About Us Advertise with us Be a Reporter E-Paper

ಅಂಕಣಗಳು

ಗೊಂದಲಕ್ಕೂ ಮಾನದಂಡ

ಒಂದು ಸಮಸ್ಯೆ ಸರಿ  ಅನ್ನುವಷ್ಟೊತ್ತಿಗೆ ಮತ್ತೊಂದು ಶುರುವಾಗುವುದು ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಜನ್ಮಕ್ಕಂಟಿದ ಶಾಪ ಎಂದು ಕಾಣುತ್ತಿದೆ. ಮುಂದಿನ ಲೋಕಸಭೆ ಚುನಾವಣೆ ಮೈತ್ರಿ ಬಗ್ಗೆ ಜೆಡಿಎಸ್ ಒಂದು ಮಾತಾಡಿದ್ದರೆ, ಕಾಂಗ್ರೆಸ್‌ನ ನಾನಾ ಮುಖಂಡರು ನಾನಾ ರೀತಿಯ ಹೇಳಿಕೆ ಕೊಟ್ಟಿದ್ದು ಗೊಂದಲವನ್ನು ಹಾಗೇ ಚಾಲ್ತಿಯಲ್ಲಿಟ್ಟಿದೆ. ಈ ಮಧ್ಯೆ ಧುತ್ತೆಂದು ಎದುರಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ನಿಜ ಬಣ್ಣವನ್ನು ಬಯಲು ಮಾಡುವ ಪ್ರಯೋಗ ಶಾಲೆಯಂತೆ ಕಾಣುತ್ತಿದೆ. ಇದೇ  ಕ್ಕೆ ಚುನಾವಣೆ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಬಾರದು, ಇದರಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಮಂತ್ರಿಗಳು ಹಾಗೂ ಶಾಸಕರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತಂದಿದ್ದಾರೆ. ಜತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ವರ್ಗಾವಣೆ ಮತ್ತಿತರ ಆಡಳಿತಾತ್ಮಕ ವಿಚಾರದಲ್ಲಿ  ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಸಮನ್ವಯ ಸಮಿತಿಯನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ ಎಂದೆಲ್ಲ ವರಾತ ತೆಗೆದಿದ್ದಾರೆ. ಸಿದ್ದರಾಮಯ್ಯನವರು ಕೂಡ ಗೌಡರ ಕುಟುಂಬದ ಆಟ ತಮಗೇನೂ  ಎಂಬರ್ಥದ ಮಾತುಗಳನ್ನಾಡಿದ್ದಾರೆ. ಇದು ಸರಕಾರದ ಮುಂದಿನ ದಿನಗಳ ಬಗ್ಗೆ ಒಂದಷ್ಟು ಕುತೂಹಲ ಮೂಡಿಸಿದೆ. ಸರಕಾರ ಎಂದ ಮೇಲೆ ಇವೆಲ್ಲ ಇದ್ದಿದ್ದೇ ಎಂದು ಸುಮ್ಮನಿರಬಹುದಾದರೂ ಮನೆ ಬಾಗಿಲಿ

ಗೆ ಬಂದು ನಿಂತಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಮಿತ್ರ ಪಕ್ಷಗಳ ಕಾರ್ಯಕರ್ತರ ಇಂಗಿತ, ವರಸೆಗಳನ್ನು ತೆರೆದಿಡುತ್ತದೆ. ಪಕ್ಷದ ಬೇರುಮಟ್ಟದ ಕಾರ್ಯಕರ್ತರ ಸಕ್ರಿಯ ನೇರ ಪಾತ್ರ ಅವಲಂಬಿಸಿಯೇ ನಡೆಯುವ ಈ ಚುನಾವಣೆಯಲ್ಲಿ ರಾಜ್ಯ ಮಟ್ಟದ ನಾಯಕರ ಮನೋಭಿಲಾಷೆ ಕೆಲಸ ಮಾಡುವುದಿಲ್ಲ. ಅವರ ಹುಕುಂ ಯಥತ್  ಆಗುವುದಿಲ್ಲ. ರಾಜ್ಯ ಮಟ್ಟದ ನಿರೀಕ್ಷೆಗಳೇ ಬೇರೆ, ಸ್ಥಳೀಯ ಮಟ್ಟದ ರಿವಾಜುಗಳೇ ಬೇರೆ. ಈ ಚುನಾವಣೆಯ ಮಾನದಂಡ, ವಿಷಯ, ಸಮಸ್ಯೆ, ವೈರತ್ವ, ಹೊಂದಾಣಿಕೆ ಭಿನ್ನ. ಮೈತ್ರಿ ಸರಕಾರದಲ್ಲಿ ಕುಮಾರಸ್ವಾಮಿ, ಡಾ. ಜಿ. ಪರಮೇಶ್ವರ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಅನಿವಾರ್ಯ ಹೊಂದಾಣಿಕೆ ಏರ್ಪಡಬಹುದು, ಆದರೆ ಬೇರು ಮಟ್ಟದ ಕಾರ್ಯಕರ್ತರ ಮಟ್ಟದಲ್ಲಿ ಇದನ್ನೇ ಹೇಳುವಂತಿಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳು ಮೈತ್ರಿ ಹಣೆಬರಹದ  ಕುತೂಹಲ ಕಾಯ್ದಿಟ್ಟಿವೆ.

Tags

Related Articles

Leave a Reply

Your email address will not be published. Required fields are marked *

Language
Close