ವಿಶ್ವವಾಣಿ

ಬಹುಕೋಟಿ ಚಾಪರ್ ಹಗರಣ ತ್ಯಾಗಿಗೆ ಷರತ್ತುಬದ್ದ ಜಾಮೀನು

ದೆಹಲಿ: ದೇಶದ್ಯಾಂತ ವ್ಯಾಪಕ ಚರ್ಚಗೆ ಗ್ರಾಸವಾಗಿದ್ದ ಬಹುಕೋಟಿ ವಿವಿಐಪಿ ಚಾಪರ್ ಹಗರಣದ ಪ್ರಮುಖ ಆರೋಪಿ ಹಾಗೂ ಭಾರತೀಯ ವಾಯುಪಡೆ ಮಾಜಿ ಮುಖ್ಯಸ್ಥ ಎಸ್ ಪಿ ತ್ಯಾಗಿ ಹಾಗು ಆತನ ಸಹೋದರರಿಗೆ ದೆಹಲಿ ಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.

ಎಸ್ ಪಿ ತ್ಯಾಗಿ ಅವರ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ನ ವಿಷೇಶ ನ್ಯಾಯಮೂರ್ತಿ ಅರವಿಂದ್ ಕುಮಾರ್‌‌ ಅವರು ತ್ಯಾಗಿ ಹಾಗೂ ಅವರ ಸಹೋದರ ಸಂಬಂಧಿಗಳಿಗೆ ಷರತ್ತು ಬದ್ದ ಜಾಮೀನು ನೀಡಿದ್ದಾರೆ. ಹಾಗೂ ಎಲ್ಲ ಆರೋಪಿಗಳಿಗೂ ತಲಾ ಒಂದು ಲಕ್ಷ ರು. ವೈಯಕ್ತಿಕ ಬಾಂಡ್ ಅನ್ನು ಪ್ರಸ್ತುತಪಡಿಸಿ ಜಾಮೀನು ಪಡೆಯುವಂತೆ ಕೋರ್ಟ್ ಸೂಚನೆ ನೀಡಿದೆ. ಅಲ್ಲದೇ ಮುಂದಿನ ವಿಚಾರಣೆಗಳಿಗೆ ಅಗತ್ಯೆಬಿದ್ದರೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.

ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಈ ಹಿಂದೆ ಜುಲೈ 24 ರಂದು ಪ್ರಕರಣದ ಆರೋಪಿಗಳಾದ ಎಸ್‌ಪಿ.ತ್ಯಾಗಿ, ಮಧ್ಯವರ್ತಿಗಳಾದ ಅಗಸ್ಟಾ ವೆಸ್ಟ್ ಲ್ಯಾಂಡ್ ಮತ್ತು ಫಿನ್ ಮೆಕ್ಕಾನಿಕ್ ಸಂಸ್ಥೆಯ ನಿರ್ದೇಶಕ ಗಿಸೆಪ್ಪೆ ಓರ್ಸಿ ಮತ್ತು ಬ್ರುನೋ ಸ್ವಾಗ್ನೋಲಿನಿ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.