About Us Advertise with us Be a Reporter E-Paper

ಅಂಕಣಗಳು

ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ

- ಡಾ. ಮನುಬಳಿಗಾರ್, ಸಾಹಿತ್ಯ ಪರಿಷತ್ತಿನ ಅಧ್ಯಕ್ಷ.

ಕರ್ನಾಟಕ, ಕನ್ನಡದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲವರಾಗಿದ್ದರು ಅನಂತ ಕುಮಾರ್. ದೆಹಲಿಯಲ್ಲಿ ಕನ್ನಡದ ಕೆಲಸಗಳಾಗಬೇಕು ಎಂದರೆ ಅದಕ್ಕೆ ಅತ್ಯಂತ ಹೆಚ್ಚು ಮುತುವರ್ಜಿ ವಹಿಸಿ ಮಾಡಿಕೊಡುತ್ತಿದ್ದರು.

ಕರ್ನಾಟಕ ಸಂಸ್ಕೃತಿಯನ್ನು ಆಳವಾಗಿ ತಿಳಿದುಕೊಂಡಿದ್ದರಿಂದ ಕರ್ನಾಟಕ ಮತ್ತು ದಿಲ್ಲಿಯ ನಡುವಿನ ಸೇತುವೆಯಂತೆ ಕೆಲಸ ಮಾಡುತ್ತಿದ್ದರು. ಸಂಸತ್ತಿನಲ್ಲಿ ಕನ್ನಡ ಮಾತನಾಡುವ ಮೂಲಕ ಈ ಹಿರಿಮೆ ಗರಿಮೆಗಳನ್ನು ಮತ್ತಷ್ಟು ಹೆಚ್ಚಿಸಿದ್ದರು. ಕನ್ನಡದ ಕೆಲಸಗಳಿಗಾಗಿ ದಿಲ್ಲಿಯಲ್ಲಿ ರಾಷ್ಟ್ರಪತಿ, ಪ್ರಧಾನಿ ಅಥವಾ ಇತರೆ ಸಚಿವರನ್ನು ಭೇಟಿ ಮಾಡಬೇಕು ಎಂದರೆ ಅನಂತಕುಮಾರ್ ನಮ್ಮ ಜೆತೆಗೆ ಬಂದು ಅವರನ್ನು ಭೇಟಿ ಮಾಡಿಸುತ್ತಿದ್ದರು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ದಿಲ್ಲಿಯ ನಮ್ಮ ನಿಯೋಗದ ನಾಯಕರಾಗಿಬಿಡುತ್ತಿದ್ದರು.

1996ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗುವ ಮೊದಲಿನಿಂದಲೂ ಅವರೊಂದಿಗೆ ನನ್ನ ಒಡನಾಟವಿತ್ತು. ಎಂಥದ್ದೇ ಸಮಯದಲ್ಲಿ ಅವರು ಸಿಡುಕಿದ್ದನ್ನು ನಾನು ನೋಡಿಲ್ಲ. ಅತ್ಯಂತ ಸ್ನೇಹಪರತೆ ನಾನು ಆವರಲ್ಲಿ ಕಂಡ ಗುಣ. ಕೆಲಸಗಳಿಗಾಗಿ ಸದಾ ಸಿದ್ಧರಿರುತ್ತಿದ್ದ ಅವರ ಅಗಲಿಕೆ ಇಡೀ ಕರ್ನಾಟಕಕ್ಕೆ ಮಾತ್ರವಲ್ಲ, ದೇಶಕ್ಕೇ ನಷ್ಟ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅವರು ಸಂಸದರಾಗುತ್ತಿದ್ದರೂ ಇಡೀ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಂತೆ ದುಡಿದಿದ್ದಾರೆ.

ಹುಬ್ಬಳ್ಳಿ-ಧಾರವಾಡದಿಂದ ಬಂದು 36ನೇ ವರ್ಷಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಸಂಸದರಾಗುವ ಮೂಲಕ ರಾಜಕಾರಣಕ್ಕೆ ಪದಾರ್ಪಣೆ ಮಾಡಿ ರಾಜ್ಯಕ್ಕೆ ಪರಿಚಯವಾದರು. ಸೂಕ್ಷ್ಮಮತಿಯರಾಗಿದ್ದರಿಂದ ರಾಜಕೀಯದಲ್ಲಿ ಹೆಚ್ಚು ಸ್ನೇಹಿತರನ್ನು ಹೊಂದಿದ್ದರು ಎಂದು ಹೇಳಿದರು.

Tags

Related Articles

Leave a Reply

Your email address will not be published. Required fields are marked *

Language
Close