ಬಾಗ್ದಾದ್‌ ರಾಯಭಾರ ಕಚೇರಿಗೆ ಸಿಆರ್‌ಪಿಎಫ್‌ ಕಮಾಂಡೋಗಳನ್ನು ನಿಯೋಜಿಸುವ ಸಾಧ್ಯತೆ

Posted In : ದೇಶ

ದೆಹಲಿ: ಭಯೋತ್ಪಾದಕ ಸಂಘಟನೆಗಳಾದ ಇಸ್ಲಾಮಿಕ್‌ ಸ್ಟೇಟ್‌, ಅಲ್‌ ಕಯ್ದಾಗಳಿಂದ ರಕ್ಷಣೆ ಒದಗಿಸಲು ಯುದ್ಧಪೀಡಿತ  ಇರಾಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್‌)ನ ಕಮಾಂಡೋಗಳನ್ನು ನಿಯೋಜಿಸಲು ಕೇಂದ್ರ ಸರಕಾರ ಸಿದ್ಧವಾಗುತ್ತಿದೆ.

ಇದಕ್ಕೆಂದೇ ಡೆಪ್ಯೂಟಿ ಕಮಾಂಡಂಟ್‌ ನೇತೃತ್ವದಲ್ಲಿ ಕಠಿಣ ತರಬೇತಿ ಪಡೆದ 45 ಕಮಾಂಡೋಗಳ ತಂಡವೊಂದನ್ನು ಬಾಗ್ದಾದ್‌ನಲ್ಲಿರುವ ರಾಯಭಾರ ಕಚೇರಿಗೆ ನಿಯೋಜಿಸಲು ಸಿದ್ಧತೆ ನಡೆದಿದೆ. ಅಗತ್ಯ ಬಿದ್ದಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ಕಳುಹಿಸುವ ಸಾಧ್ಯತೆ ಇದೆ.

2004ರಲ್ಲಿ ಭಾರತದ ರಾಯಭಾರ ಕಚೇರಿ ಮೇಲೆ ಕ್ಷಿಪಣಿ ದಾಳಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕ

ದಾಳಿಗಳಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ  ನೀಡಿವೆ. ಈ ನಿಟ್ಟಿನಲ್ಲಿ ಸಿಆರ್‌ಪಿಎಫ್‌ ಕಮಾಂಡೋಗಳನ್ನು ನಿಯೋಜಿಸಲು ಗೃಹ ಇಲಾಖೆ ಪ್ರಾಥಮಿಕ ಒಪ್ಪಿಗೆ ನೀಡಿದೆ.

ರಾಯಭಾರ ಕಚೇರಿ, ರಾಜತಾಂತ್ರಿಕರು ಹಾಗು ಅವರ ಕುಟುಂಬದ ಸದಸ್ಯರನ್ನು ಭಯೋತ್ಪಾದಕ ದಾಳಿಯ ಭೀತಿಯಿಂದ ರಕ್ಷಿಸುವ ಹೊಣೆಯನ್ನು ಸಿಆರ್‌ಪಿಎಫ್‌ಗೆ ವಹಿಸಲಾಗುವುದು.

“ಇರಾಕ್‌ನ ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆಯಿಂದ ನಿರಂತರವಾಗಿ ಬರುತ್ತಿರುವ ದಾಳಿಯ ಭೀತಿ ಹಿನ್ನೆಲೆಯಲ್ಲಿ ಅಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಗೆ ಭದ್ರತೆ ಒದಗಿಸುವ ಕುರಿತಂತೆ ಸುದೀರ್ಘ ಕಾಲದಿಂದ ಚರ್ಚೆ ನಡೆಯುತ್ತಿದೆ. ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯನ್ನು ಅಲ್ಲಿಗೆ ಕಳುಹಿಸುವ ಆಲೋಚನೆಯನ್ನು ಇದೇ ಪ್ರಯತ್ನದ ಭಾಗವಾಗಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು ಶೀಘ್ರ ತೆಗೆದುಕೊಳ್ಳಲಾಗುವುದು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ರಾಯಭಾರ ಕಚೇರಿಯನ್ನು ಗುರಿಯಾಗಿಸಿ ಯಾವುದೇ ದಾಳಿ ನಡೆಯದಿದ್ದರೂ, ಬಾಗ್ದಾದ್‌ನಲ್ಲಿ ಇಸ್ಲಾಮಿಕ್‌  ಭಯೋತ್ಪಾದಕರ ಆತ್ಮಹತ್ಯಾ ದಾಳಿಗಳು ದಿನೇ ದಿನೇ ಹೆಚ್ಚುತ್ತಿವೆ. ಉದ್ದೇಶಿತ ಯೋಜನೆ ಭಾಗವಾಗಿ ಕೇವಲ ರಾಯಭಾರ ಕಚೇರಿಗೆ ಮಾತ್ರವಲ್ಲದೇ ಕಚೇರಿಯ ಸಿಬ್ಬಂದಿಗೆ ಕಮಾಂಡೋಗಳು ಸದಾ ರಕ್ಷಣೆ ನೀಡಲಿದ್ದಾರೆ.

ಸುಧಾರಿತ ಸ್ಫೋಟಕ ವಸ್ತುಗಳ ನಿರ್ವಹಣೆ, ವಿಶೇಷ ಕಾರ್ಯಾಚರಣೆ ನಡೆಸುವಲ್ಲಿ ಪರಿಣಿತಿ ಹಾಗು ಒತ್ತೆಯಾಳುಗಳನ್ನು ಬಿಡಿಸುವಲ್ಲಿ ನಿಷ್ಣಾತರಾಗಿರುವ ಕಮಾಂಡೋಗಳನ್ನು ಇದಕ್ಕೆಂದೇ ನಿಯೋಜಿಸಲಾಗಿದೆ.

ಮೂರು ಲಕ್ಷಕ್ಕಿಂತ ಹೆಚ್ಚಿನಿ ಸಿಬ್ಬಂದಿ ಹೊಂದಿರುವ ಪಡೆಗೆ ಇದೇ ಮೊದಲ ವಿದೇಶೀ ಜವಾಬ್ದಾರಿಯಾಗಿದೆ.

Leave a Reply

Your email address will not be published. Required fields are marked *

nineteen − eleven =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top