About Us Advertise with us Be a Reporter E-Paper

Breaking Newsದೇಶ

ಸಿಲಿಂಡರ್‍‍ ಸ್ಪೋಟ: ನಾಲ್ಕು ಸಾವು

ಉತ್ತರಪ್ರದೇಶ: ಸಿಲಿಂಡರ್‍‍ ಸ್ಪೋಟಗೊಂಡ ಸುಮಾರು ನಾಲ್ಕು ಜನ ಮೃತಪಟ್ಟಪಿದ್ದು, 12 ಜನರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ಇಲ್ಲಿನ ಆಗ್ರ ಜಿಲ್ಲೆಯ ದಾಢಕಿ ಗ್ರಾಮದಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ಸಿಲಿಂಡರ್‍‍ನಲ್ಲಿನ ಸೋರಿಕೆಯಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಮಲ ಸಿಂಗ್‍‍(45), ಗಿರಜ್‍‍ ಸಿಂಗ್‍‍(61), ಮಹವೀರ್‍‍(40) ಮತ್ತು ಓಂ ಪ್ರಕಾಶ್‍‍(27) ಮೃತರೆಂದು ಗುರುತಿಸಲಾಗಿದೆ.

ಘಟನೆಯು ಹಿಮ್ಮತ್‍‍ ಸಿಂಗ್‍‍ ಮನೆಯಲ್ಲಿ ನಡೆದಿದ್ದು, ಆತನ ಮಗಳು ಮೀರಾ ಅಡುಗೆ ಮಾಡುವಾಗ ಸಿಲಿಂಡರ್‍‍ನಲ್ಲಿ ಸೊರಿಕೆ ಕಂಡುಬಂದಿದ್ದು, ನಂತರ ಬೆಂಕಿ ಹತ್ತಿಕೊಂಡು ಸ್ಪೋಟಗೊಂಡಿದೆ. ಆಕೆ ರಕ್ಷಣೆಗಾಗಿ ಕೂಗಿಕೊಂಡಿದ್ದು, ಇದಕ್ಕೂ ಮುನ್ನವೇ ಸಿಲಿಂಡರ್‍‍ ಸ್ಪೋಟಗೊಂಡಿದೆ ಎನ್ನಲಾಗಿದೆ.

ಗಾಯಾಳುಗಳನ್ನು ಆಗ್ರಾದ ಎಸ್‍‍ ಎನ್‍‍ ಮೆಡಿಕಲ್‍‍ ಕಾಲೇಜಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್‍‍ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close