About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಟೀಕಾಕಾರರಿಗೆ ಬ್ಯಾಟಿಂಗ್‌ ಮೂಲಕವೇ ಉತ್ತರ ನೀಡಿದ ಧೋನಿ

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಒಡ್ಡಿರುವ 289 ರನ್ ಹಿಂಬಾಲಿಸುತ್ತಿರುವ ಟೀಮ್ ಇಂಡಿಯಾ, ಆರಂಭಿಕ ಆಘಾತ ಅನುಭವಿಸಿದರೂ ಭಾರತದ ಮಾಜಿ ನಾಯಕ ಎಂಎಸ್‌ ಧೋನಿ ಅರ್ಧಶತಕ ಬಾರಿಸುವ ಮೂಲಕ ಟೀಕಾಕಾರರಿಗೆ ಬ್ಯಾಟಿಂಗ್‌ ಮೂಲಕವೇ ಉತ್ತರ ನೀಡಿದರು.

ಧೋನಿ ಫಿಫ್ಟಿ 93 ಎಸೆತಗಳಲ್ಲಿ ದಾಖಲಾಗಿದ್ದವು. ಈ ಮೂಲಕ ತಮ್ಮ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದರು. ಆದರೆ ಅರ್ಧಶತಕದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದ ಧೋನಿ ನಿರಾಸೆ ಅನುಭವಿಸಿದರು. 96 ಎಸೆತಗಳನ್ನು ಎದುರಿಸಿದ ಮಹಿ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು. ಅಲ್ಲದೆ ರೋಹಿತ್ ಜತೆ ನಾಲ್ಕನೇ ವಿಕೆಟ್‌ಗೆ 137 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು. ಧೋನಿ ವಿಕೆಟ್ ಸಹ ಡೆಬ್ಯು ವೇಗಿ ಬೆಹ್ರೆನ್‌ಡಾರ್ಫ್ ಪಾಲಾಯಿತು.

Tags

Related Articles

Leave a Reply

Your email address will not be published. Required fields are marked *

Language
Close