About Us Advertise with us Be a Reporter E-Paper

Breaking Newsರಾಜ್ಯ

ಸ್ವಸ್ಥ ಆರೋಗ್ಯಕ್ಕಾಗಿ ನಡಿಗೆಯ ಅಭ್ಯಾಸ ಬೆಳೆಸಿಕೊಳ್ಳಿ: ಡಾ ಮೃತ್ಯುಂಜಯಸ್ವಾಮಿ

ಬೆಂಗಳೂರು ಸೆಪ್ಟಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ನಡೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಶತಾಯು ಆಯುರ್ವೇದಸಂಸ್ಥೆಯ ವ್ಯವಸ್ಥಾಪಕ ನಿದೇರ್ಶಕರಾದ ಡಾ ಮೃತ್ಯುಂಜಯ ಸ್ವಾಮಿ ಅಭಿಪ್ರಾಯಪಟ್ಟರು.

ಮಹಾಲಕ್ಷ್ಮಿಪುರಂನಲ್ಲಿರುವ ಶತಾಯು ಆಯುರ್ವೇದ ಚಿಕಿತ್ಸಾ ಕೇಂದ್ರದ ವತಿಯಿಂದ ಇಂದು ಆಯೋಜಿಸಲಾಗಿದ್ದ ಶತಾಯು ಸ್ವಾಸ್ಥ್ಯ ಮೇಳಕ್ಕೆ ಚಾಲನೆ ನೀಡಿ ಅವರುಮಾತನಾಡಿದರುಶತಾಯು ಆಯುರ್ವೇದ ದೇಶ ವಿದೇಶಗಳಲ್ಲಿ ಭಾರತ ಪ್ರಾಚೀನ ಚಿಕಿತ್ಸಾ ಪದ್ದತಿಯಾದ ಆಯುರ್ವೇದದ ಮಹತ್ವವನ್ನು ಸಾರುತ್ತಿದೆನಮ್ಮ ದೇಶದ  ಸಂಪತ್ತನ್ನುನಮ್ಮ ದೇಶದ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ನಮ್ಮ ಪ್ರಥಮ ಗುರಿಯಾಗಿದೆ ಎಂದರು.

ನಡಿಗೆ ಆರೋಗ್ಯಕರ ಜೀವನಕ್ಕೆ ಹಾಗೂ ಬೊಜ್ಜನ್ನು ಕರಗಿಸುವ ಅತ್ಯಂತ ಸುಲಭ ಮತ್ತು ಸರಳ ವಿಧಾನವಾಗಿದೆಪ್ರತಿನಿತ್ಯ ಕನಿಷ್ಠ 30 ನಿಮಿಷಗಳ ಕಾಲ ನಡಿಗೆಯಲ್ಲಿ ತೊಡಗಿಕೊಳ್ಳುವಅಭ್ಯಾಸವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದರು.

ಕಳೆದ ಹಲವು ವರ್ಷಗಳಿಂದ ಆಯುರ್ವೇದ ಚಿಕಿತ್ಸಾ ಕ್ರಮಗಳು ಸೇರಿದಂತೆ ಇನ್ನಿತರೆ ಜೀವನಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಾ ಬಂದಿರುವ ಶತಾಯು ಆಯುರ್ವೇದಕ್ಲಿನಿಕ್ ಸಾರ್ವಜನಿಕರಿಗೆ ಆಯುರ್ವೇದದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಸೆಪ್ಟಂಬರ್ 23 ರಿಂದ 25 ರವರೆಗೆ ಉಚಿತ ಸಲಹಾ ಶಿಬಿರವನ್ನು ಆಯೋಜಿಸಿದೆ.

ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದ ವಾಕಾಥಾನ್ ನಲ್ಲಿ ನೂರಾರು ಜನರು ಭಾಗವಹಿಸಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close