About Us Advertise with us Be a Reporter E-Paper

Breaking Newsರಾಜ್ಯ

ತಡರಾತ್ರಿ ರೌಡಿಗಳ ಮನೆ ಮೇಲೆ ಡಿಸಿಪಿ ರವಿ ಚೆನ್ನಣ್ಣವರ್ ದಾಳಿ

ಬೆಂಗಳೂರು: ತಡರಾತ್ರಿ ರೌಡಿಗಳಿಗೆ ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ರವಿ ಚೆನ್ನಣ್ಣವರ್ ಬಿಸಿ ಮುಟ್ಟಿಸಿದ್ದಾರೆ. ರವಿ ಚೆನ್ನಣ್ಣವರ್ ನೇತೃತ್ವದಲ್ಲಿ ಪೊಲೀಸರು ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಕಲಾಸಿಪಾಳ್ಯ ಕಾಟನ್‍ಪೇಟೆ, ಸಿಟಿ ಮಾರ್ಕೆಟ್ ಸೇರಿದಂತೆ ಮೂರ್ನಾಲ್ಕು ಠಾಣೆಗಳ ವ್ಯಾಪ್ತಿಯ ಮಾರ್ಕೆಟ್ ವೇಡಿ, ಜಾನ್ಸನ್, ರವಿ ಅಲಿಯಾಸ್ ಬಾಬಿ ರವಿ ಸೇರಿ 10ಕ್ಕೂ ಹೆಚ್ಚು ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ.

ವಾರೆಂಟ್ ಬಾಕಿ ಇದ್ದವರು, ನ್ಯಾಯಾಲಯಕ್ಕೆ ಹಾಜರಾಗದವರಿಗೆ ವಾರ್ನಿಂಗ್ ನೀಡಿದ್ದಾರೆ. ಅಲ್ಲದೇ ರೌಡಿ ಶೀಟರ್ ಗಳ ಮನೆಯಲ್ಲಿ ಮಾರಕಾಯುಧ ಇದೆಯೇ ಎಂದು ಪರಿಶೀಲನೆ ನಡೆಸಿದ್ದಾರೆ. ರವಿ ಅಲಿಯಾಸ್ ಬಾಬಿ ರವಿ ಮನೆಯಲ್ಲಿ ಒಂದು ಡ್ರಾಗರ್ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆದಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close