About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ಮನೆ ಮಗಳು ಗೌರಿಗೆ ಅದ್ಧೂರಿ ಸೀಮಂತ..!

ಹಾವೇರಿ: ನಮ್ಮ ಸಂಪ್ರದಾಯದಲ್ಲಿ ಚೊಚ್ಚಲ ಬಸುರಿಗೆ ಸೀಮಂತ ನಡೆಸುವ ಶಾಸ್ತ್ರವಿದೆ. ಹಾಗೆಯೇ ರೈತನ ಮನೆಯೊಂದರಲ್ಲಿ ಸೀಮಂತದ ಸಂಭ್ರಮ ಮನೆ ಮಾಡಿತ್ತು.

ನೆರೆದಿದ್ದವರೆಲ್ಲಾ ಖುಷಿ-ಖುಷಿಯಿಂದ ಓಡಾಡುತ್ತಿದ್ದರು, ಗರ್ಭಿಣಿಯನ್ನು ಮದುಮಗಳಂತೆ ಸಿಂಗಾರ ಮಾಡಲಾಗಿತ್ತು. ಮನೆ ಮುಂದೆ ತಳಿರು, ತೋರಣ ಹಾಕಲಾಗಿತ್ತು, ಹೆಂಗಸರೆಲ್ಲ ಹೊಸ ಸೀರೆಯನ್ನುಟ್ಟು ಉತ್ಸಾಹದಿಂದಿದ್ದರು. ಇಷ್ಟಕ್ಕೂ ಇಲ್ಲಿ ಸೀಮಂತ ಮಾಡುತ್ತಿರುವುದ ಮನೆ ಮಗಳು ಹಸು ಗೌರಿಗೆ.

ಹೌದು, ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದ ರೈತ ರಮೇಶಗೌಡ ಕಾಡನಗೌಡರ ಮನೆಯಲ್ಲಿ ಗೌರಿಗೆ ಸೀಮಂತ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ಗ್ರಾಮದಲ್ಲಿ ಯಾರೋ ಆರು ತಿಂಗಳ ಆಕಳು ಕರುವೊಂದನ್ನ ಕಸಾಯಿಖಾನೆಗೆ ತೆಗೆದುಕೊಂಡು ಹೋಗ್ತಿದ್ದರು. ಆಗ ಆಕಳನ್ನು ಕಂಡು ಇನ್ನೂರು ರೂಪಾಯಿ ಕೊಟ್ಟು ಖರೀದಿಸಿದ್ದೆ. ಗೌರಿ ಬಂದ್ಮೇಲೆ ನಮ್ಮ ಕುಟುಂಬಕ್ಕೆ ಸಾಕಷ್ಟು ಒಳ್ಳೆಯದು ಆಗಿದೆ ಅಂತಾರೆ ರೈತ ರಮೇಶಗೌಡ.

ಇದೀಗ ಮನೆ ಮಗಳಂತಿರುವ ಗೌರಿ ಅಂದರೆ ಮನೆಮಂದಿಗೆಲ್ಲ ಪಂಚಪ್ರಾಣ. ಮನೆಯ ಮುದ್ದಿನ ಮಗಳಿಗೆ ಈಗ 8 ತಿಂಗಳು. ಈಕೆಗೆ ಇದು ಚೊಚ್ಚಲ ಬಸುರಿ ಆಗಿರುವುದರಿಂದ ಸೀಮಂತ ಕಾರ್ಯ ನೆರವೇರಿಸಿದ್ದಾರೆ. ಗೌರಿಗೆ ಹೊಸ ಸೀರೆ ತೊಡಿಸಿ, ಹಸಿರು ಬಳೆ, ಚಿನ್ನದ ಸರ ಕೊರಳಿಗೆ ಗೆಜ್ಜೆ ಹಾರ, ಹೂವಿನ ಹಾರ ಹೀಗೆ ನಾನಾ ರೀತಿಯ ಅಲಂಕಾರ ಮಾಡಿದ್ದಾರೆ. ಗೌರಿಗಾಗಿ ಮಂಟಪ ಸಿದ್ಧಪಡಿಸಿ ಉಡಿ ತುಂಬಿ, ಸಿಹಿ ತಿನಿಸುಗಳನ್ನ ತಯಾರಿಸಿದ್ದಾರೆ. ಮುತ್ತೈದೆಯರೆಲ್ಲ ಸೇರಿ ಸೋಬಾನ ಪದಗಳನ್ನು ಹಾಡಿ, ಆರತಿ ಎತ್ತಿ ಹರಸಿದರು.

ಇನ್ನು ಸಂಬಂಧಿಕರು, ಗ್ರಾಮಸ್ಥರಿಗೆಲ್ಲ ಭೂರಿ ಭೋಜನದ ವ್ಯವಸ್ಥೆಯೂ ಇತ್ತು. ಸೀಮಂತ ಕಾರ್ಯಕ್ರಮಕ್ಕೆ ಬಂದವರೆಲ್ಲ ಭರ್ಜರಿ ಭೋಜನ ಸವಿದು ಗೌರಿಗೆ ಹರಸಿದರು.

Tags

Related Articles

Leave a Reply

Your email address will not be published. Required fields are marked *

Language
Close