ವಿಶ್ವವಾಣಿ

ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018: ಡಿಸಿಎಂ ಪರಮೇಶ್ವರ್ ಚಾಲನೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018 ಕಾರ್ಯಕ್ರಮಕ್ಕೆ ಡಿಸಿಎಂ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು.

 ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆ ಎದುರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೇಂದ್ರ ಸರಕಾರ ಆರಂಭಿಸಿರುವ ಸ್ವಚ್ಛ ಭಾರತ ಯೋಜನೆ ಒಂದು ಹೊಸ ಚಿಂತನೆ ಮಾಡಲಾಗಿದೆ.

ಸ್ವಚ್ಛತೆ ನಮ್ಮೊಳಗಿರಬೇಕು. 22 ಲಕ್ಷ ಶೌಚಾಲಯ ಕಟ್ಟುವುದು ಸಾಮಾನ್ಯ ಅಲ್ಲ. ಇದನ್ನು ನಮ್ಮ ಇಲಾಖೆಗಳು ಮಾಡಿವೆ. ಅಕ್ಟೋಬರ್ 2ರೊಳಗೆ ಬಹಿರ್ದೆಸೆ ಮುಕ್ತ ಕರ್ನಾಟಕ ನಮ್ಮದಾಗಲಿದೆ. ಸ್ವಚ್ಛತಾ ಕಾರ್ಯಕ್ರಮವನ್ನು ಕರ್ನಾಟಕ ಒಂದು ಸವಾಲಾಗಿ ತೆಗೆದುಕೊಂಡಿದೆ. ಸ್ವಚ್ಛತೆಯಲ್ಲಿ ಕರ್ನಾಟಕ್ಕಕ್ಕೆ ಮೊದಲ ಸ್ಥಾನ ಪಡೆಯುವಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.