About Us Advertise with us Be a Reporter E-Paper

ಅಂಕಣಗಳು

ಅಂತಃಶಕ್ತಿಗೆ ತೆರೆದುಕೊಳ್ಳಲಿಲ್ಲ

ತುರುವೇಕೆರೆ ಪ್ರಸಾದ್

ಈಚೆಗಷ್ಟೇ ಬೃಂದಾವನಸ್ಥರಾದ ಶೀರೂರಿನ ಶ್ರೀ ಲಕ್ಷ್ಮೀವರ ತೀರ್ಥರು ವಿಚಾರವಾದಿಗಳೂ, ಬಂಡಾಯ ಪ್ರವೃತ್ತಿಯವರೂ, ಶೋಷಣೆ, ಅನ್ಯಾಯಗಳ ವಿರುದ್ಧ ಸಿಡಿದೇಳುವ ಕ್ರಾಂತಿಯ ಮನೋಭಾವದವರೂ, ಪರಂಪರೆಗೆ ಅಂಟಿಕೊಳ್ಳದೆ ಸದಾ ಹೊಸ ಹೊಳಹುಗಳನ್ನು ಹುಡುಕುವ ಮತ್ತು  ಆಧುನಿಕತೆಗೆ ತೆರೆದುಕೊಳ್ಳುವ ಮನೋಭಾವದವರು   ಅತ್ಯಂತ ಮೆಚ್ಚುಗೆಯ ಸಂಗತಿಯೇ! ಆದರೆ ಒಬ್ಬ ವ್ಯಕ್ತಿ ತಾನು ಯಾವ ಮೂಲ ನೆಲೆಯಿಂದ ಬಂದಿದ್ದೇನೆ, ಮತ್ತು ತನ್ನ ಅಸ್ತಿತ್ವ ಯಾವ ಮೌಲ್ಯಗಳ ಆಧಾರದ ಮೇಲೆ ಗುರುತಿಸಲ್ಪಟ್ಟಿದೆ ಎನ್ನುವುದನ್ನು ಮರೆಯಬಾರದು.

ನಮ್ಮ ಸಮಾಜದಲ್ಲಿ ಸನ್ಯಾಸಿ, ಗುರು, ಮಠ ಇವಕ್ಕೆಲ್ಲಾ ಒಂದು ಪವಿತ್ರವಾದ ಅರ್ಥ ಇದೆ. ಗೌರವ ಭಾವನೆ ಇದೆ. ಅವು ಶ್ರದ್ದಾಭಕ್ತಿಯ ಸಂಕೇತಗಳು ಎಂಬ ನಂಬಿಕೆ ಇದೆ. ಇಲ್ಲಿರುವ ವ್ಯಕ್ತಿಗಳು ಸದಾಚಾರಿಗಳೂ, ಸದ್ಗುಣ ಸಂಪನ್ನರೂ, ಸರ್ವಸಂಗ ಪರಿತ್ಯಾಗಿಗಳೂ ಆಗಿರಬೇಕೆಂದು (ಅವರು  ಸಮುದಾಯ ನಿರೀಕ್ಷಿಸುತ್ತದೆ. ಸ್ವಾಮೀಜಿಯ ಚಿಂತನೆ, ಆಧ್ಯಾತ್ಮದ ಹಿನ್ನೆಲೆಯಲ್ಲಿ ಮಠ ಸಮುದಾಯಕ್ಕೆ ಮಾರ್ಗದರ್ಶಕವಾಗಬೇಕಾಗುತ್ತದೆ.  ಹಿಂಸೆ ಮತ್ತು ಭ್ರಷ್ಠತೆಯ ಸಮಾಜದಲ್ಲಿ ಬದುಕಬೇಕಾದ ಅನಿವಾರ್ಯತೆಗಳ ಬಗ್ಗೆ, ನಾವು ಅರಸುವ ಭದ್ರತೆ ಮತ್ತು ನಿರೀಕ್ಷಿಸುವ ಸಂತೋಷದ ಬಗ್ಗೆ, ಮನುಕುಲವನ್ನು ಭಯ, ಕ್ರೋಧ, ದುಃಖ ನೋವುಗಳಿಂದ ಮುಕ್ತಗೊಳಿಸುವ ಬಗ್ಗೆ, ದೈನಂದಿನ ಬದುಕಿಗೆ ಬೇಕಾದ ಉಪಾಸನೆ ಮತ್ತು ಆಧ್ಯಾತ್ಮದ ಶ್ರೇಷ್ಠತೆ ಮತ್ತು ಅವಶ್ಯಕತೆ ಬಗ್ಗೆ ಧರ್ಮಸೂಕ್ಷ್ಮಗಳ ಅರಿವು ಮೂಡಿಸುವುದು..ಹೀಗೆ ಸ್ವಾಮಿಗಳು ಹಾಗೂ ಮಠಗಳು ಸಾರ್ವಜನಿಕವಾಗಿ ಅಲಿಖಿತ ಸಂವಿಧಾನವೊಂದಕ್ಕೆ

ಲಕ್ಷ್ಮೀವರತೀರ್ಥರು ಒಲ್ಲದ ಮನಸ್ಸಿನಿಂದಲೇ ಸನ್ಯಾಸಿಯಾಗಿರಬಹುದು. ಅವರಿಗೆ ಸನ್ಯಾಸ ದೀಕ್ಷೆ ಕೊಟ್ಟ ಸಂದರ್ಭದಲ್ಲಿ ಅವರಿಗೆ ಲೌಕಿಕ ಪಾರಮಾರ್ಥಿಕ ತಿಳಿವಳಿಕೆಯೇ ಇಲ್ಲದಿರಬಹುದು. ಅದು ಒಂದು ಹೆಣ್ಣು ಮಗುವಿಗೆ ಬಾಲ್ಯವಿವಾಹ ಮಾಡುವಷ್ಟೇ ತಪ್ಪು ನಿಜ..ಆದರೆ ಅವರಿಗೆ ವ್ಯವಸ್ಥೆಯಾಚೆ ಸಿಡಿದು ಹೋಗುವ ಎಲ್ಲಾ ಅಕಾಶ ಮತ್ತು ಸಾಧ್ಯತೆಗಳೂ ಇತ್ತು. ಈಗಾಗಲೇ ಅವರ ಮುಂದೆ ಅಂತಹ ನಿರಾಕರಣದ ಮಾದರಿಗಳಿದ್ದವು.  ಅವರು  ಸನ್ಯಾಸಕ್ಕಾಗಲೀ, ಪೀಠಕ್ಕಾಗಲೀ ಕಟ್ಟುಬೀಳಬೇಕಿರಲಿಲ್ಲ. ಅವರ ವಿಚಾರವಾದ, ಕ್ರಾಂತಿಯ ಧೋರಣೆಗೆ ತಕ್ಕ ಒಂದು ಜಾಗವನ್ನು ಅವರೇ  ಅಥವಾ ಸೃಷ್ಟಿಸಿಕೊಳ್ಳಬಹುದಿತ್ತು. ಅಲ್ಲಿಂದಲೇ ಅವರು ವ್ಯವಸ್ಥೆಯ ವಿರುದ್ಧ ಹೋರಾಡಬಹುದಿತ್ತು. ಆಗ ಅವರು ನಿಜಕ್ಕೂ ಶ್ರೇಷ್ಠರಾಗುತ್ತಿದ್ದರು.

ಹಿಂದೂ ಧರ್ಮ ಮತ್ತು ಬೌದ್ಧತತ್ವಗಳಿಗೆ ಪಾಶ್ಚಾತ್ಯ ಸ್ವರೂಪಗಳ ವ್ಯಾಖ್ಯಾನ  ನೀಡಿದ ಡಾ. ಆನಿಬೆಸೆಂಟ್, ಜಿಡ್ಡು ಕೃಷ್ಣಮೂರ್ತಿಯನ್ನು ವಿಶ್ವಗುರು ಎಂದು ಕರೆದಿದ್ದರು. ‘ಆರ್ಡರ್‌ಆಫ್ ದಿ ಈಸ್‌ಟ್’ ಸಂಸ್ಥೆಯ ಮುಂದಾತ್ವವನ್ನೇ ಅವರಿಗೆ ವಹಿಸಿದ್ದರು. ಆದರೆ ಜಿಡ್ಡು ಕೃಷ್ಣಮೂರ್ತಿ 1929ರಲ್ಲಿ ಆ ಹುದ್ದೆಯನ್ನು ಯಾರ ಮುಲಾಜೂ ಇಲ್ಲದೆ ತೊರೆದರು. ಅದಕ್ಕಾಗಿ ಅವರಿಗೆ ನೀಡಿದ್ದ ಹಣ, ಸಂಪತ್ತು ಎಲ್ಲವನ್ನೂ  ವಾಪಸ್ ಕೊಟ್ಟುಬಿಟ್ಟರು. ಹೀಗೆ ಎಲ್ಲಾ ತೊರೆದು ವಾಸಪ್ ಕೊಟ್ಟು ಬರುವ ಮನಸ್ಥಿತಿ ಲಕ್ಷ್ಮೀವರರಿಗೆ ಇರಲೇ ಇಲ್ಲ. ಅವರ ಹೋರಾಟ ತಾತ್ವಿಕ ಸಿದ್ಧಾಂತಕ್ಕಿಂತ ಹೆಚ್ಚಾಗಿ ಹಠ, ಸೇಡಿನ ಮನೋಭಾವದಿಂದ ಕೂಡಿತ್ತು. ಮನುಷ್ಯ ಸ್ವಭಾವ  ಸಹಜ ಭಾವನೆಯಿಂದ ಬರುತ್ತದೆ. ಅದು ಇಂದ್ರಿಯ ಸಹಜವಾದುದು. ಅಂತಃಶಕ್ತಿ ಎನ್ನುವುದು ಅತೀಂದ್ರಿಯವಾದುದು.  ಶೀರೂರು ಶ್ರೀಗಳು  ಸ್ವಭಾವವನ್ನು ಮೀರಿದ ಅಂತಃಶಕ್ತಿಗೆ ತೆರೆದುಕೊಳ್ಳಲಿಲ್ಲ. ಇದಕ್ಕೆ ಉತ್ತರವನ್ನು ಬಾಲಸನ್ಯಾಸತ್ವ ಪದ್ಧತಿಯಲ್ಲಿ ಹುಡುಕಿದರೇ ಸಿಗುವುದೇ, ಗೊತ್ತಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close