ಡೆಡ್ ಸ್ಟೋರೇಜ್ ತಲುಪಿದ ಕೆಆರ್‌ಎಸ್

Posted In : ಮೈಸೂರು, ರಾಜ್ಯ

ಮೈಸೂರು: ಅವಧಿಗೂ ಮುನ್ನ ಆಗಾಗ ಮಳೆಯಾಗಿ ವಾತಾವರಣ ತಂಪಾಗುತ್ತಿದ್ದರೂ ದಿನದಿಂದ ದಿನಕ್ಕೆ ನೀರಿನ ಮಟ್ಟ ಕಡಿಮೆಯಾಗುತ್ತಾ ಡೆಡ್ ಸ್ಟೋರೆಜ್ ತಲುಪಿರುವ ಕೃಷ್ಣರಾಜ ಸಾಗರ ಕೆಆರ್‌ಎಸ್ ಜಲಾಶಯವನ್ನು ಗಮನಿಸಿದರೆ ಮುಂದೇನು ಎಂಬ ಆತಂಕ ಮನೆಮಾಡಿದೆ.

ಕಳೆದ ಬಾರಿಗೆ ಹೋಲಿಸಿದರೆ ಜನವರಿಯಿಂದ ಇಲ್ಲಿವರೆಗೆ ಉತ್ತಮ ಮಳೆಯಾಗಿದೆ. ಕಳೆದ ವರ್ಷ ವಾಡಿಕೆಯ ಮಳೆಯಾಗದ ಕಾರಣ ಜಲಾಶಯ ಭರ್ತಿಯಾಗಿರಲಿಲ್ಲ. ಇದರ ಪರಿಣಾಮ ರೈತರ ಬೆಳೆಗಳಿಗೂ ನೀರು ಸಿಗದೆ ರೈತರು ಸಂಕಷ್ಟದ ಜೀವನ ನಡೆಸುವಂತಾಗಿತ್ತು. ಈಗಾಗಲೇ ರೈತರ ಜಮೀನಿಗೆ ನೀರು ಹರಿಸದೆ, ಕೇವಲ ಕುಡಿಯಲ್ಲಷ್ಟೆ ನೀರನ್ನು ಬಳಸುತ್ತಿದ್ದರೂ ಜಲಾಶಯ ಡೆಡ್ ಸ್ಟೋರೆಜ್ ತಲುಪಿರುವುದು ಭಯದ ವಾತಾವರಣವನ್ನು ಸೃಷ್ಟಿಸಿದೆ.

124.80 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 73.95 ಅಡಿಗಿಂತಲೂ ಕಡಿಮೆಯಾಗಿದೆ. 74 ಅಡಿವರೆಗಿನ ನೀರಷ್ಟೇ ಬಳಕೆಗೆ ಯೋಗ್ಯವಾಗಿದೆ. ಕುಡಿಯುವ ನೀರನ್ನು 68 ಅಡಿವರೆಗೂ ಬಳಸಬಹುದಾಗಿದ್ದು ಆ ನಂತರದ ನೀರು ಕುಡಿಯುವ ನೀರಿನ ಬಳಕೆಗೆ ಯೋಗ್ಯವಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ ಅದರಲ್ಲಿ ಪಾಚಿ, ಕಸ ಸೇರಿದಂತೆ ತ್ಯಾಜ್ಯಗಳಿರುವುದರಿಂದ ಬಳಸುವುದಕ್ಕಾಗುವುದಿಲ್ಲ.

ಅದಕ್ಕಿಂತ ಹೆಚ್ಚಾಗಿ ಅದನ್ನು ಮೋಟಾರ್ ಪಂಪ್ ಬಳಸಿ ಮೇಲೆತ್ತಬೇಕಾಗುತ್ತದೆ. ಇಂತಹ ಪರಿಸ್ಥಿತಿ ಬಾರದಿರಲಿ ಎಂಬುದು ಈಗ ಎಲ್ಲರ ಪ್ರಾರ್ಥನೆ. ಜಲಾಶಯದಿಂದ ಅತಿ ಹೆಚ್ಚು ಅಂದರೆ 800 ಕ್ಯೂಸೆಕ್ಸ್ ನೀರು ಕೇವಲ ರಾಜಧಾನಿ ಬೆಂಗಳೂರಿಗೇ ಬೇಕಾಗಿದೆ. ಕೆಆರ್‌ಎಸ್ ತುಂಬದೇ ಇದ್ದಲ್ಲಿ ರಾಜಧಾನಿಯ ಜನರು ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ. ಈಗಾಗಲೇ ಹಲವೆಡೆ ಅಂಥ ಪರಿಸ್ಥಿತಿ ಇರುವುದನ್ನು ಅಲ್ಲಗಳೆಯುವಂತಿಲ್ಲ.

One thought on “ಡೆಡ್ ಸ್ಟೋರೇಜ್ ತಲುಪಿದ ಕೆಆರ್‌ಎಸ್

  1. Sir, YOU HAVE GOT SUPPORTIVE WRITERS to insist it to the centre. aAt the same time party line work is needed now I feel. Thanks.. If I have to say silt is accupied the places of water> removal of ditch is also needed.

Leave a Reply

Your email address will not be published. Required fields are marked *

fifteen − eleven =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top