ಗುಂಡಿಗೆ ಇದ್ದವ ಗುಂಡಿಗೆ ಬೀಳ್ತಾನೆ

Posted In : ಕಾಲೆಳೆಯೋ ಕಾಲ

ಸರ, ಹೋಗಬ್ಯಾಡ್ರಿ, ಹೋಗಬ್ಯಾಡ್ರೀ ಅಂತ ಸ್ಕೂಟರ್ ಹಿಂದೆಯೇ ಬೆಂಬತ್ತಿ ಬಂದ ಸಿದ್ಲಿಂಗು. ಯಾಕಯ್ಯಾ ಏನಾಯ್ತು? ಎಂದೆ.
ಮೈಸೂರು ರಸ್ತೆ ಮ್ಯಾಲೆ ಯಮರಾಯ ಓಡಾಡ್ಲಿಕ್ಕೆ ಹತ್ಯಾನ್ರೀ ಸರ ಒಂದೆಡೆ ನಗು, ಮತ್ತೊಂದೆಡೆ ಅಚ್ಚರಿ. ಸಿದ್ಲಿಂಗುಗೇನಾದ್ರೂ ಹುಚ್ಚು ಹಿಡಿಯಿತಾ?
ನೋಡ್ರಿ ಸರ, ರಸ್ತೆ ತುಂಬ ಗುಳಿ ಬಿದ್ದಾವ್ರೀ. ಒಂದು ಗುಂಡಿ ತಪ್ಪಿಸಿದ್ರ ಮತ್ತೊಂದು ಗುಂಡಿ, ಮತ್ತೊಂದು ಗುಂಡಿ ತಪ್ಪಿಸಿದರ ಇನ್ನೊಂದು.ಬಿದ್ದ ಐದೇ ನಿಮಿಷಕ್ಕೆ ಸೀದಾ ಯಮನ ಪಾದಾ!
ಸಿದ್ಲಿಂಗು ಯೋಚನೆ ಮಾಡದೇ ಏನೂ ಹೇಳುವುದಿಲ್ಲ. ಮೈಸೂರು ರಸ್ತೆಯಲ್ಲಿ ಮಳೆ ಬಂದರೆ ಗುಂಡಿ ತಪ್ಪಿಸಲು ಹೋಗಿ ಯಮನ ಗುಂಡಿಗೆ ಬಿದ್ದವರು ಹಲವು ಮಂದಿ. ಪ್ರಾಣ ಕಳಕೊಂಡವರು ಮೂರು, ಕೈಕಾಲು ಮುರಕೊಂಡವರು ನೂರು. ಅಲ್ಲಿಗೆ ಗುಂಡಿಗೆ ಇದ್ದವರೇ ಗುಂಡಿಗೆ ಬೀಳಬೇಕು.
ಸಿದ್ಲಿಂಗು, ಜಾರ್ಜ್ ಮನೆಗೆ ಹೋಗಿದ್ಯಾ? ಅಯ್ಯೋ ಸರ, ಅವರದೂ ಟೈರ್ ಪಂಕ್ಚರ್ ಆಗೇತಂತ ಅಲ್ಲ ಕಣೋ, ಅವರ ಕಾರಿನ ಟೈರು ಅಂತ ಹೇಳು, ಅವರ ಟೈರು ಅಂದ್ರೆ ಬೇರೆ ಅರ್ಥ ಬರುತ್ತೆ ಅದೇ ಹೇಳಿದ್ದು ಸರ, ಅಮೆರಿಕಾ ಅಮೆರಿಕಾ ಅಂತ ಬೆಂಗಳೂರಿಗೆ ಹೇಳಿದವರು ಅಪ್ಪಿ ತಪ್ಪಿ ಮೈಸೂರು ರಸ್ತೆಗೆ ಬಂದಾಗ, ಹಳ್ಳದಾಗ ಕಾರು ಸಿಕ್ಕಿ ಬಿದ್ದು, ಅವರ ನಡು ಮುರಿದು ಹೋಗೇತ್ಯಂತ ನಿಂಗೆ ಯಾರು ಹೇಳಿದ್ದೋ? ಫಿಸಿಯೋ ಥೆರಪಿಸ್ಟ್ ಹೇಳಿದರ್ರೀ, ಗುಂಡ್ಯಾಗ ಬಿದ್ದಾರ ಸಾಹೇಬ್ರು ಅಂತ ಮತ್ತೆ ಬೆಂಗಳೂರು ಕತೆ? ಇಲ್ರಿ ಸರ, ಅದಕ್ಕ ಗುಂಡಿಗೆ ಇರೋರೇ ಗುಂಡಿಗೆ ಬೀಳಬೇಕು ಅಂತ ಕೇಳಿ ನಮ್ಮ ಹರಿಕೃಷ್ಣ ಹಾಡು ಬರ್ಯಾಕ್ ಹತ್ಯಾರ್ರೀ..
ಓಹ್ ಆ ಮ್ಯೂಸಿಕ್ ಡೈರೆಕ್ಟರು ಅವರಿಗೆ ಹಳೇ ಪಾತ್ರೆ ಹಳೇ ಕಬ್ಬಣಾ ಅಂತ ಹಾಡು ಮಾಡಿ ರೂಢಿ ಐತಲ್ರಿ, ಈ ಸಲ ಅದಕ್ಕೆ ಗುಂಡಿ ಯಾವ ಯಾವ ನಮೂನಿ ಅದಾವು ಅಂತ ಹಾಡು ಬರಿಯಾಕ್ ಹೇಳೇತಿ ಮತ್ತೆ ನಾನು ಸ್ಕೂಟರ್ ಸ್ಟಾರ್ಟ್ ಮಾಡಿದೆ.
ಸರ, ಹೋಗಬ್ಯಾಡ್ರೀ ಗುಂಡಿಗೆ ಬೀಳತೀರಿ ಅಂತ ಮತ್ತೆ ಅರಚತೊಡಗಿದ.
ನಾನು ಗುಂಡಿಯಲ್ಲ; ಬದುಕಿನ ಬಂಡಿ ಒಮ್ಮೆ ಬೀಳುತ್ತೆ, ಒಮ್ಮೆ ಏಳುತ್ತೆ ದುಡಿಯದೇ ಸತ್ತೆ, ದುಡಿದರ ಕತ್ತೆ ಇದು ಗುಂಡಿಯಲ್ಲ ಬದುಕಿನ ಬಂಡಿ

Leave a Reply

Your email address will not be published. Required fields are marked *

three × four =

 
Back To Top