ವಿಶ್ವವಾಣಿ

ಸುಧಾಮೂರ್ತಿಯಂಥವರನ್ನೂ ವಿವಾದಕ್ಕೆಳೆದರೆ ಇನ್ಯಾರನ್ನು ಇವರು ಮೆಚ್ಚಿಕೊಳ್ಳುತ್ತಾರೆ?

ನ್ಫೋಸಿಸ್ ಸುಧಾ ನಾರಾಯಾಣಮೂತಿಯವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಿದರೂ ಅದೊಂದು ವಿವಾದವಾಗುತ್ತದೆಂದು ನಾನು ಎಣಿಸಿರಲಿಲ್ಲ. ಪ್ರಾಯಶಃ ಇತ್ತೀಚಿನ ವಷರ್ಗಳಲ್ಲಿ ಸುಧಾಮೂರ್ತಿ ಅವರ ಆಯ್ಕೆ ವಿವಾದದಿಂದ ಹೊರತಾಗಿದ್ದೆ ಎಂದೇ ಎಲ್ಲರೂ ಭಾವಿಸಿದ್ದರು.

ಗಂಗೂಬಾಯಿ ಹಾನಗಲ್, ಬಿ. ಸರೋಜಾದೇವಿಯವರನ್ನು ದಸರಾ ಉದ್ಘಾಟಿಸಲಿರುವ ಮೂರನೇ ಮಹಿಳೆಯೆಂದರೆ ಸುಧಾಮೂರ್ತಿ.

ಯಾವ ದೃಷ್ಟಿಯಿಂದ ನೋಡಿದರು ಅವರು ಸೂಕ್ತ. ಯೋಗ್ಯ ಹೆಸರು. ಅವರು ಕೆಲಸಕ್ಕೆ ಅರ್ಹ ಹಾಗೂ ಘನತೆಯುಳ್ಳ ವ್ಯಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಯಾವುದೇ ವಿವಾದವನ್ನು ಅಂಟಿಸಿಕೊಂಡವವರಲ್ಲ. ಒಮ್ಮೊಮ್ಮೆ ನಾರಾಯಣಮೂತಿರ್ಯವರು ವಿವಾದವನ್ನು ಎಳೆದುಕೊಳ್ಳುವುದುಂಟು. ಅವರು ತಮ್ಮ ಅಭಿಪ್ರಾಯವನ್ನು ನೇರವಾಗಿ ತಿಳಿದು ವ್ಯಕ್ತಪಡಿಸುವುದರಿಂದ, ಯಾರ ಮುಲಾಜಿಗೂ ಒಳಗಾವುದರಿಂದ, ಅವರ ಅಭಿಪ್ರಾಯ, ನಿಲುವುಗಳು ವಿವಾದಯೆದ್ದಿಸಿದ್ದುಂಟು.

ಆದರೆ ಸುಧಾಮೂತಿರ್ಯವರು ಹಾಗಲ್ಲ, ಅವರು ಇಪ್ಪತ್ತನಾಲ್ಕು ಕ್ಯಾರೆಟ್ ಬಂಗಾರ. ಅವರೆಂದೂ ವಿವಾದವನ್ನು ಎಳೆದುಕೊಂಡವರಲ್ಲ. ತಾನಾಯಿತು, ತಮ್ಮ ಪ್ರತಿಷ್ಠಾನದ ಕೆಲಸವಾಯಿತು. ಓದು, ಬರಹ, ತಿರುಗಾಟ, ಸಮಾಜ ಸೇವೆಯಲ್ಲಿ ಅವರು ಸದಾ ಮಗ್ನ. ಬಹಿರಂಗವಾಗಿ ಹೆಚ್ಚು ಕಾಣಿಸಿಕೊಳ್ಳಲು ಸ್ವಲ್ಪ ಸಂಕೋಚ.

ಅವರದು ಅಪ್ಪಟ ಕನ್ನಡ ಗೃಹಿಣಿಯ, ಸದ್ಗ್ರಹಸ್ಥೆಯ ಗೆಟ್ಟಪ್ಪು, ಜಡೆಗೊಂದು  ಮಲ್ಲಿಗೆ ದಂಡೆ, ನಿರಾಭರಣ, ಅವರ ಬಾಹ್ಯ ಗುರುತು. ಅವರು ಮಾಡಿದ ಧನ ಸಹಾಯವನ್ನು ಹೇಗೆ ಅಳೆಯುವುದು? ಅವರು ಬಲಗೈಯಲ್ಲಿ ಕೊಟ್ಟಿದ್ದನ್ನು ಎಡಗೈಗೂ ಗೊತ್ತಿರುವುದಿಲ್ಲ. ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಕಾಣಿಕೋಎಂಬ ದಾಸವಾಣಿ ಅವರಿಗೆ ಹೇಳಿ ಮಾಡಿಸಿದಂತೆ.

ಅವರು ಪತಿಗೆ ತಕ್ಕ ಪತ್ನಿ. ಕನ್ನಡ ನೆಲದ, ಕನ್ನಡ ಸಂಸ್ಕೃತಿಯ ನಿಜವಾದ ರಾಯಭಾರಿ. ಇನ್‌ಫೋಸಿಸ್ ಪ್ರತಿಷ್ಠಾನದ ಮೂಲಕ ಸುಧಾಮೂರ್ತಿಯವರು ಮಾಡಿದ ಸಾಮಾಜಿಕ ಸೇವೆ, ಕೊಡುಗೈ ದಾನ ಬಣ್ಣಿಸಲು ಸಾಧ್ಯವಿಲ್ಲ. ಶ್ರೀಮಂತಿಕೆ ಬಂದರೂ ಅದನ್ನು ತಲೆಗೇರಿಸಿಕೊಳ್ಳದೇ, ಇನ್ನೂ ನಿಂತ ನೆಲದ ಮೇಲೆಯೇ ಭದ್ರವಾಗಿ ನೆಲೆಯೂರಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಅವರ ಖದರು, ದಿರಿಸು, ಮಾತು, ಹಾವಭಾವ ಗಮನಿಸಿದ ಯಾರೂ ಸಹ ಸಾವಿರಾರು ಕೋಟಿ ರುಪಾಯಿ ಮೌಲ್ಯದ ಸಂಪತ್ತಿನ ಒಡೆಯರು, ವಾರಸುದಾರರು ಎಂದು ಹೇಳಿದರೆ ನಂಬುವುದಿಲ್ಲ.

ಸುಧಾಮೂರ್ತಿಯವರು ನೀಡಿದ ದಾನಧರ್ಮ ಒಂದೆರಡಲ್ಲ. ಅವರು ದಾನದಿಂದಲೇ ಸಮಸ್ತ ಕನ್ನಡಿಗರನ್ನು ತಲುಪಿದ ಕಾಯಕ ಜೀವಿ. ಅಷ್ಟಕ್ಕೂ ಅವರಿಗೆ ದಾನಧರ್ಮ ಮಾಡಬೇಕಾದ ಯಾವ ದರ್ದೂ ಇಲ್ಲ. ಕಾರಣ ಇನ್ಫೋಸಿಸ್ ಪ್ರತಿಷ್ಠಾನ ಯಾವುದೇ ಮಠವೂ ಅಲ್ಲ, ಆಶ್ರಮವೂ ಅಲ್ಲ ಅಥವಾ ದಾನದತ್ತಿ ಸಂಸ್ಥೆಯೂ ಅಲ್ಲ. ಅದೊಂದು ಕಂಪ್ಯೂಟರ್ ಅಥವಾ ಸಾಫ್‌ಟ್ವೇರ್ ಕಂಪನಿಯ ಒಂದು ಪ್ರತಿಷ್ಠಾನ. ದುಡಿದ ಹಣವನ್ನು ಮಾಡಲೇಬೇಕಾದ ದರ್ದು ಇಲ್ಲ. ಅಂಥ ಕಾನೂನೂ ಇಲ್ಲ. ಸುಧಾಮೂರ್ತಿಯವರು ದಾನ ಮಾಡದಿದ್ದರೆ ಯಾರೂ ಕೇಳುವುದಿಲ್ಲ. ಅವರು ಗಂಡ ಗುಡಿದ ಹಣವಲ್ಲಿ ಐದು ಪೈಸೆಯನ್ನು ಕೊಡಬೇಕಿಲ್ಲ. ಅಷ್ಟೂ ಹಣವನ್ನೂ ಅವರೇ ಖರ್ಚು ಮಾಡಬಹುದು, ಮಜಾ ಮಾಡಬಹುದು. ಭೋಗಿಸಬಹುದು.

ದೇವೇಗೌಡರ ಕುಟುಂಬದ ಸದಸ್ಯರು ಸಾವಿರಾರು ಕೋಟಿ ರುಪಾಯಿ ಗಳಿಸಿದ್ದಾರೆಂದು ಜನ ಮಾತಾಡಿಕೊಳ್ಳುತ್ತಾರೆ. ಅದು ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ ಅವರ್ಯಾರೂ ಸಮಾಜಕ್ಕೆ ಐದು ಪೈಸೆಯನ್ನು ದಾನ ಮಾಡಿದ್ದನ್ನು ನಾನಂತೂ ನೋಡಿಲ್ಲ. ಹಾಗೆ ಮಾಡಬೇಕೆಂಬ ನಿಯಮ ಇಲ್ಲ. ಅದು ಅವರ ಖುಷಿ, ಅದು ಅವರ ವೈಯಕ್ತಿಕ ವಿಷಯ. ದಾನ ಮಾಡುವುದು ಬಿಡುವುದು ಅವರಿಗೆ ಬಿಟ್ಟಿದ್ದು. ವಿಷಯವಾಗಿ ಯಾರೂ ಒತ್ತಾಯ ಮಾಡುವಂತಿಲ್ಲ. ನಮ್ಮ ರಾಜಕಾರಣಿಗಳು ಕೋಟಿ ಕೋಟಿ ಹಣ ಹೊಡೆದರೂ, ಅವರು ಕೈಯೆತ್ತಿ ದಾನ ಮಾಡುವುದು ಕಡಿಮೆಯೇ.

ಹಣವಿದ್ದವರೆಲ್ಲ ದಾನ ಮಾಡುತ್ತಾರೆಂದೇನೂ ಇಲ್ಲ. ಹಣವಿದ್ದವರೆಲ್ಲ ತಾವು ಗಳಿಸಿದ್ದರಲ್ಲಿ ಶೇ. ಒಂದರಷ್ಟನ್ನು ದಾನ ಮಾಡಿದ್ದರೆ, ಭಾರತದಲ್ಲಿ ಬಡತನವೇ ಇರುತ್ತಿರಲಿಲ್ಲ. ಆದರೆ ಹಣವಿದ್ದವರ ಪೈಕಿ ಕಂಜೂಸು. ಅವರಿಗೆ ಕೈಯೆತ್ತಿ ಕೊಡಬೇಕೆಂಬ ಭಾವನೆ ಇರುವುದಿಲ್ಲ. ಅದಕ್ಕಾಗಿ ನಮ್ಮ ದೇಶದಲ್ಲಿ ಪ್ರಮಾಣದ ಬಡತನವಿದೆ. ಬಡವರನ್ನೆಲ್ಲ ಶೋಷಿಸಿಯೇ ಜನ ಶ್ರೀಮಂತರಾಗಿದ್ದರೆಂಬುದು ಶುದ್ಧ ಸುಳ್ಳು. ಆದರೆ ಮಾತಲ್ಲಿ ಸತ್ಯವೂ ಅಡಗಿದೆಯೆಂಬುದನ್ನು ಮನಗಾಣಬೇಕು. ಎಲ್ಲರಿಗೂ ಪಡೆಯುವುದೆಂದರೆ ಅದೆಂಥ ಮಹಾದಾನಂದವೋ?! ಅವರೆಲ್ಲರೂ ಲೇನಾಬ್ಯಾಂಕಿನ ಅಧ್ಯಕ್ಷರು. ಬೇರೆಯವರಿಗೆ ಕೊಡಬೇಕು ಅಂದರೆ ಕರುಳು ಕಿತ್ತುಬಂದ ಹಾಗಾಗುತ್ತದೆ. ಅಂಥವರಿಗೆ ಕೊಡುವುದು ಅಂದರೆ ಪ್ರಾಣ ಕೊಡುವುದು ಎಂದೇ ಭಾವಿಸಿರುತ್ತಾರೆ. ಅವರು ಎಂಜಲು ಕೈಯಲ್ಲಿ ಕಾಗೆ

ತಾವು ದುಡಿದಿದ್ದರಲ್ಲಿ ತಮಗೊಂದಿಷ್ಟು ಉಳಿಸಿಕೊಂಡು, ಉಳಿದುದನ್ನೆಲ್ಲ ಸಮಾಜಕ್ಕೆ ಅರ್ಪಿಸುವವರು ದೇನಾಬ್ಯಾಂಕಿನ ಅಧ್ಯಕ್ಷರು. ಅವರಿಗೆ ಕೊಡುವುದರಲ್ಲಿ ಮಹಾದಾನಂದ!

ಎರಡನೇ ವರ್ಗಕ್ಕೆ ಸೇರುವವರು ಸುಧಾಮೂರ್ತಿ. ಅವರು ಅಥವಾ ಅವರ ಇನ್ಫೋಸಿಸ್ ಪ್ರತಿಷ್ಠಾನ ಹಣ ನೀಡದ ಸಂಸ್ಥೆಗಳಿರಲಿಕ್ಕಿಲ್ಲ. ಕರ್ನಾಟಕದ ಎಲ್ಲಾ ಶಾಲೆಗಳಿಗೂ ಪುಸ್ತಕ, ನೋಟ್‌ಬುಕ್, ಕಂಪ್ಯೂಟರ್‌ಗಳನ್ನು ನೀಡಿದ ಅಗ್ಗಳಿಕೆಯವರದು. ಅವರು ಅವೆಷ್ಟು ಸಾವಿರ ಜನರಿಗೆ, ಸಂಘ, ಸಂಸ್ಥೆಗಳಿಗೆ ಹಣಕಾಸಿನ ನೆರವು ನೀಡಿದ್ದಾರೋ ಗೊತ್ತಿಲ್ಲ. ಅವರದು ಕೊಡುವ ಕೈ. ದಾನ ಮಾಡುನ ಅವೆಷ್ಟು ಬಡವಿದ್ಯಾರ್ಥಿಗಳಿಗೆ ಅವರ ಹಣಕಾಸು ನೆರವು ಬದುಕನ್ನು ಕಟ್ಟಿಕೊಳ್ಳಲು ನೆರವಾಗಿದೆಯೋ? ಸುಧಾಮೂರ್ತಿ ಎಂದಾಕ್ಷಣ ನೆನಪಾಗುವುದು ಕೊಡುವ ಕೈಗಳು. ನಾವ್ಯಾರು ಅತ್ತಿಮಬ್ಬೆಯನ್ನು ನೋಡಿಲ್ಲ. ಆದರೆ ದಾನ ಚಿಂತಾಮಣಿ ಎಂಬ ಹೆಸರನ್ನು ಮಾತ್ರ ಕೇಳಿದ್ದೇವೆ. ನಮ್ಮ ಪಾಲಿಗೆ ಸುಧಾಮೂರ್ತಿ ದಾನಚಿಂತಾಮಣಿಯೇ.

ಒಂದು ಸಂಗತಿ ಸ್ಪಷ್ಟ.ಅದೇನೆಂದರೆ ಸುಧಾಮೂರ್ತಿ ಅವರು ಇವೆಲ್ಲವನ್ನೂ ಪ್ರಚಾರಕ್ಕೆ ಮಾಡುತ್ತಿಲ್ಲ. ಅವರಿಗೆ ಅದರ ಅಗತ್ಯವೂ ಇಲ್ಲ. ದಾನ ಮಾಡುವುದು ಗೊತ್ತಾಗಬಾರದು ಎಂಬ ಜಾಯಮಾನದವರು. ಹಾಗೆ ನೋಡಿದರೆ ಅವರು ಮಾಡುವ ದಾನಗಳು ಸಾರ್ವಜನಿಕರಿಗೆ ಗೊತ್ತಾಗುವುದಿಲ್ಲ. ಬೇರೆಯವರಿಗೆ ತಿಳಿಯಪಡಿಸದೇ ಅವರು ಅವೆಲ್ಲವನ್ನೂ ಮಾಡುತ್ತಾರೆ.

ದುರಂತವೇನೆಂದರೆ, ರೀತಿಯ ಸಮಾಜ ಕಾರ್ಯದಲ್ಲಿ ತೊಡಗಿಕೊಳ್ಳುವುದರಿಂದ ಅವರನ್ನು ಸಂದೇಹದಿಂದ ನೋಡುವವರೇ ಹೆಚ್ಚು. ಅವರೇನು ಅಪ್ಪನ ಮನೆಯಿಂದ ತಂದು ಕೊಡುತ್ತಿದ್ದಾರೆ ? ಕನ್ನಡಿಗರಿಂದ ದುಡಿದ ಹಣವೇ ಅಲ್ಲವಾ? ನಾಡು ಅವರಿಗೆ ಇಷ್ಟೆಲ್ಲಾ ಸಂಪತ್ತನ್ನು ನೀಡಿದೆ. ಹೀಗಿರುವಾಗ ಅದರಲ್ಲೇನು ಮಹಾ? ನಾರಾಯಣಮೂರ್ತಿ ಅವರಿಗೆ ಇಷ್ಟೆಲ್ಲಾ ಸಂಪತ್ತನ್ನು ನೀಡಿದವರು ಕನ್ನಡಿಗರೇ ಅಲ್ಲವೇ ? ಹಾಗಿರುವಾಗ ಅದರ ಕೆಲವು ಪಾಲನ್ನು ಕೊಟ್ಟರೆ ತಪ್ಪೇನು? ಎಂದು ಕೇಳುವವರಿದ್ದಾರೆ. ಅವರ ವಾದದಲ್ಲಿ ತಪ್ಪೇನೂ ಇಲ್ಲ.

ಆದರೆ ಇವರಿಗೆಲ್ಲ ಗೊತ್ತಿರದ ಒಂದು ಸಂಗತಿಯೇನೆಂದರೆ, ಹಣವನ್ನು ದುಡಿದು ಗುಡ್ಡೆ ಹಾಕಿಕೊಂಡ ಮಾತ್ರಕ್ಕೆ ಅದನ್ನು ಬೇರೆಯವರಿಗೆ ಕೊಡಬೇಕು ಎಂದೇನೂ ಇಲ್ಲವಲ್ಲ. ನಮ್ಮ ರಾಜ್ಯದಲ್ಲಿ ಹಣ ಮಾಡಿದವರೆಲ್ಲ ಬೇರೆಯವರಿಂದ ಶ್ರೀಮಂತರಾದವರಲ್ಲ. ಅವರೆಲ್ಲ ಕನ್ನಡಿಗರಿಂದಲೇ ಶ್ರೀಮಂತರಾದವರು. ಹಾಗಂತ ತಾವು ದುಡಿದ ಹಣವನ್ನು ಬೇರೆಯವರಿಗೆ ಅಥವಾ ಕನ್ನಡಿಗರಿಗೆ ಕೊಡಬೇಕೆಂದೇನೂ ಇಲ್ಲವಲ್ಲ ? ವಾದ ಸುಧಾಮೂರ್ತಿ ಅವರಿಗೂ ಅನ್ವಯವಾಗುತ್ತದೆಲ್ಲವೇ ?

ನನಗೆ ಸಲ ಯಾರಾದರೂ ಅವಿವೇಕಿಗಳು ಸುಧಾಮೂರ್ತಿ ಅವರನ್ನು ಟೀಕಿಸಿದಾಗ ಏನು ಅನಿಸುತ್ತದೆ ಗೊತ್ತಾ ? ಇವರೇಕೆ ತಮ್ಮ ಹಣವನ್ನು ಜನರಿಗೆ ದಾನ ಕೊಟ್ಟು ಅದೇ ಜನರಿಂದ ಯಾಕೆ ಉಗಿಸಿಕೊಳ್ಳುತ್ತಾರೆ ? ಮೂರ್ಖ ಜನರ ಟೀಕೆಗಳಿಗೆ ಯಾಕೆ ಗುರಿಯಾಗುತ್ತಾರೆ ?

ಅದರ ಬದಲು ತಮ್ಮ ಪಾಡಿಗೆ ತಾವಿರಬಹುದಲ್ಲ. ಆದರೆ ಸುಧಾಮೂರ್ತಿ ಅವರು ಯಾವ ಟೀಕೆಗಳಿಂದ ವಿಚಲಿತರಾಗಿಲ್ಲ. ತಮ್ಮ ಕೆಲಸದಿಂದ ಸ್ವಲ್ಪವೂ ವಿಮುಖರಾಗಿಲ್ಲ. ಅವರಿಗೆ ಇವೆಲ್ಲ ಸಹಜ, ಒಳ್ಳೆಯ ಕೆಲಸಕ್ಕೆ ಮುಂದಾದಾಗ ಸಾಮಾನ್ಯ ಎಂಬುದು ಗೊತ್ತಿದೆ. ಹೀಗಾಗಿ ಅವರು ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಸುಧಾಮೂರ್ತಿ ಅವರಂತೆ ಲಕ್ಷಾಂತರ ಮಹಿಳೆಯರಿಲ್ಲವೇ ? ಅವರ್ಯಾರೂ ಹೀಗೆ ಮಾಡುತ್ತಿಲ್ಲ. ಅವರ ಗಂಡಂದಿರೂ ಶ್ರೀಮಂತರೇ. ಅವರೆಲ್ಲ ಚೆನ್ನಾಗಿ ಶಾಪ್ಪಿಂಗ್ ಮಾಡಿಕೊಂಡು ಹಾಯಾಗಿದ್ದಾರೆ. ಅವರ್ಯಾರನ್ನೂ ಯಾರೂ ಕೇಳುವುದಿಲ್ಲ. ಕೆರೆಯ ನೀರನು ಕೆರೆಗೆ ಚೆಲ್ಲಿ ನೀವೇಕೆ ವರವಪಡೆದವರಂತೆ ಸಾರ್ಥಕತೆ ಪಡೆದುಕೊಳ್ಳುತ್ತಿಲ್ಲ ? ಎಂದು.

ಸುಧಾಮೂರ್ತಿ ಅವರೂ ಗಂಡನ ಜತೆಗೋ, ತಾವೊಬ್ಬರೆಯೋ ಅಮೇರಿಕಾ, ಬ್ರಿಟನ್, ಸಿಂಗಾಪುರ, ಮಲೇಷಿಯಾ, ಆಸ್ಟ್ರೇಲಿಯಾಹೀಗೆ ಹತ್ತಾರು ಶಾಪ್ಪಿಂಗ್ ಮಾಡುತ್ತಾ, ವಿಹಾರ ಹೋಗುತ್ತಾ, ಕಂಡ ಕಂಡಲ್ಲಿ ಮನೆ, ವಿಲ್ಲಾ, ಫ್ಲಾಟ್ ಖರೀದಿಸುತ್ತಾ, ಮೈತುಂಬಾ ಬಂಗಾರ, ವಜ್ರದ ಒಡವೆಗಳನ್ನು ಹೇರಿಕೊಂಡು ತಾವೊಬ್ಬರೇ ಖುಷಿಪಡಬಹುದಿತ್ತಲ್ಲ ? ಹಾಗೆ ಮಾಡಿದರೆ ಯಾರೂ ಅವರನ್ನೂ ಪ್ರಶ್ನಿಸುತ್ತಿರಲಿಲ್ಲ, ಇನ್ಕಮ್ ಡೆಪಾಟ್ಮೆರ್ಂಟಿನವರ ಹೊರತಾಗಿ.

ಆದರೆ ಸುಧಾಮೂರ್ತಿಯವರು ಎಲ್ಲಾ ಶೋಕಿಗಳಿಂದ ಬಲು ದೂರ. ಅವರಿಗೆ ಇದಾವುದೂ ಬೇಕಾಗಿಲ್ಲ. ಅವರಿಗೆ ಬಂಗಾರ, ಒಡವೆ, ವಾಚು, ವಜ್ರದ ಓಲೆ ಇವಾವುಗಳ ಮೇಲೂ ಆಸಕ್ತಿಯೇ ಇಲ್ಲ. ಇನ್ನು ಕ್ಲಬ್, ಕಿಟ್ಟಿ ರೆಸಾರ್ಟುಗಳಿಗೆ ಮಜಾ ಮಾಡಲು ಅವರಿಗೆ ಪುರುಸೊತ್ತಿಲ್ಲ. ಇತ್ತೀಚಿಗೆ ಅವರು ಯಾವುದೋ ಪತ್ರಿಕೆ ಸಂದರ್ಶನದಲ್ಲಿ ಹೇಳಿದ್ದರು. ಅದೇನೆಂದರೆ, ತಾವು ಹೊಸ ಸೀರೆ ಖರೀದಿಸಿ ಸರಿಸುಮಾರು ಇಪ್ಪತ್ತು ವರ್ಷಗಳಾದವೆಂದು. ಅವರು ಒಂದು ರೀತಿಯಲ್ಲಿ ಸಾಧ್ವಿಯ ಹಾಗೆ ಬದುಕುತ್ತಿದ್ದಾರೆ.

ಅವರೆಂಥ ಗೃಹಿಣಿಯೆಂದರೆ, ಅವರು ಇತರ ಹೆಂಗಸರಂತೆ ಮೇಕ್ ಅಪ್ ಕೂಡ ಮಾಡಿಕೊಳ್ಳುವುದಿಲ್ಲ. ಅಷ್ಟು ಸಿಂಪಲ್. ಅವರಿಗೆ ಯಾವ ಅಜೇಂಡಾವೂ ಇದ್ದಂತಿಲ್ಲ. ಅಂದರೆ ಅವರಿಗೆ ವಿಧಾನ ಪರಿಷತ್ ಸದಸ್ಯೆ ಆಗಬೇಕು, ರಾಜ್ಯ ಸಭಾ ಆಗಬೇಕು, ಯಾವುದಾದರೂ ಪ್ರಶಸ್ತಿ ಹೊಡೆದುಕೊಳ್ಳಬೇಕುಹೀಗೆಲ್ಲಾ ಯಾವ ಆಸೆಗಳಾಗಲಿ, ದುರುದ್ದೇಶಗಳಾಗಲಿ, ಇದ್ದಂತಿಲ್ಲ. ಅವರಾಯಿತು, ಅವರ ಕೆಲಸವಾಯಿತು. ಇತ್ತೀಚೆಗಂತೂ ಅವರು ಪುಸ್ತಕ ಬರೆಯುವುದರಲ್ಲಿ ನಿರತರಾಗಿದ್ದಾರೆ. ಅವರ ಪುಸ್ತಕಗಳು ಭಾರಿ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಅವರ ಪುಸ್ತಕಗಳು ಭಾರತದ ಎಲ್ಲ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿವೆ.

ಇಂಥ ಹೆಣ್ಣು ಮಗಳ ಬಗ್ಗೆ ಯಾರಾದರೂ ಕೇವಲವಾಗಿ ಮಾತಾಡಿದರೆ ಬಹಳ ಬೇಸರವಾಗುತ್ತದೆ. ಇವರೇನು ಮನುಷ್ಯರಾ, ಹೊಟ್ಟೆಗೆ ಏನು ತಿನ್ನುತ್ತಾರೆ ಎಂದು ಪ್ರಶ್ನಿಸಬೇಕೆಂದು ಅನಿಸುತ್ತದೆ. ಕಾರಣ ಸುಧಾಮೂರ್ತಿ ಅವರಂಥವರು ನೊಂದು ಕೆಲಸದಿಂದ ಹಿಂದೆ ಸರಿದರೆ, ಅದರ ಹಾನಿ ಇಡೀ ಸಮಾಜಕ್ಕಾಗುತ್ತದೆ. ನಮ್ಮ ನಡುವೆ ಇರುವ ಕೈಬೆರಳಿನಷ್ಟು ಜನರೇ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತಿರುವವರು. ಅವರೂ ಕೈ ಚೆಲ್ಲಿದರೆ, ಸಮಾಜದ ಮೇಲಾಗುವ ಹಾನಿ ಅಷ್ಟಿಷ್ಟಲ್ಲ.

ಹೀಗಾಗಿ ಯಾರೋ ಅವಿವೇಕಿಗಳು ಹೇಳಿದ್ದಾರೆಂದು ಸುಮ್ಮನಾಗಬಾರದು. ಅಂಥವರ ಮೂಲ ಉದ್ದೇಶವನ್ನು ಪ್ರಶ್ನಿಸಲೇಬೇಕು.

ಯಾಕೆಂದರೆ ಇಂಥವರು ತಾವೇನು ತಮ್ಮ ಕಿಸೆಯಿಂದ ಐದು ಪೈಸೆ ಬಿಚ್ಚುವುದಿಲ್ಲ. ಜೀವನದಲ್ಲಿ ಪರರಿಗೆ ಉಪಕಾರ ಮಾಡಿರುವುದಿಲ್ಲ. ಬರೀ ಬೇರೆಯವರ ಕಾಲೆಳೆಯುವುದು, ಲೂಸ್ ಟಾಕ್ ಮಾಡುವುದು, ಟೀಕೆ ಮಾಡುವುದು.. ಇಂಥ ಕಾಯಕದಲ್ಲೇ ನಿರತರಾಗಿರುತ್ತಾರೆ. ಇಂಥವರ ಕಾಯಿಲೆಯೇನೆಂದರೆ ದೊಡ್ಡ ಜನರನ್ನು ಟೀಕೆ ಮಾಡಿ ಪ್ರಸಿದ್ಧರಾಗಬಹುದು ಎಂಬುದು. ಪ್ರಕಾಶ ರೈ ಎಂಬ ಸಾಮಾನ್ಯ ನಟನೊಬ್ಬ ಮೋದಿಯನ್ನು ಟೀಕಿಸಿ ದೊಡ್ಡವನಾಗುವ ಕನಸು ಕಾಣಲಿಲ್ಲವೇ, ಹಾಗೆ. ಇದು ಅನೇಕರ ವ್ಯಾಧಿ. ವ್ಯಾಧಿಯುಳ್ಳವರಿಗೆ ಚಿಕಿತ್ಸೆ ನೀಡದೆ ಸುಮ್ಮನೆ ಬಿಡಬಾರದು. ಇವರನ್ನು ಉಪೇಕ್ಷಿಸಿದಷ್ಟೂ ಇವರ ವಾಂಛೆಗಳು ಹೆಚ್ಚಾಗುವುದುಂಟು.

ಸಾಲದ ದಸರಾ ಉತ್ಸವವನ್ನು ಸುಧಾಮೂರ್ತಿ ಅವರು ಉದ್ಘಾಟಿಸುತ್ತಿರುವುದು ಕನ್ನಡಿಗರ ಮನೆ ಮಗಳೊಬ್ಬಳು ಮಾಡುತ್ತಿದ್ದಾರೆ ಎಂಬಷ್ಟು ಸಂತಸದ ಸಂಗತಿ.