About Us Advertise with us Be a Reporter E-Paper

Breaking Newsದೇಶಪ್ರಚಲಿತ

ನೋಟ್ಯಂತರ 2 ವರ್ಷ: ಬಿಜೆಪಿ ಶ್ಲಾಘನೆ ,ವಿರೋಧ ಪಕ್ಷಗಳು ಟೀಕೆ

ದೆಹಲಿ: ದೇಶ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಗಮನ ಸೆಳೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ನೋಟ್ಯಂತರ ನಿರ್ಧಾರಕ್ಕೆೆ ಗುರುವಾರ ಎರಡು ವರ್ಷಗಳು ಪೂರ್ಣಗೊಂಡಿದೆ. ಈ ಹಿನ್ನೆೆಲೆಯಲ್ಲಿ ಆಡಳಿತರೂಢ ಬಿಜೆಪಿ ನಾಯಕರು ತಮ್ಮ ಸರಕಾರದ ನಿರ್ಧಾರವನ್ನು ಹೊಗಳಿದರೆ, ವಿರೋಧ ಪಕ್ಷಗಳು ಟೀಕೆ ಮುಂದುವರಿಸಿವೆ.

ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧದ ಯುದ್ಧ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು 2016ರ ನವೆಂಬರ್ 8ರಂದು ಹಳೇಯ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದರು. ಈ ಅಚ್ಚರಿಯ ನಿರ್ಧಾರ ದೇಶವನ್ನೇ ತಲ್ಲಣಗೊಳಿಸಿತ್ತು. ನಂತರದ ದಿನಗಳಲ್ಲಿ ಕಾಂಗ್ರೆೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಲೇ ಬಂದಿದ್ದು, ಈಗಲೂ ಅದನ್ನೇ ಮುಂದುವರಿಸಿವೆ.

ಪ್ರಜಾಪ್ರಭುತ್ವದ ಕರಾಳ ದಿನಕ್ಕೆೆ 2 ವರ್ಷ: ಕಾಂಗ್ರೆೆಸ್
ನೋಟ್ಯಂತರ ನಿರ್ಧಾರ ಒಂದು ಹಗರಣ ಎಂದು ವಾದಿಸಿಕೊಂಡು ಬಂದಿರುವ ಕಾಂಗ್ರೆೆಸ್, ಈ ನಿರ್ಧಾರ ಪ್ರಕಟಿಸಿದ ದಿನವನ್ನು ಕರಾಳ ದಿನ ಎಂದು ಹೇಳುತ್ತಲೇ ಬಂದಿದೆ. ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟ್ಯಂತರ ಮಾಡಿ ಇಂದಿಗೆ ಎರಡು ವರ್ಷ ತುಂಬಿದ್ದು, ಇದರೊಂದಿಗೆ ಪ್ರಜಾಪ್ರಭುತ್ವ ವ್ಯವಸ್ಥೆೆಯ ಕರಾಳ ದಿನಕ್ಕೆೆ ಎರಡು ವರ್ಷ ಪೂರ್ಣಗೊಂಡಿದೆ’ ಎಂದು ಪ್ರತಿಪಕ್ಷ ಕಾಂಗ್ರೆೆಸ್ ಟೀಕಿಸಿದೆ.

ಪ್ರಧಾನಿ ಮೋದಿಯವರು ತಮ್ಮ ಉದ್ಯಮಿ ಸ್ನೇಹಿತರನ್ನು ಹೊರತುಪಡಿಸಿ ದೇಶದ ಇತರೆ ಪ್ರಜೆಗಳು ಕೇಂದ್ರ ಸರಕಾರದ ನಿರ್ಧಾರದಿಂದ ಆದ ನಷ್ಟವನ್ನು ಭರಿಸಿದ್ದಾರೆ. ಹಾಗಾಗಿ ನೋಟು ಅಮಾನ್ಯೀಕರಣ ಎನ್ನುವುದು ದೇಶದ ಪ್ರಜಾಪ್ರಭುತ್ವ ಮತ್ತು ಆರ್ಥಿಕತೆಗೆ ಕರಾಳ ದಿನವಾಗಿದೆ ಎಂದು ಕಾಂಗ್ರೆೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿದೆ.

ಆರ್ಥಿಕತೆ ಹಳಿಗೆ ಬಂದಿದೆ: ಜೇಟ್ಲಿ
ಪ್ರಧಾನಿ ಮೋದಿ ಅವರ ನೋಟ್ಯಂತರ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಈ ನಿರ್ಧಾರದಿಂದ ಭಾರತದ ಆರ್ಥಿಕತೆ ಹಳಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಜೇಟ್ಲಿ ಅವರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ, ಈ ಯೋಜನೆಯ ಉದ್ದೇಶ ಹಾಗೂ ಅದರಿಂದ ಆಗಿರುವ ಪ್ರಯೋಜನಗಳ ಕುರಿತಾಗಿ ಸಮರ್ಥಿಸಿಕೊಂಡಿದ್ದಾರೆ. ‘ದೇಶದ ಹೊರಗಿರುವ ಕಪ್ಪುಹಣವನ್ನು ಪತ್ತೆೆ ಹಚ್ಚಲು ಈ ನಿರ್ಧಾರ ನೆರವಾಯಿತು. ಅಲ್ಲದೆ ತೆರಿಗೆ ಸಲ್ಲಿಕೆ ತಂತ್ರಜ್ಞಾನದ ಸರಳೀಕರಣದಿಂದ ತೆರಿಗೆ ವ್ಯಾಪ್ತಿ ಮತ್ತಷ್ಟು ವಿಸ್ತರಿಸಲು ಸಾಧ್ಯವಾಯಿತು’ ಎಂದು ವಿವರಿಸಿದ್ದಾರೆ.

ಆಸ್ತಿ ಹೊಂದಿರುವವರಿಗೆ ದಂಡ ಸಹಿತ ತೆರಿಗೆ ಪಾವತಿಸುವ ಮೂಲಕ ಹಣ ವಾಪಸ್ ತರಲು ಅವಕಾಶ ನೀಡಲಾಯಿತು. ಅದರಲ್ಲಿ ವಿಫಲರಾದವರನ್ನು ಕಾಳಧನ ಕಾಯಿದೆ ಅಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ವಿದೇಶಗಳಲ್ಲಿರುವ ಆಸ್ತಿ, ಖಾತೆಗಳ ವಿವರಗಳು ಸರಕಾರದ ಕೈಸೇರಿವೆ. ಪರಿಣಾಮವಾಗಿ ಕಾನೂನು ಉಲ್ಲಂಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಜೇಟ್ಲಿ ಬರೆದಿದ್ದಾರೆ.

ನ್ಯೋಟ್ಯಂತರದ ಮೂಲಕ ಎದುರಾದ ವಿಪತ್ತಿಗೆ ಇಂದು ಎರಡು ವರ್ಷ ಪೂರ್ಣಗೊಂಡಿದೆ. ಈ ನಿರ್ಧಾರ ಘೋಷಣೆಯಾದಾಗಲೇ ಇದು ಅತ್ಯಂತ ಕೆಟ್ಟ ನಿರ್ಧಾರ ಎಂದು ನಾನು ಹೇಳಿದ್ದೆ. ಆದರೆ ಖ್ಯಾತ ಆರ್ಥಿಕ ತಜ್ಞರು, ಸಾಮಾನ್ಯ ಜನರು ಮತ್ತು ಎಲ್ಲ ತಜ್ಞರು ತಮ್ಮ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದು ಕೇಂದ್ರ ಸರಕಾರ ತಮ್ಮ ವಿರುದ್ಧ ಕಿಡಿ ಕಾರಿತ್ತು.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ.

Tags

Related Articles

Leave a Reply

Your email address will not be published. Required fields are marked *

Language
Close