About Us Advertise with us Be a Reporter E-Paper

Breaking Newsಸಿನಿಮಾಸ್

ಉದ್ಘರ್ಷದ ಹೊಸ ನಾಯಕನನ್ನು ಪರಿಚಯಿಸಿದ ದೇಸಾಯಿ

ಸೆಟ್ಟೇರಿದಾಗಿನಿಂದಲೂ ತನ್ನ ಟೈಟಲ್ ಮತ್ತು ಫಸ್ಟ್ಲು ಪೋಸ್ಟರ್ ಮೂಲಕ ಸಿನಿ ಪ್ರಿಯರಲ್ಲಿ ಕುತೂಹಲ ಕೆರಳಿಸಿದ್ದ ಉದ್ಘರ್ಷ ಚಿತ್ರದ ನಾಯಕ ನಟನನ್ನು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಮಾಧ್ಯಮಗಳ ಮುಂದೆ ಪರಿಚಯಿಸಿದ್ದಾರೆ. ಅಂದಹಾಗೆ, ಉದ್ಘರ್ಷ ಚಿತ್ರದ ನವ ನಾಯಕ ನಟನ ಹೆಸರು ಠಾಕೂರ್ ಅನೂಪ್ ಸಿಂಗ್. ಕಳೆದ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ತಮ್ಮ ಚಿತ್ರದ ನಾಯಕ ನಟನನ್ನು ಪರಿಚಯಿಸುವ ಸಲುವಾಗಿಯೇ ಉದ್ಘರ್ಷ ವಿಶೇಷ ಪತ್ರಿಕಾಗೋಷ್ಠಿಯನ್ನು ಕರೆದಿತ್ತು.

ಈಗಾಗಲೆ ಟಾಲಿವುಡ್‌ನಲ್ಲಿ ನಟ ಅಲ್ಲು ಅರ್ಜುನ್, ಕಾಲಿವುಡ್‌ನಲ್ಲಿ ನಟ ಸೂರ್ಯ ಮೊದಲಾದ ನಟರ ಜೊತೆ ತೆರೆಯನ್ನು ಹಂಚಿಕೊಂಡಿರುವ ಠಾಕೂರ್ ಅನೂಪ್ ಸಿಂಗ್, ಕಳೆದ ವರ್ಷ ಕನ್ನಡದಲ್ಲಿ ತೆರೆಗೆ ಬಂದ ರೋಗ್ ಚಿತ್ರದಲ್ಲೂ ಖಳನಾಯಕನಾಗಿ ಮಿಂಚಿದ್ದರು. ತೆಲುಗು, ತಮಿಳು, ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಖಳನಾಯಕನಾಗಿ ಒಂದಷ್ಟು ಹೆಸರು ಮಾಡಿರುವ ಠಾಕೂರ್ ಸಿಂಗ್, ಚೊಚ್ಚಲ ಬಾರಿಗೆ ಉದ್ಘರ್ಷ ಚಿತ್ರದ ಮೂಲಕ ನಾಯಕ ನಟನಾಗಿ ಅದೃಷ್ಠ ಪರೀಕ್ಷೆಗೆ ಇಳಿಯುತ್ತಿದ್ದಾರೆ.

ಇದೇ ವೇಳೆ ಮಾತನಾಡಿದ, ಅನೂಪ್ ಸಿಂಗ್ ಕನ್ನಡದಲ್ಲಿ ಮೊದಲ ಬಾರಿಗೆ ದೇಸಾಯಿ ಅವರಂಥ ಲೆಜೆಂಡರಿ ಡೈರೆಕ್ಟರ್ ಜೊತೆ ಕೆಲಸ ಮಾಡುವುದು ಖುಷಿ ತಂದಿದೆ. ಫಸ್‌ಟ್ಟೈಮ್ ಈ ಸಿನಿಮಾದಲ್ಲಿ ಹೀರೋ ಆಗಿ ಪರಿಚಯವಾಗುತ್ತಿರುವುದರಿಂದ, ಚಿತ್ರದ ಮೇಲೆ ಸಹಜವಾಗಿಯೇ ಸಾಕಷ್ಟು ನಿರೀಕ್ಷೆ ಇದೆ. ಇದೊಂದು ಸಸ್ಪೆನ್‌ಸ್, ಥ್ರಿಲ್ಲರ್ ಸಿನಿಮಾ. ಜೊತೆಗೆ ಹೊಸತರದ ಪ್ರೆಸೆಂಟೇಷನ್ ಇರುವುದರಿಂದ, ಆಡಿಯನ್‌ಸ್ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ದೇಸಾಯಿ ಮತ್ತು ನಿರ್ಮಾಪಕ ದೇವರಾಜ್ ಚಿತ್ರದಲ್ಲಿ ಠಾಕೂರ್ ಅನೂಪ್ ಸಿಂಗ್ ಅವರ ಪಾತ್ರ ಪರಿಚಯ, ಅದಕ್ಕಾಗಿ ಅವರ ತಯಾರಿ, ಶೂಟಿಂಗ್ ಅನುಭವ, ಇತರೆ ಮಾಹಿತಿಗಳನ್ನು ಹಂಚಿಕೊಂಡರು.

ಇನ್ನು ಉದ್ಘರ್ಷ ಚಿತ್ರ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿರುವ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸದ್ಯ ಪೋಸ್‌ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ದೇಸಾಯಿ ಆ್ಯಂಡ್ ಟೀಮ್ ಅಂದುಕೊಂಡಂತೆ ಎಲ್ಲವೂ ನಡೆದರೆ ಮುಂಬರುವ ನವೆಂಬರ್ ವೇಳೆಗೆ ಉದ್ಘರ್ಷ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close