About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

“ಎಲ್ಲಾ ಗುಂಡಿ ಮುಚ್ಚಲು ಆಗಲ್ಲ, ನೀವೇ ಎಚ್ಚರವಹಿಸಿ ವಾಹನ ಸವಾರರೇ”…!

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ

ಬೆಂಗಳೂರು: ಎಲ್ಲಿಯೂ ಪೂರ್ಣ ಪ್ರಮಾಣದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಆಗುವುದಿಲ್ಲ.ಇನ್ನೂ, ಮಳೆ ಸುರಿದರೆ, ಗುಂಡಿ ಗಳು ಆಕಸ್ಮಿಕವಾಗಿಯೇ ಇರುತ್ತವೆ. ಹೀಗಾಗಿ, ವಾಹನ ಸವಾರರು ಎಚ್ಚರದಿಂದ ಇರಬೇಕು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ನಗರದಲ್ಲಿಂದು ಪುರಭವನದ ಸಭಾಂಗಣದಲ್ಲಿ ಸಾರಿಗೆ ಇಲಾಖೆ, ಸಂಚಾರ ಪೊಲೀಸ್ ಸಹಯೋಗದೊಂದಿಗೆ ಆಯೋಜಿಸಿದ್ದ, 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2019 ಸಮಾರೋಪ ಸಮಾರಂಭ ಅವರು ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಕಡಿವಾಣ ಹಾಕಲು ಹದಿನೈದು ವರ್ಷ ಹಳೆಯ ವಾಹನಗಳಿಗೆ ನಿಷೇಧ ಹೇರಲಾಗುವುದು ಎಂದು ಹೇಳಿದರು.

ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ವಾಹನಗಳ ನಿಷೇಧ ಅಗತ್ಯತೆ ಇದೆ. ಅದು ಅಲ್ಲದೆ, ಬೆಂಗಳೂರು ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ತಗ್ಗಿಸಲು ವಾರ್ಡ್ ಮಟ್ಟದಲ್ಲಿ ಜಾಗೃತಿ, ಅರಿವು ಕಾರ್ಯಕ್ರಮ ನಡೆಸಲಾಗುವುದು. ಬಳಿಕ, ಕಾರು ವಾಹನ ಸಂಚಾರ ತಗ್ಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಒಟ್ಟು 7 ಕೋಟಿ ಜನಸಂಖ್ಯೆ ಇದೆ. ಇದರ ಅರ್ಥ ಭಾಗದಷ್ಟು ವಾಹನಗಳು ನೊಂದಣಿ ಆಗಿವೆ. ಇನ್ನೂ, ರಾಜಧಾನಿ ಬೆಂಗಳೂರಿನಲ್ಲಿಯೇ, ಒಂದು ಕೋಟಿ ಜನ ಸಂಖ್ಯೆ ಇಲ್ಲಿಯೂ, 1 ಕೋಟಿ ವಾಹನಗಳು ಸಂಚಾರ ಮಾಡುತ್ತಿವೆ. ಇದರ ನಡುವೆ ಹೊರ ರಾಜ್ಯಗಳಿಂದಲೂ ಲಕ್ಷಾಂತರ ವಾಹನ ಬರುತ್ತಿವೆ ಎಂದು ಹೇಳಿದರು.

ಅಂಕಿ ಅಂಶಗಳ ಪ್ರಕಾರ ಹಿಂದಿನ ಸಾಲಿನಲ್ಲಿ, ವಾಯು ಮಾಲಿನ್ಯ ಕಾ

ರಣದಿಂದಲೇ ಬೆಂಗಳೂರಿನಲ್ಲಿಯೇ ನಾಲ್ಕು ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದರು. ಮುಂದಿನ ದಿನಗಳ ಇದರ ಸಂಖ್ಯೆ ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇನ್ನೂ, ಅತಿ ವೇಗವಾಗಿ, ರಸ್ತೆ ಅಭಿವೃದ್ಧಿ ಆಗುತಿತ್ತು, ಇದರಿಂದ ಅಪಘಾತ ಗಳ ಸಂಖ್ಯೆಯ ಹೆಚ್ಚಾಗಿದೆ ಎಂದ ಅವರು,
ವಾಹನ ಚಾಲಕ ಕಾನೂನು ಪಾಲಿಸಿದರೆ, ಯಾವುದೇ ಅವಘಡ ಸಂಭವಿಸುವುದಿಲ್ಲ ಎಂದು ತಮ್ಮಣ್ಣ ನುಡಿದರು.

Tags

Related Articles

Leave a Reply

Your email address will not be published. Required fields are marked *

Language
Close