About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಹೋಟೆಲ್ ಸಿಬ್ಬಂದಿಗಳಿಗೆ 16ಲಕ್ಷ ಟಿಪ್ಸ್‌ ನೀಡಿದ ರೊನಾಲ್ಡೋ

ಗ್ರೀಸ್‌: ತನ್ನ ಆಟ ಹಾಗೂ ಗುಣಗಳಿಂದ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ  ಪೋರ್ಚುಗಲ್‌ ಪುಟ್ಬಾಲ್ ತಂಡ ನಾಯಕ ಹಾಗೂ ಫುಟ್ಬಾಲ್‌ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ತಾನು ತಂಗಿದ್ದ ಹೋಟೆಲ್‌ ಸಿಬ್ಬಂದಿಗಳಿಗೆ ಅಚ್ಚರಿ ನೀಡಿ ಸುದ್ದಿಯಾಗಿದ್ದಾರೆ.

ಫಿಫಾ ಫುಟ್ಬಾಲ್‌ ವಿಶ್ವಕಪ್‌ನಿಂದ ಹೊರನಡೆದ ಬಳಿಕ ತನ್ನ ಕುಟುಂಬದವರೊಂದಿಗೆ ಗ್ರೀಸ್‌ಗೆ ತೆರಳಿದ್ದ ಮಾಜಿ ರಿಯಲ್‌ ಮ್ಯಾಡ್ರಿಡ್‌ ಆಟಗಾರ ಗ್ರೀಕ್‌ ಲಕ್ಸುರಿ ರೆಸಾರ್ಟ್‌ನಲ್ಲಿ ತಂಗಿ, ಅಲ್ಲಿನ ಸಿಬ್ಬಂದಿಗಳಿಗೆ ಸುಮಾರು 17,850ಪೌಂಡ್‌ ಹಣವನ್ನು ಟಿಪ್ಸ್‌ ಆಗಿ ನೀಡಿ ಅಲ್ಲಿನ ಸ್ಥಳೀಯ ಪತ್ರಿಕೆಯಲ್ಲಿ ಸುದ್ದಿಯಾಗಿದ್ದಾರೆ. ಈ ಹಣ ಭಾರತೀಯ ರೂಪಾಯಿಗಳಲ್ಲಿ ಸುಮಾರು 16 ಲಕ್ಷ ರುಗಳಾಗುತ್ತದೆ.

ಆ ಹೋಟೆಲ್‌ ಸಿಬ್ಬಂದಿಗಳ ಅತಿಥ್ಯವನ್ನು ಮೆಚ್ಚಿದ ರೊನಾಲ್ಡೋ ಅಲ್ಲಿನ ಎಲ್ಲ ಸಿಬ್ಬಂದಿಗಳಿಗೆ ಸೇರಿ ಬಹುದೊಡ್ಡ ಉಡುಗೊರೆ ನೀಡಿದ್ದಾರೆ. ಅಲ್ಲದ ಹೊಟೇಲ್‌ ವ್ಯವಸ್ಥಾಪಕರಲ್ಲಿ ಎಲ್ಲ ಸಿಬ್ಬಂದಿಗಳಿಗೆ ಈ ಹಣವನ್ನು ಹಂಚುವಂತೆ ತಿಳಿಸಿದ್ದಾರೆ. ಸೆಲೆಬ್ರಿಟಿಯಾಗಿ ಯಾವುದೇ ಅಹಂವಿಲ್ಲದಿರುವ ರೊನಾಲ್ಡೋ ಫಿಫಾ ವಿಶ್ವಕಪ್ ಟೂರ್ನಿಯಲ್ಲಿಯೂ ಮಾನವೀಯತೆ ಮೆರೆದು ಎಲ್ಲರ ಗಮನಸೆಳೆದಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close