About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಸಂಸತ್​ನಲ್ಲಿ ಅಂಬರೀಷ್​ ನಿಧನಕ್ಕೆ ವ್ಯಕ್ತವಾಗಲಿಲ್ಲ ಸಂತಾಪ​: ದೇವೇಗೌಡರು ಗರಂ

ದೆಹಲಿ: ಇಂದಿನಿಂದ ಆರಂಭವಾಗಿರುವ ಸಂಸತ್​ ಚಳಿಗಾಲದ ಅಧಿವೇಶನದ ಕಲಾಪದಲ್ಲಿ ಕರ್ನಾಟಕ ಮಾಜಿ ಸಂಸದ ಹಾಗೂ ನಟ ಅಂಬರೀಷ್​ಗೆ ಯಾವುದೆ ಸಂತಾಪ ವ್ಯಕ್ತಪಡಿಸದಿರುವುದು ಮಾಜಿ ಪ್ರಧಾನಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಅಥವಾ ಕೇಂದ್ರದ ಅಧಿವೇಶನದಲ್ಲಿ ಮೊದಲ ದಿನ ಅಗಲಿದ ನಾಯಕರಿಗೆ ಸದನದಲ್ಲಿ ಸಂತಾಪ ವ್ಯಕ್ತಪಡಿಸುವುದು ಒಂದು ರೀತಿಯ ಸಂಪ್ರದಾಯವಾಗಿ ಅನೇಕ ವರ್ಷಗಳಿಂದ ನಡೆದು ಬಂದಿದೆ. ಆದರೆ, ಇಂದು ನಡೆದ ಚಳಿಗಾಲದ ಅಧಿವೇಶನದಲ್ಲಿ ಅಂಬರೀಷ್​ಗೆ ಯಾವುದೇ ಸಂತಾಪ ವ್ಯಕ್ತವಾಗಿಲ್ಲ.

ಕೇವಲ ನಾಯಕ ನಟರಾಗಿ ಮಾತ್ರವಲ್ಲದೇ ಪ್ರಭಾವಿ ಸಂಸದರಾಗಿ ಸೇವೆ ಸಲ್ಲಿಸಿದ  ಅಂಬರೀಷ್​ ಅವರಿಗೆ ಸದನದಲ್ಲಿ ಸಂತಾಪ ವ್ಯಕ್ತವಾಗದ ಕ್ರಮದಿಂದ ಅಸಮಾಧಾನಗೊಂಡ ಎಚ್​.ಡಿ. ದೇವೇಗೌಡ ಅವರು ಈ ಬಗ್ಗೆ ಸ್ಪೀಕರ್ ಸುಮಿತ್ರಾ ಮಹಾಜನ್​  ಅವರ ಗಮನಕ್ಕೆ ತಂದಿದ್ದು, ಆದ ಪ್ರಮಾದ ತಿಳಿಸಿ ಚರ್ಚಿಸಿದ್ದಾರೆ. ಈ ಕುರಿತು ಎಚ್ಚೆತ್ತ ಸ್ಪೀಕರ್​ ನಾಳಿನ ಸದನದಲ್ಲಿ ಅಂಬರೀಷ್​ ಅವರ ನಿಧನಕ್ಕೆ ಸಂತಾಪ ಸೂಚಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.

ಕಾಂಗ್ರೆಸ್​ನ ಪ್ರಭಾವಿ ರಾಜಕಾರಣಿಯಾಗಿದ್ದ ಅಂಬರೀಷ್​ 1998-99ರಲ್ಲಿ ಜೆಡಿಎಸ್​ ಪಕ್ಷದಿಂದ 12ನೇ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಳಿಕ ಕಾಂಗ್ರೆಸ್​ ಸೇರಿದ ಅವರು 1999 -2009ರವರೆಗೆ ಲೋಕಸಭಾ ಸದಸ್ಯರಾಗಿದ್ದರು.  2006-08: ಕರ್ನಾಟಕ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ಅವರು 2008 ರಲ್ಲಿ ಕಾವೇರಿ ನೀರಿನ ವಿವಾದದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

Tags

Related Articles

Leave a Reply

Your email address will not be published. Required fields are marked *

Language
Close