About Us Advertise with us Be a Reporter E-Paper

ಅಂಕಣಗಳು

ಅಭಿವೃದ್ಧಿಯೆಂಬುದು ಕೇವಲ ಕಲ್ಪನೆಯ ಗೋಪುರದಂತೆ ಭಾಸವಾಗುತ್ತದೆ

ವಿವಿಧ ಜಾತಿ, ವೈವಿದ್ಯಮಯ ಸಾಂಸ್ಕೃತಿಕ ಪದ್ಧತಿಗಳು ಹಾಗೂ ವಿಭಿನ್ನ ರೀತಿಯ ಜೀವನ ಶೈಲಿಯನ್ನು ಹೊಂದಿರುವ ಜನಸಮುದಾಯವನ್ನು ಭಾರತ ದೇಶವು ಒಳಗೊಂಡಿದೆ. ಜೀವನ ಕ್ರಮ ಮತ್ತು ಪಾಲ್ಗೊಂಡ ಚಟುವಟಿಕೆಗಳು ಆರ್ಥಿಕ ಮಟ್ಟದಲ್ಲಿ ಬಹಳಷ್ಟು ವ್ಯತ್ಯಾಸವನ್ನು ಮೂಡಿಸಿವೆ. ಇಂತಹ ಎಲ್ಲ ಸಮುದಾಯಗಳನ್ನೊಳಗೊಂಡ ಸಮಾಜವನ್ನು ಸಮಾನತೆಯ  ತಂದು ನಿಲ್ಲಿಸುವುದು ಅಷ್ಟೊಂದು ಸುಲಭದ ಮಾತಲ್ಲ! ಸಮಾಜದ ದುರ್ಬಲ ವರ್ಗದವರಿಗೆ ಜೀವನದ ಪ್ರತಿಹಂತದಲ್ಲಿಯೂ ನ್ಯಾಯ ಮತ್ತು ಸಮಾನತೆಯನ್ನು ದೊರಕಿಸಲು ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ವಲಯಗಳಲ್ಲಿ ಆದ್ಯತೆಯನ್ನು ಮೂಡಿಸುವುದಕ್ಕಾಗಿ ಭಾರತ ಸಂವಿಧಾನದ ಪಿತಾಮಹರು ಮುಂಚಿತವಾಗಿಯೆ ಆಲೋಚಿಸಿ ಹಲವಾರು ನಿಯಮಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಸ್ವಾತಂತ್ರೋತ್ತರದ ಎಲ್ಲ ಸರಕಾರಗಳು ಕಡುಬಡವರ ಜೀವನಮಟ್ಟವನ್ನು ಸುಧಾರಿಸುವುದಕ್ಕಾಗಿ ಕಾಲಕಾಲಕ್ಕೆ ತಕ್ಕಂತೆ ಹಲವಾರು ಶಾಸನಾತ್ಮಕ ಚೌಕಟ್ಟುಗಳೊಂದಿಗೆ ಅಭಿವೃದ್ಧಿಗಾಗಿ ಪ್ರಯತ್ನಿಸಿವೆ. ರಾಷ್ಟ್ರದ ಸುಸ್ತಿರ ಅಭಿವೃದ್ಧಿಯ ಗುರಿಯಲ್ಲಿ ಆರ್ಥಿಕ ಒಳಗೊಳ್ಳುವಿಕೆಯು  ಅಂಶವಾಗಿದೆ. ರಾಷ್ಟ್ರವನ್ನು ಬಡತನ ಮುಕ್ತ, ಹಸಿವು ಮುಕ್ತ, ಉತ್ತಮ ಆರೋಗ್ಯದಾಯಕ, ಲಿಂಗ ಸಮಾನತೆಯುಳ್ಳ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವುದರೊಂದಿಗೆ ಉದ್ದಿಮೆ ಮತ್ತು ಮೂಲಭೂತ ಸೌಕರ್ಯ್ಯಗಳ ಅಭಿವೃದ್ಧಿಯನ್ನು ಸಾಕಾರಗೊಳಿಸಿದಾಗ ಮಾತ್ರ ಅಸಮಾನತೆಯನ್ನು ಕುಗ್ಗಿಸಬಹುದಾಗಿರುತ್ತದೆ. ದುರ್ಬಲ ವರ್ಗದವರು ಹಾಗೂ ಕಡಿಮೆ ಆದಾಯವನ್ನು ಹೊಂದಿರುವ ಸಮುದಾಯವನ್ನು ಮುಖ್ಯವಾಹಿನಿಗೆ ತರುವುದಕ್ಕಾಗಿ ಕೈಗೆಟಕುವ ಬಡ್ಡಿದರದಲ್ಲಿ ಅಗತ್ಯ ಸಾಲಸೌಲಭ್ಯಗಳನ್ನು ನೀಡುವ ಕಾರ್ಯಕ್ರಮಗಳನ್ನೊಳಗೊಂಡ ಯೋಜನೆಗಳು ಅತ್ಯಂತ ನಿರ್ಣಾಯಕವಾದ ಪಾತ್ರವನ್ನು ವಹಿಸುತ್ತದೆ.

ಸಾಮಾಜಿಕ ಆರ್ಥಿಕ ಸುಧಾರಣೆಯ ಮೊದಲ ಹಂತದಲ್ಲಿ ದುರ್ಬಲ ವರ್ಗದವರಿಗೆ  ನೀಡುವ ಮುಖ್ಯ ಉದ್ದೇಶದೊಂದಿಗೆ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಬ್ಯಾಂಕ್‌ಗಳು ಲಾಭದಾಯಕ ಉದ್ದೇಶದೊಂದಿಗೆ ಸಾಲ ನೀಡಲಾಗುತ್ತಿದ್ದ ಪ್ರಕ್ರಿಯೆಗೆ ಬದಲಾವಣೆ ತರುವುದರೊಂದಿಗೆ ಅದ್ಯತಾಲಯಗಳಿಗೆ ಸಾಲ ನೀಡುವುದಕ್ಕೆ ಪ್ರೇರೇಪಿಸಿ ನಿಯಮಾವಳಿಗಳನ್ನು ರೂಪಿಸಲಾಯಿತು. ಭಾರತೀಯ ರಿಸರ್ವ್ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಆರ್.ಬಿ.ಐ ನ ಎರಡನೇ ಪಟ್ಟಿಯಲ್ಲಿರುವ ಶೆಡ್ಯೂಲ್‌ಡ್ ಬ್ಯಾಂಕುಗಳಿಗೆ ರಾಷ್ಟ್ರೀಯ ಪ್ರಗತಿ ಸಾಧಿಸುವಂತಹ ಪೂರಕ ಚಟುವಟಿಕೆಗಳಿಗೆ ಸಾಲವನ್ನೊದಗಿಸುವಂತೆ ನಿರ್ದೇಶನವನ್ನು ನೀಡಲಾಯಿತು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಮಾಜಿಕ ಸದೃಢತೆಯನ್ನು ಖಾತ್ರಿಪಡಿಸುವ ಆರ್ಥಿಕ ಒಳಗೊಳ್ಳುವಿಕೆಗೆ ಪ್ರಾಧಾನ್ಯತೆಯನ್ನು  ಹಲವಾರು ಕಾರ್ಯಕ್ರಮಗಳು ಜಾರಿಗೆ ಬಂದಿದ್ದರ ಫಲವಾಗಿ ಅಲ್ಪಮಟ್ಟಿಗೆ ಸಾಧೆಯನ್ನು ಕೈಗೊಳ್ಳಲಾಗಿದ್ದರೂ ಸಹ ಆರ್ಥಿಕ ಒಳಗೊಳ್ಳುವಿಕೆ ಪ್ರಕ್ರಿಯೆಗೆ ಅಡೆತಡೆಗಳು ಇಲ್ಲವೆನ್ನಲಾಗುವುದಿಲ್ಲ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳು, ಶಾಸನಗಳು, ಲೀಡ್‌ಬ್ಯಾಂಕ್ ಯೋಜನೆ ಮತ್ತು ಸಾರ್ವಜನಿಕ ದೂರುಗಳ ಕುರಿತು ಕ್ರಮಕೈಗೊಳ್ಳಲಾಗುವ ಒಂಬಡ್‌ಸ್ಮನ್ ಮುಂತಾದ ಅನೇಕ ಕಾರ್ಯಕ್ರಮಗಳಿದ್ದರೂ ಆರ್ಥಿಕ ಒಳಗೊಳ್ಳುವಿಕೆಯನ್ನು ಸಾಧಿಸಲು ಸಾಧ್ಯವಾಗದಿರುವುದು ಪ್ರಯತ್ನಗಳ ವೈಫಲ್ಯತೆಗೆ ಹಿಡಿದ ಕನ್ನಡಿಯಾಗಿದೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ ಕಡಿಮೆ ಆದಾಯ ಹೊಂದಿರುವ ಸಾಮಾಜಿಕ ಘಟಕಗಳು, ಬಡತನ ಹಾಗೂ ಜಾಗೃತಿಯ ಕೊರತೆ  ಪ್ರಮುಖವಾಗಿವೆ. ಇವುಗಳೊಂದಿಗೆ ಬ್ಯಾಂಕ್‌ಗಳು ಈವರೆಗೂ ಸಾರ್ವಜನಿಕರ ಸಾಮೀಪ್ಯಕ್ಕೆ ಬರುವುದರಲ್ಲಿ ವಿಫಲವಾಗಿರುವುದು, ಕ್ಲಿಷ್ಟವಾದ ಗೊಂದಲಮಯ ದಾಖಲೀಕರಣದ ಪದ್ದತಿ ಹಾಗೂ ಹೇರಲಾಗುತ್ತಿರುವ ಸಮಯದ ಮೀತಿ, ಭಾಷಾ ಸಮಸ್ಯೆ ಮತ್ತು ಬ್ಯಾಂಕ್ ಸಿಬ್ಬಂದ್ಧಿಗಳ ನಿರ್ಲಕ್ಷಿತ ವರ್ತನೆ ಮುಂತಾದವುಗಳು ಅಡ್ಡಿಯಾಗಿ ಪರಿಣಮಿಸಿವೆಯೆಂದರೆ ತಪ್ಪಾಗಲಾರದು. ಇವುಗೊಂದಿಗೆ ಉದ್ದಿಮ ಪ್ರಾರಂಭಿಸುವುದಕ್ಕೆ ಹಿಂದೆಟು ಹಾಕುವುದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಹಣಕಾಸಿನ ಕೊರತೆ, ಸೋಲಿನ ಭಯ ಹಾಗೂ ಮಾರುಕಟ್ಟೆಯ ಸವಾಲುಗಳನ್ನು ಎದುರಿಸಲಾಗದ ಸ್ಥಿತಿ, ಕಚ್ಚಾ ವಸ್ತುಗಳ ಪೂರೈಕೆಗೆ ಸಂಬಂಧಿಸಿದಂತೆ ಎದುರಾಗುವ  ಆರ್ಥಿಕ ಚಟುವಟಿಕೆಯನ್ನು ಪ್ರಾರಂಭಿಸಲು ಅಗತ್ಯವಿರುವಷ್ಟು ಪ್ರಮಾಣದ ಬಂಡವಾಳದ ಹೊಂದಾಣಿಕೆ ಮುಂತಾದವುಗಳು ಪ್ರಾಥಮಿಕ ಅಡ್ಡಿಗಳಾಗಿ ಗೋಚರಿಸುತ್ತಿವೆ. ಅವುಗಳೊಂದಿಗೆ ಕಡಿಮೆ ಆದಾಯದ ರೈತರು, ಭೂರಹಿತ ಕೃಷಿ ಕಾರ್ಮಿಕರು ಅಸಂಘಟಿತ ವಲಯಗಳಲ್ಲಿನ ಕಾರ್ಮಿಕರು, ಕೊಳಗೇರಿ ವಾಸಿಗಳು, ಅಲೆಮಾರಿಗಳು ಮತ್ತು ಸಾಮಾಜಿಕವಾಗಿ ಬೇರ್ಪಟ್ಟ ಪಂಗಡಗಳು ಸರ್ಕಾರಗಳ ಯೋಜನಾ ಪ್ರಕ್ರಿಯೆಯಿಂದ ಈಗಲೂ ಹೊರಗುಳಿಯುತ್ತಿದ್ದಾರೆ.

1969 ರ ಬ್ಯಾಂಕ್ ರಾಷ್ಟ್ರೀಕರಣದ ಫಲವಾಗಿ ಸಮಾಜದ ಬಹುಪಾಲು ಜನರಿಗೆ ಹಣಕಾಸು ಸೇವೆಗಳು ತಕ್ಕಮಟ್ಟಿಗೆ ಲಭ್ಯವಾಗುತ್ತಿವೆ. ಭಾರತ ಸರ್ಕಾರ ಮತ್ತು ರಾಜ್ಯ  ಸಾಮಾಜಿಕ ಆರ್ಥಿಕ ಒಳಗೊಳ್ಳುವಿಕೆಗಾಗಿ ನಾಗರೀಕರ ಭಾಗವಹಿಸುವಿಕೆಯತ್ತ ಹೆಚ್ಚಿನ ಒತ್ತನ್ನು ನೀಡುತ್ತಿವೆ. ದುರ್ಬಲ ವರ್ಗದವರಿಗೆ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ  ಜೀವನೋಪಾಯಕ್ಕಾಗಿ ಕೈಗೊಳ್ಳುವ ಚಟುವಟಿಕೆಗಳಿಗೆ ಧನಸಹಾಯ ಮತ್ತು ಬ್ಯಾಂಕ್ ಸಾಲ ಮರುಪಾವತಿಯ ಬದ್ಧತೆಯೊಂದಿಗೆ ಹಲವಾರು ಯೋಜನೆಗಳು ಆಚರಣೆಯಲ್ಲಿವೆ. ಭಾರತ ಕಂಪನಿ ಕಾಯ್ದೆ 1956 ರ ಸೆಕ್ಷೆನ್ 25 ರ ಅಡಿ ಲಾಭಕ್ಕಾಗಿ ಅಲ್ಲದ ಕಂಪನಿಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಹಾಗೂ ರಾಷ್ಟ್ರೀಯ  ಕಾರ್ಮಿಕರ ಹಣಕಾಸು ಮತ್ತು ಅಭಿವೃದ್ಧಿ ನಿಗಮಗಳು ಸೇರಿವೆ. ಬಡತನ ರೇಖೆಯ ಮಿತಿಗಿಂತಲೂ ಕಡಿಮೆ ಆದಾಯವನ್ನು ಹೊಂದಿರುವ ಪರಿಶಿಷ್ಟ ಸಮುದಾಯದವರ ಆರ್ಥಿಕ ಅಭಿವೃದ್ಧಿಗಾಗಿ ಅಗತ್ಯವಾದ ಸಂಪನ್ಮೂಲಗಳ ಕ್ರೋಢಿಕರಣ ಹಾಗೂ ಸೂಕ್ತ ನಿಯಮಾವಳಿಗಳ ಮೂಲಕ ಹಣಕಾಸು ನೆರವು ನೀಡುವ ಯೋಜನೆ ಇದಾಗಿದೆ. ಇಂತಹ ಸಮುದಾಯಗಳಿಗೆ ನೆರವಾಗುವುದಕ್ಕಾಗಿ ಈ ಸಮುದಾಯದವರಿಗೆ ರಿಯಾಯತಿ ದರದಲ್ಲಿ ಸಹಾಯ ಸೌಲಭ್ಯ ನೀಡುತ್ತಿದೆ. ಈ ನಿಗಮವು ಸ್ಥಾಪನೆ ಆದಾಗಿನಿಂದ 2015 ರ ಮಾರ್ಚ್  31 ರ ವರೆಗೆ ರಾಜ್ಯಗಳಿಗೆ  3019.87 ಕೋಟಿ ರೂಪಾಯಿಗಳ ಸಾಲವನ್ನು ನೀಡಿವೆ. ರಾಷ್ಟ್ರೀಯ ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ ಕುಶಲಕರ್ಮಿ ಸಂಬಂಧಿತ ಸಲಕರಣೆ ಹಾಗೂ ಸ್ವತ್ತುಗಳ ಖರೀದಿಗಾಗಿ ಐವತ್ತು ಸಾವಿರದಿಂದ ಇಪ್ಪ

ತ್ತೆ ûದು ಲಕ್ಷ ರುಪಾಯಿಗಳ ವರೆಗಿನ ಚಟುವಟಿಕೆಗಳನ್ನು ಕೈಗೊ

್ಳಲು ಅವಕಾಶವನ್ನೊದಗಿಸಲಾಗಿದೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮವು ಕೌಶಲ್ಯಾಭಿವೃದ್ಧಿ ಮತ್ತು ಸ್ವಂತ ಉದ್ಯೋಗಕ್ಕೆ ನೆರವಾಗುವ ನಿಟ್ಟಿನಲ್ಲಿ ಇಲ್ಲಿಯವರೆಗೆ 3575.52 ಕೋಟಿ ರುಪಾಯಿಗಳನ್ನು ನೀಡಿದ್ದು, ಸುಮಾರು ಇಪ್ಪತ್ತ್ಮೂರು ಲಕ್ಷಕ್ಕಿಂತ ಹೆಚ್ಚಿನ  ಇದರ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ. ರಾಷ್ಟ್ರೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಹಿಳಾ ಉದ್ಯಮಿಗಳಿಗೆ ಶೇ. 6 ರ ಕಡಿಮೆ ಬಡ್ಡಿಯಂತೆ ಸಾಲ ಸೌಲಭ್ಯವನ್ನು ಒದಗಿಸುತ್ತಿದೆ. ದುರ್ಬಲವರ್ಗದವರನ್ನು ಮುಖ್ಯವಾಹಿನಿಗೆ ತರುವುದಕ್ಕಾಗಿ ಮುದ್ರಾ ಯೋಜನೆ, ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ, ಪ್ರಧಾನ ಮಂತ್ರಿ ಜನಧನ ಯೋಜನೆ , ಸಾಲ ಪ್ರಮಾಣ ಹೆಚ್ಚಳ ಯೋಜನೆ ಇನ್ನೂ ಮುಂತಾದ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಹೇಳಿಕೊಳ್ಳುವುದಕ್ಕೆ ಅಸಂಖ್ಯವಾದ ಇಷ್ಟೆಲ್ಲ ಯೋಜನೆಗಳಿದ್ದರೂ ಸಹ ನಿರೀಕ್ಷಿತ  ಪ್ರತಿಯೊಂದು ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಲು ನಮ್ಮಿಂದ ಹಾಗೂ ಸರಕಾರಗಳಿಂದ ಸಾಧ್ಯವಾಗಿಲ್ಲವೆಂದಾದರೆ ನಾವುಗಳು ಎಲ್ಲಿಯೋ ಎಡವುತ್ತಿರುವಂತಿದೆ. ಸರಕಾರದ ಯೋಜನೆಗಳು ಜನಸಾಮಾನ್ಯನಿಗೆ ನೇರವಾಗಿ ಮುಟ್ಟುವಂತಾಗಲು ಸುಲಭ, ಪಾರದರ್ಶಕ ಹಾಗೂ ಹೆಚ್ಚಿನ ಓಡಾಟವಿಲ್ಲದೆ ಯೋಜನೆಗಳು ಕೈಗೆಟಕುವಂತಿರಬೇಕು. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲದೆ ಅರ್ಹರಿಗೆ ಯೋಜನೆಗಳು ಮುಟ್ಟುವಂತಿರಬೇಕು. ಆದರೆ ಇಂದಿನ ಆಡಳಿತ ಪದ್ದತಿಯಲ್ಲಿ ಪ್ರಭಾವಿಗಳು ಹಾಗೂ ಲಂಚ ನೀಡುವಷ್ಟು ಸದೃಢವಾಗಿರುವವರು ಮಾತ್ರ ಯೋಜನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದುದರಿಂದಾಗಿಯೆ ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ನಾಗರೀಕ ಸರಕಾರಗಳು  ಮುದ್ರಿಸಲಾದ ಪುಸ್ತಕಗಳಲ್ಲಿ ಮತ್ತು ವೇದಿಕೆಯ ಭಾಷಣಗಳಲ್ಲಿ ಯೋಜನೆಗಳನ್ನು ವೈಭವಿಕರಿಸಿ ಪ್ರಚಾರ ಪಡೆದುಕೊಳ್ಳುವುದನ್ನು ಬದಿಗಿಟ್ಟರೆ ಜನಸಾಮಾನ್ಯನಿಗೆ ಯೋಜನೆಗಳನ್ನು ತಲುಪಿಸುವಲ್ಲಿ ಆದ್ಯತೆಯನ್ನು ನೀಡುವುದು ಬಹಳ ಕಡಿಮೆ. ಕ್ಲಿಷ್ಟಕರ ಆಡಳಿತ ಪದ್ದತಿ, ತಾಲೂಕು, ಜಿಲ್ಲೆ, ನಿರ್ದೇಶನಾಲಯ, ಸಚಿವಾಲಯ ಮತ್ತು ವಿಧಾನಸೌಧ ಎಂಬ ವಿವಿಧ ಸ್ಥರಗಳಿಂದಾಗಿ ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿರುವ ಯಾರೊಬ್ಬರೂ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲಾರರು. ಅದರ ಬದಲಾಗಿ ತಾಲೂಕು ಮಟ್ಟದ ಘಟಕಳನ್ನು ಅನುದಾನಿತ ವಲಯಗಳನ್ನಾಗಿ ಘೋಷಿಸುವುದರೊಂದಿಗೆ ಒಬ್ಬ ಜನಸಾಮಾನ್ಯ ತನ್ನ ಕೆಲಸ ಹಾಗೂ  ಪಡೆದುಕೊಳ್ಳುವುದಕ್ಕಾಗಿ ಅಂತಿಮವಾಗಿ ಸಂಚರಿಸಬಹುದಾದ ಕೊನೆಯ ಘಟ್ಟವನ್ನಾಗಿ ತಾಲೂಕು ಕೇಂದ್ರಗಳನ್ನು ಸೃಜಿಸಬೇಕಾಗಿದೆ. ಮೇಲ್ವಿಚಾರಣೆ, ಪ್ರಗತಿ ಪರಿಶೀಲನೆ ಮತ್ತು ಅನುಮೋದನೆಗಳು ಈ ಹಂತದಲ್ಲಿಯೆ ಇತ್ಯರ್ಥವಾದಲ್ಲಿ ಆಡಳಿತ ಯಂತ್ರವು ಜನಸಾಮಾನ್ಯರ ಸಮೀಪಕ್ಕೆ ಧಾವಿಸಿದಂತಾಗುತ್ತದೆ. ಪ್ರತಿಯೊಂದು ಬಡಕುಟುಂಬವನ್ನು ಆರ್ಥಿಕ ಒಳಗೊಳ್ಳುವಿಕೆಯ ಪಾಲ್ಗೊಳ್ಳುವಿಕೆಯಿಂದ ವಂಚಿತಗೊಳಿಸಿದಲ್ಲಿ ಸರ್ವಾಂಗೀಣ ಅಭಿವೃದ್ಧಿಯೆಂಬುದು ಕೇವಲ ಕಲ್ಪನೆಯ ಗೋಪುರದಂತೆ ಭಾಸವಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close