Anti-Drug Day: "ಮಾದಕ ವಸ್ತುಗಳಿಂದ ದೂರವಿರಿ ನಿಮ್ಮ ಜೀವನ ಕಾಪಾಡಿಕೊಳ್ಳಿ" ; ಶಿರಸಿಯಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ
ಸುಲ್ತಾನಪುರಿಯಲ್ಲಿರುವ ಕಟ್ಟಡದಲ್ಲಿ ಈಕೆ ತನ್ನ ಜಾಲವನ್ನು ನಿರ್ವಹಿಸಲಾಗುತ್ತಿತ್ತು. ದೆಹಲಿ ಪೊಲೀಸರು ಕಟ್ಟಡದ ಬಗ್ಗೆ ವಿವರಗಳೊಂದಿಗೆ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಗೆ ಔಪಚಾರಿಕವಾಗಿ ಪತ್ರ ಬರೆದಿದ್ದಾರೆ. ಕಟ್ಟಡದ ಸ್ಥಿತಿ ಮತ್ತು ಅನುಮೋದನೆಗಳ ಬಗ್ಗೆ ಎಂಸಿಡಿ ಇಲಾಖಾ ಪರಿಶೀಲನೆ ಶೀಘ್ರದಲ್ಲೇ ನಡೆಯುವ ನಿರೀಕ್ಷೆಯಿದೆ. ಸುಲ್ತಾನಪುರಿಯಂತಹ ಜನನಿಬಿಡ ಕಾರ್ಮಿಕ ವರ್ಗದ ಪ್ರದೇಶದಲ್ಲಿ, ಇಕ್ಕಟ್ಟಾದ ಒಂದು ಕೋಣೆಯ ಮನೆಗಳು ಸಾಮಾನ್ಯವಾಗಿದೆ. ಈ ಆಸ್ತಿ ಗಾತ್ರ ಮತ್ತು ಪ್ರಮಾಣದಲ್ಲಿ ಎದ್ದು ಕಾಣುತ್ತದೆ. ದೆಹಲಿ ಮಹಾನಗರ ಪಾಲಿಕೆಗೆ ಪೊಲೀಸರು ಪತ್ರ ಬರೆದಿದ್ದು, ಈ ನಿವಾಸವು ಕಟ್ಟಡ ನಿಯಮಗಳಿಗೆ ವಿರುದ್ಧವಾಗಿರುವುದರಿಂದ ಅದನ್ನು ಕೆಡವುವಂತೆ ಕೋರಿದ್ದಾರೆ.