About Us Advertise with us Be a Reporter E-Paper

Breaking Newsದೇಶಪ್ರಚಲಿತ

ನೆಹರು ಒಬ್ಬ ಸ್ವಾರ್ಥ ಸ್ವಭಾವದ ವ್ಯಕ್ತಿ: ಕ್ಷಮೆ ಕೋರಿದ ದಲೈಲಾಮ

ದೆಹಲಿ: ಪಂಡಿತ್ ಜವಹರ್‌ಲಾಲ್ ನೆಹರು ವಿರುದ್ಧ ಹೇಳಿಕೆಯೊಂದನ್ನು ನೀಡಿ ವಿವಾದಕ್ಕೆೆ ಗುರಿಯಾಗಿದ್ದ ಬೌದ್ಧರ ಧಾರ್ಮಿಕ ಗುರು ದಲೈಲಾಮಾ ಕ್ಷಮೆ ಕೋರಿದ್ದಾರೆ.

ಗೋವಾದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ದಲೈ ಲಾಮಾ ನೆಹರು ಒಬ್ಬ ಸ್ವಾರ್ಥ ಸ್ವಭಾವದ ವ್ಯಕ್ತಿಯಾಗಿದ್ದರು ಎಂದಿದ್ದರು. ಇದು ವಿವಾದಕ್ಕೆೆ ಕಾರಣವಾಗಿದ್ದು, ಇದೀಗ ಕ್ಷಮೆ ಕೋರಿದ್ದಾರೆ. ‘ನೆಹರು ಕುರಿತು ನನ್ನ ಹೇಳೀಕೆ ವಿವಾದ ಸೃಷ್ಟಿಸಿದೆ . ನಾನೇನಾದರು ತಪ್ಪು ಹೇಳಿದ್ದರೆ ಕ್ಷಮೆ ಕೋರುತ್ತೇನೆ’ ಎಂದು ತಿಳಿಸಿದ್ದಾರೆ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಮಹಾತ್ಮ ಗಾಂಧಿಯವರಿಗೆ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಪ್ರಧಾನ ಮಂತ್ರಿಯನ್ನಾಗಿಸುವ ಆಸೆ ಇತ್ತು. ಆದರೆ ಜವಹರ್‌ಲಾಲ್ ನೆಹರು ಅವರಿಗೆ ಪ್ರಧಾನಿ ಆಗಬೇಕೆನ್ನುವ ಸ್ವಾರ್ಥ ಇತ್ತು ಹಾಗಾಗಿ ಅವರು ಪ್ರಧಾನಿ ಆದರು. ಜಿನ್ನಾ ಪ್ರಧಾನಿ ಆಗಿದ್ದರೆ ಭಾರತ ಹಾಗೂ ಪಾಕಿಸ್ತಾನ ಇಬ್ಬಾಗ ಆಗುತ್ತಿರಲಿಲ್ಲ. ನೆಹರು ತಮ್ಮ ಬಗ್ಗೆ ಅಷ್ಟೇ ಯೋಚಿಸುತ್ತಾರೆ. ಇನ್ನೊಬ್ಬರ ಬಗ್ಗೆೆ ಯೋಚಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದು ದೇಶಾದ್ಯಂತ ವಿವಾದ ಸೃಷ್ಟಿಸಿತ್ತು.

Tags

Related Articles

Leave a Reply

Your email address will not be published. Required fields are marked *

Language
Close