ಕೆಟಿಎಗೆ ದಿನಾಂಕ ನಿಗದಿ

Posted In : ಸಿನಿಮಾಸ್

ಕಳೆದ ನಾಲ್ಕು ವರ್ಷಗಳ ಹಿಂದೆ ಕಿರುತೆರೆಯ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಿದ್ದ ‘ಕನ್ನಡ ಟೆಲಿ ಅವಾರ್ಡ್’ ಕಾರ್ಯಕ್ರಮ ಎರಡನೇ ಬಾರಿಗೆ ನಡೆಸಲು ದಿನಾಂಕ ನಿಗದಿಯಾಗಿದೆ. ಈ ವರ್ಷ ಯಶಸ್ವಿ ಯಾಗಿ ನಡೆಸಲು ಸಜ್ಜಾಗಿರುವ ಸುಪ್ರೀಂ ಸಲ್ಯೂಷನ್ಸ್ ತಂಡ, ಜನವರಿ 18ರಂದು ಬೆಂಗಳೂರಿನ ಜ್ಞಾನ ಜ್ಯೋತಿ ಆಡಿಟೋರಿಯಂನಲ್ಲಿ ವಿಭಿನ್ನವಾಗಿ ಕಾರ್ಯಕ್ರಮ ಆಯೋಜಿಸಲು ಸಕಲ ಸಿದ್ಧತೆ ನಡೆಸಿದೆ.

ತಾಂತ್ರಿಕವಾಗಿ ಕಳೆದ ಕಾರ್ಯಕ್ರಮಕ್ಕಿಂತಲೂ ವಿಶಿಷ್ಟವಾಗಿ ಈ ಬಾರಿ ಯದ್ದನ್ನು ನಡೆಸಲು ತೀರ್ಮಾನಿಸಿರುವ ಆಯೋಜಕರು, ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ನಡೆಯುವ ಅವಾರ್ಡ್ ಫಂಕ್ಷನ್‌ನಂತೆ ‘ಕನ್ನಡ ಟೆಲಿ ಅವಾರ್ಡ್’ ರೂಪಿಸಲು ತಯಾರಾಗಿದ್ದಾರೆ. ಈ ಅವಾರ್ಡ್ ಸೆರಿಮನಿಯಲ್ಲಿ ಹಲವು ಖ್ಯಾತ ಸೆಲೆಬ್ರಿಟಿಗಳಿಂದ 10 ವೈವಿಧ್ಯಮಯ ಮನ ರಂಜನಾ ಕಾರ್ಯಕ್ರಮ ನಡೆಸಲು ಸಮಾ ರಂಭದ ಆಯೋಜಕರು ಸೂಕ್ತ ಸಿದ್ಧತೆ ನಡೆಸಿದ್ದಾರೆ.

ಧಾರಾವಾಹಿಗಳು, ರಿಯಾಲಿಟಿ ಶೋ, ಹಾಸ್ಯ, ಸಾಮಾಜಿಕ ಪ್ರೋಗ್ರಾಮ್‌ಗಳಿಂದ ಆಯ್ದ ಕಲಾವಿದರನ್ನು ಪ್ರಶಸ್ತಿಗೆ ಜ್ಯೂರಿಗಳು ಆರಿಸುತ್ತಾರೆ. ಕನ್ನಡದ ಎಲ್ಲ ಮನರಂಜನಾ ವಾಹಿನಿಗಳು, ಸುದ್ದಿ ವಾಹಿನಿಗಳು ಸಮಾರಂಭದಲ್ಲಿ ಭಾಗವಹಿಸಲಿವೆ. ಕನ್ನಡ ಕಿರು ತೆರೆಯ  ಕಲಾವಿದರಿಗೆ ‘ರಿವಾರ್ಡ್ ಆಂಡ್ ರೆಕಗ್ನಿಷನ್ ನೈಟ್’ಆಗಲಿರುವ ಈ ಸಂಜೆಯನ್ನು ಚಂದಗಾಣಿಸಲು ಆಯೋಜಕರು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ.

Leave a Reply

Your email address will not be published. Required fields are marked *

four + twelve =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

 

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

Back To Top