About Us Advertise with us Be a Reporter E-Paper

ಅಂಕಣಗಳು

ತೈಲ ಬೆಲೆ ಇಳಿಕೆಯಿಂದಾಗಿ, ಕೈತಪ್ಪಿದ ಪ್ರತಿಪಕ್ಷಗಳ ಅಸ್ತ್ರ

* ಜಗದೀಶ ಮಾನೆ

ಇವತ್ತಿನ ಅಗತ್ಯತೆಗಳಲ್ಲಿ ಪ್ರಮುಖವಾಗಿ ಮನುಷ್ಯನಿಗೆ ಬೇಕಾದದ್ದು ಒಂದು ಮೊಬೈಲ್ ಇಂಟರನೆಟ್, ಮತ್ತೊಂದು ವಾಹನ ಸೌಕರ್ಯ. ಇವೆರಡೂ ಜನಸಾಮಾನ್ಯನ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಸೇರಿಹೋಗಿವೆ. ಇವೆರಡು ಇಲ್ಲದೆ ಹೋದರೆ ವಿಶ್ವದಾದ್ಯಂತ ಜನರ ಜೀವನ ಅಲ್ಲೋಲಕಲ್ಲೋಲವಾಗಿ ಹೋಗುವದರಲ್ಲಿ ಸಂಶಯವೇ ಇಲ್ಲ. ಮೊಬೈಲ್ ಇಂಟರ್‌ನೆಟ್‌ಗಂತೂ ಸಮಸ್ಯೆ ಇಲ್ಲ. ಕಳೆದ ಐದು ವರ್ಷಗಳ ಹಿಂದೆ ಒಂದು ಜಿಬಿ ಇಂಟರ್‌ನೆಟ್‌ಗೆ 250 ರೂಪಾಯಿ ಇತ್ತು, ಅಷ್ಟಿದ್ದರೂ ಜನ ಅನಿವಾರ್ಯವಾಗಿ ಉಪಯೋಗಿಸುತ್ತಿದ್ದರು. ಮೋದಿ ಪ್ರದಾನಿಯಾದ ಬೆನ್ನಲ್ಲೆ ಇಂಟರ್‌ನೆಟ್ ಬೆಲೆ ಅತ್ಯಂತ ಅಗ್ಗಕ್ಕಿಳಿಯಿತು.

ಪ್ರಾರಂಭದಲ್ಲಿ ತೈಲ ಬೆಲೆ ಕೂಡಾ ಇಳಿದಿತ್ತು. ಆಗ ಜನರು ಕೂಡ ಮೋದಿ ಸರಕಾರವನ್ನು ಶ್ಲಾಘಿಸಿದ್ದರು. ಆದರೆ ಕಳೆದ ತಿಂಗಳ ಹಿಂದೆ 83 ರೂ.ವರೆಗೂ ಹೋಗಿತ್ತು. ವಿರೋಧ ಪಕ್ಷಗಳು ಇದೇ ಅಸ್ತ್ರವನ್ನು ಬಳಸಿ ಭಾರತ ಕರೆಕೊಟ್ಟು ಪ್ರಧಾನಿ ಮೋದಿಯವರನ್ನು ತಪ್ಪಿತಸ್ಥರನ್ನಾಗಿಸಲು ಪ್ರಯತ್ನಿಸಿದವು. ಆದರೀಗ ಗಗನಕ್ಕೇರಿದ ತೈಲ ದರ ಇಳಿಮುಖವಾಗಿದೆ. ಕಡಿಮೆಯಾದ ತೈಲ ದರದಿಂದಾಗಿ ವಿಪಕ್ಷಗಳಿಗೆ ಮಂಕುಬಡಿದಂತಾಗಿದೆ. ಮೋದಿಯ ಇಂಧಾನಾಸ್ತ್ರ ಎಲ್ಲರ ಬಾಯಿ ಮುಚ್ಚಿಸಿಬಿಟ್ಟಿದೆ. ಪೆಟ್ರೋಲ್ ಡಿಜೇಲ್ ಬೆಲೆ ಹೆಚ್ಚಳದಿಂದಾಗಿ ಈ ಹಿಂದೆ ನಿತ್ಯವಸ್ತುಗಳ ಬೆಲೆಗಳು ಕೂಡಾ ಹೆಚ್ಚಾಗಿದ್ದವು. ಕೈಗಾರಿಕಾ ವಸ್ತುಗಳ ಸಾಗಾಣಿಕಾದಾರದಲ್ಲಿಯೂ ಹೆಚ್ಚಳವಾಗಿದೆ. ಮುಂದಿನ ಕೈಗಾರಿಕಾ ಉತ್ಪಾದನಾ ವಸ್ತುಗಳ ಬೆಲೆಯಲ್ಲಿಯೂ ಹೆಚ್ಚಳವಾಗುವ ಸಾಧ್ಯತೆಗಳು ಇದ್ದವು. ಸಧ್ಯದ ಪರಿಸ್ಥಿತಿಯನ್ನು ನೋಡಿದರೆ ಈ ಲಕ್ಷಣಗಳಿಲ್ಲ. ಅಗಸ್‌ಟ್-ಸೆಪ್ಟೆಂಬರ್ ತಿಂಗಳಲ್ಲಿ ಸುನಾಮಿಯ ಅಲೆಗಳಂತೆ ಎದ್ದಿದ್ದ ತೈಲ ಸಮಸ್ಯೆಯ ಪರಿಣಾಮ ಅದಕ್ಕೆ ಮುಖ್ಯ ಕಾರಣವಾಗಿತ್ತು. ಇದರಿಂದ ಕೇಂದ್ರ ಸರಕಾರವೂ ಕಂಗಾಲಾಗಿತ್ತು.

ಭಾರತದಲ್ಲಿ ಹೆಚ್ಚಿನವರ ಮನೆಯಲ್ಲಿ ಎರಡು-ಮೂರು ವಾಹನಗಳಿವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಬೆಂಗಳೂರಿನಂತಹ ಬೃಹತ್ ನಗರದಲ್ಲಿಯೇ ಸರಿಸುಮಾರು 80 ಲಕ್ಷಕ್ಕಿಂತ ಅಧಿಕಪ್ರಮಾಣಲ್ಲಿ ವಾಹನಗಳು ಇವೆ. ವಾಹನಗಳ ಬಳಕೆದಾರರ ಸಂಖ್ಯೆಯು ಹೆಚ್ಚಾಗುತ್ತಿದೆ. ತೈಲೋತ್ಪನ್ನ ರಾಷ್ಟ್ರಗಳಿಗೆ ಬೇಡಿಕೆ ಹೆಚ್ಚಾದಷ್ಟು ತೈಲ ಬೇಡಿಕೆ ಕೂಡಾ ಜಾಸ್ತಿಯಾಗುತ್ತಾ ಹೋಗುತ್ತದೆ. ವಿಶೇಷ ಜನರು ಕೆಲ ಸಂದರ್ಭದಲ್ಲಿ ತಮಗೆ ಬೇಕೆನಿಸುವಷ್ಟು, ಅಗತ್ಯ ಇರುವಷ್ಟು ನೀರು ಕುಡಿಯದಿದ್ದರೂ, ವಾಹನಗಳಿಗೆ ಪೆಟ್ರೋಲ್, ಡಿಸೆಲ್‌ನ್ನು ತುಂಬಿಸೋದನ್ನಂತು ಮರಿಯೋದಿಲ್ಲ. ಒಂದು ಸಮೀಕ್ಷೆಯ ಪ್ರಕಾರ ಭಾರತದಂತಹ ದೇಶ ದಿನವೊಂದಕ್ಕೆ 63ಲಕ್ಷ ಲೀಟರ್ ತೈಲವನ್ನು ಬಳಕೆ ಮಾಡುತ್ತದೆ. ಭಾರತದಲ್ಲಿ ಪೆಟ್ರೋಲ್ ಡಿಸೆಲ್ ಉತ್ಪನ್ನ ಪ್ರಮಾಣ ಕಡಿಮೆಯಾಗಿರೋದರಿಂದ ಸಹಜವಾಗಿ ತೈಲ ಉತ್ಪನ್ನ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಭಾರತ ಸಧ್ಯ ಜಗತ್ತಿನಲ್ಲೇ ಅತಿ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಮೂರನೇ ರಾಷ್ಟ್ರವಾಗಿದೆ.

ತೈಲ ಬೆಲೆಯ ಇಳಿಕೆಯಿಂದಾಗಿ ಕಳೆದ ಒಂದು ತಿಂಗಳೊಳಗಾಗಿ 10 ರಿಂದ 13 ರೂಪಾಯಿಯಷ್ಟು ತೈಲ ದರದಲ್ಲಿ ಇಳಿಕೆಯಾಗಿದೆ. ವಿಶ್ವ ಮಟ್ಟದಲ್ಲಿ ಇಳಿಕೆಗೊಂಡ ತೈಲೆ ಬೆಲೆಯನ್ನು ಜನಸಾಮಾನ್ಯರಿಗೆ ವರ್ಗಾಯಿಸಿದ್ದು ನಿಜಕ್ಕೂ ವಿಶೇಷ. ಈ ಮಧ್ಯೆ ವಿವಿಧ ಸರಕಾರಗಳೂ ಒಂದೆರಡು ರುಪಾಯಿಗಳಷ್ಟು ಇಳಿಕೆ ಮಾಡಿವೆ. ತೈಲ ಬೆಲೆಯನ್ನು ನಿರ್ಧಾರ ಮಾಡುವುದು ಅಂತರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆ. ಭಾರತದಲ್ಲಿಂದು ದಿನಬಳಕೆಯ ಪೆಟ್ರೋಲ್, ಡಿಸೆಲ್ ಬಂಕ್‌ಗಳಿಗೆ ಸಾರಾ ಸಗಟಾಗಿ ಹರಿದು ಬರೋದಿಲ್ಲ. ಭಾರತಕ್ಕೆ ಬರುವ ಪೆಟ್ರೋಲ್ ದೇಶಗಳನ್ನು ದಾಟಿ, ಹಲವು ಸಾಗರಗಳನ್ನು ದಾಟಿ ಬರಬೇಕು. ದಾರಿಯಲ್ಲಿ ಬರುವಾಗ ಸ್ವಲ್ಪ ಏರುಪೇರಾದರೂ ತೊಂದರೆ.

ಭಾರತ ತನಗೆ ಅಗತ್ಯವಿರುವ ತೈಲಕ್ಕಾಗಿ ಹೆಚ್ಚು ಅವಲಂಬಿತವಾಗಿರುವುದು ಅರಬ್ ರಾಷ್ಟ್ರಗಳಾದ ಇರಾನ್, ಇರಾಕ್‌ಗಳನ್ನು. ವಾಸ್ತವದಲ್ಲಿ ತೈಲ ಕಂಪನಿಗಳು ಭಾರತಕ್ಕೆ ಪೂರೈಕೆ ಮಾಡುವ ಪೆಟ್ರೋಲ್ ಬೆಲೆ, ಅಷ್ಟೇನು ದುಬಾರಿ ಅನಿಸುವದಿಲ್ಲ. ಪ್ರತಿ ಲೀಟರ್ ಪೆಟ್ರೋಲ್‌ಗೆ ತೆರಿಗೆಯ ಪ್ರಮಾಣವೇ ಶೇ.53 ರಷ್ಟು ಇರುತ್ತದೆ. ತೆರಿಗೆಯನ್ನು ಹೊರತುಪಡಿಸಿದರೆ, ಪೆಟ್ರೋಲ್‌ನ ಮೂಲ ಬೆಲೆ 30 ರಿಂದ 35 ರೂಪಾಯಿ, 23 ರಿಂದ 26 ರೂಪಾಯಿ. ಆದರೆ ಅರ್ಧಕ್ಕಿಂತ ಹೆಚ್ಚು ಪ್ರಮಾಣದಲ್ಲಿ ನಾವು ಅದಕ್ಕೆ ತೆರಿಗೆಯನ್ನು ಕಟ್ಟುತ್ತೇವೆ. ಕೇಂದ್ರ ಸುಂಕ, ರಾಜ್ಯಗಳ ವ್ಯಾಟ್, ಪೆಟ್ರೋಲ್ ಮಾಲೀಕರಿಗೆ ನೀಡುವ ಕಮೀಷನ್ ಎಲ್ಲವೂ ಸೇರಿ ಶೇ. 53 ರಷ್ಟು ತೆರಿಗೆಯನ್ನು ಗ್ರಾಹಕರೇ ಹೊರಬೇಕಾಗುತ್ತದೆ. ಈ ಎಲ್ಲ ರೀತಿಯ ಸುಂಕಗಳು ಸೇರಿ ಪೆಟ್ರೋಲ್, ಡಿಸೈಲ್ ಬೆಲೆ ಗಗನಕ್ಕೆ ಮುಟ್ಟಿತ್ತು.

ತೈಲ ಬೆಲೆ ಹೆಚ್ಚಳವಾಗಿದ್ದ ಸಂದರ್ಭದಲ್ಲಿ ದೇಶಾದ್ಯಂತ ಕೇಂದ್ರದ ವಿರುದ್ಧ ಮಾತ್ರ ಪ್ರತಿಭಟನೆಗಳಾಗಿರಲಿಲ್ಲ. ರಾಜ್ಯ ಸರಕಾರಕ್ಕೂ ರಾಜ್ಯದ ತೆರಿಗೆಯಲ್ಲಿ ಕೂಡಾ ಕೆಲ ಪ್ರಮಾಣದಲ್ಲಿ ಇಳಿಕೆ ಮಾಡುವಂತೆ ಹೋರಾಟ ಮಾಡಿದ್ದರು. ಜನರ ಪ್ರತಿಭಟನೆ ತೀವ್ರವಾದಾಗ ಕುಮಾರಸ್ವಾಮಿಯವರು 2 ರೂಪಾಯಿಗಳಷ್ಟು ಕಡಿಮೆ ಮಾಡಿದ್ದರು. 2018ರ ನವೆಂಬರ್ 28ರ ವರೆಗೆ ನವದೆಹಲಿಯಂತಹ ದೊಡ್ಡ ನಗರದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 73 ರೂ. ಡಿಸೈಲ್ 68 ರೂ. ಮುಂಬೈನಲ್ಲಿ, 79.12 ಪೈಸೆ, ಡಿಸೈಲ್‌ಗೆ 71 ರೂ. ಚೆನ್ನೈನಲ್ಲಿ, ಪೆಟ್ರೋಲ್ 76 ರೂ. ಡಿಸೈಲ್ 72 ರೂ., ಬೆಂಗಳೂರಿನಲ್ಲಿ 74 ರೂ. 68 ರೂ. ಡಿಸೈಲ್ ದರವಿತ್ತು. ಹೀಗೆ ವರ್ಷ ಪೂರ್ತಿ ಏರಿದ್ದ ತೈಲ ದರ ಈಗ ಕುಸಿತ ಕಂಡಿದೆ. ತೈಲ ಬೆಲೆ ಕಡಿಮೆಯಾದಷ್ಟೂ, ಇದರ ರಾಜಕೀಯ ಲಾಭವನ್ನು ನರೇಂದ್ರ ಮೋದಿಯವರು ಪಡೆದುಕೊಳ್ಳುತ್ತಾರೆ. ಈ ಹಿಂದೆ ವಿಪಕ್ಷಗಳು ಒಂದು ತಂತ್ರ ಹೂಡಿದ್ದವು. ಮುಂದಿನ ಚುನಾವಣೆಯ ಪೂರ್ವ ತಯಾರಿಯಲ್ಲಿ ತೈಲ ಬೆಲೆಯನ್ನು ಪ್ರಮುಖ ಅಸ್ತ್ರದಂತೆ ಬಳಸಿಕೊಂಡು ಪ್ರಚಾರ ನಡೆಸಲು ಬಲೆಯನ್ನೇ ಹೆಣೆದಿದ್ದವು. ಈಗ ಒಂದು ತಿಂಗಳಲ್ಲಿ ದಿನದಿಂದ ದಿನಕ್ಕೆ ತೈಲಬೆಲೆ ಇಳಿಯುವುದನ್ನು ಗಮನಿಸಿದ ಅಷ್ಟರ ಮಟ್ಟಿಗೆ ತಮ್ಮ ಅಸ್ತ್ರವನ್ನು ಬಿಟ್ಟುಕೊಟ್ಟಂತಾಗಿದೆ. ಈ ಅಂಶ ಕೂಡಾ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪೆಟ್ರೋಲ್, ಡಿಸೈಲ್ ಬೆಲೆ ಏಕಾಏಕಿ ಕುಸಿತಕ್ಕೆ ಕಾರಣವೆಂದರೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವಂತಹ ಕಚ್ಚಾತೈಲದ ಬೆಲೆ ಪ್ರತಿ ಕ್ಯಾನ್‌ಗೆ 60.69 ಡಾಲರ್ ಆಸುಪಾಸಿದೆ. ಕೆಲವೇ ತಿಂಗಳುಗಳ ಹಿಂದೆ ಇದು 100 ಡಾಲರ್‌ಗಳಿಗಿಂತ ಹೆಚ್ಚಿತ್ತು. ಅದರ ಪರಿಣಾಮ ಹಿಂದಿದ್ದ ಬೆಲೆಗಿಂತ ಈಗಿನ ದರ ಕಡಿಮೆಯಾಗಿದೆ. ರಶಿಯಾ ಮತ್ತು ಅರೇಬಿಯಾ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವ ಪ್ರತಿ ಬ್ಯಾರಲ್ ದರದಲ್ಲಿ 10 ಡಾಲರ್ ಕಡಿಮೆಯಾಗುತ್ತಿದೆ. ಇದರಿಂದಾಗಿ ಭಾರತಕ್ಕೆ ಸರಿಸುಮಾರು 70 ಸಾವಿರ ಕೋಟಿ ರೂಪಾಯಿಗಳಷ್ಟು ಲಾಭವಾಗಲಿದೆ. ಈಗಿನ ಸ್ಥಿತಿಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ತೈಲ ಬೆಲೆ ಇನ್ನಷ್ಟು ಕಡಿಮೆಯಾಗುವ ಸಂಭವ ಇದೆ. ನವೆಂಬರ್ 29 ರಿಂದ ಡಿಸೆಂಬರ್ 1ರ ವರೆಗೆ ವಿಶ್ವದ ಪ್ರಮುಖ ರಾಷ್ಟ್ರಗಳ ಆರ್ಥಿಕತೆಯ ಒಕ್ಕೂಟ ಜಿ.20 ಶೃಂಗಸಭೆ, ತೈಲೋತ್ಪಾದಕ ರಾಷ್ಟ್ರಗಳ ನಡೆಸಿದ ಶೃಂಗಸಭೆಯಲ್ಲಿ ಅಂತರಾಷ್ಟ್ರೀಯ ತೈಲ ಬೆಲೆ ಇಳಿಕೆಯ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ತೈಲೆ ಬೆಲೆ ಇಳಿಕೆಯ ಪ್ರತಿಫಲವಾಗಿ 2019ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರಿಗೆ ಅನುಕೂಲ ಆಗುವ ಲಕ್ಷಣಗಳಿವೆ. ತೈಲ ಬೆಲೆಯಂತಹ ಅಂತಾರಾಷ್ಟ್ರೀಯ ವಿದ್ಯಮಾನವು ಭಾರತದಂತಹ ದೇಶವೊಂದರ ಮೇಲೆ ಗಮನಾರ್ಹ ರಾಜಕೀಯ ಪರಣಾಮಗಳನ್ನು ಬೀರಬಲ್ಲದು ಎಂಬುದಕ್ಕೆ, ಈಗ ನಾಲ್ಕಾರು ತಿಂಗಳುಗಳಿಂದ ಕಂಡು ಬಂದಿರುವ ಬೆಲೆಯ ಇಳಿಕೆಯು ಒಂದು ಉತ್ತಮ ಉದಾಹರಣೆ.

Tags

Related Articles

Leave a Reply

Your email address will not be published. Required fields are marked *

Language
Close