About Us Advertise with us Be a Reporter E-Paper

Breaking NewsUncategorizedಸಿನಿಮಾಸ್

ನಿಶ್ಚಿತಾರ್ಥಕ್ಕೂ ಮೊದಲು ಬೆಂಗಳೂರಿನಲ್ಲಿ ದೀಪಿಕಾ ವಿಶೇಷ ಪೂಜೆ

ಬೆಂಗಳೂರು: ನಿಕ್ಕಿ ಜತೆ ಪ್ರಿಯಾಂಕ ನಿಶ್ಚಿತಾರ್ಥದ ಬೆನ್ನಲ್ಲೇ ಬಾಲಿವುಡ್‌ನ ಮತ್ತೊಂದು ತಾರಾ ಜೋಡಿಯ ಮದುವೆ ಬಗ್ಗೆ ಮಾತುಗಳು ಹರಡುತ್ತಿವೆ. ಬಾಲಿವುಡ್‌ನ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಾಪಂತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನುವುದು ಈಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರುವ ವಿಚಾರ. ಈಗ ಇದರ ಬಗ್ಗೆ ಮತ್ತೊಂದು ಮಾಹಿತಿ ದೊರಕಿದೆ.

ನಿಶ್ಚಿತಾರ್ಥಕ್ಕೂ ಮೊದಲು ಬೆಂಗಳೂರಿನಲ್ಲಿ ಪೂಜೆಯೊಂದನ್ನು ದೀಪಿಕಾ ಕುಟುಂಬದವರು ನಡೆಸಲಿದ್ದಾರಂತೆ. ಬೆಂಗಳೂರಿನ ದೇವಾಲಯವೊಂದರಲ್ಲಿ ನಂದಿಯ ವಿಶೇಷ ಪೂಜೆ ಅದಕ್ಕಾಗಿ ದೀಪಿಕಾ ಅವರ ತಾಯಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಯಾವ ದೇವಸ್ಥಾನದಲ್ಲಿ, ಎಂದು, ಯಾವಾಗ ಎನ್ನುವ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಅಧಿಕೃತವಾಗಿ ಮದುವೆಯ ವಿಚಾರ ಇದುವರೆಗೂ ಹೊರಗಾಕದ ಜೋಡಿ ಈ ಪೂಜೆಯ ಮೂಲಕವಾದರೂ ತಮ್ಮ ಮದುವೆಯ ಕುರಿತು ಮಾತಾಡುತ್ತದಾ ಕಾದು ನೋಡಬೇಕು.

Tags

Related Articles

Leave a Reply

Your email address will not be published. Required fields are marked *

Language
Close