ಸೀತಾರಾಮನ್‌ಗೆ ಚೀನಾ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರ

Posted In : ವಿದೇಶ

ಬೀಜಿಂಗ್: ಸಿಕ್ಕೀಂನ ನಾಥು ಲಾದ ಬಳಿಯ ಭಾರತ-ಚೀನಾ ಗಡಿಯಲ್ಲಿ ಚೀನಾ ಯೋಧರೊಂದಿಗೆ ಉಭಯ ಕುಶಲೋಪರಿ ನಡೆಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನಡೆ ಕುರಿತು ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಪ್ರಶಂಸೆ ಗಳಿಸಿದೆ.

ಡೋಕ್ಲಾಮ್ ಬಿಕ್ಕಟ್ಟು ಅಂತ್ಯವಾದ ಒಂದೂವರೆ ತಿಂಗಳ ಬಳಿಕ ಗಡಿಗೆ ಭೇಟಿ ನೀಡಿದ ಸೀತಾರಾಮನ್ ಚೀನೀ ಯೋಧರೊಂದಿಗೆ ನಮಸ್ತೆ ಎಂದು ಸಂಬೋ ಧಿಸಿದ ಮಾತನಾಡುತ್ತಿರುವ ವಿಡಿಯೋ ತುಣುಕು ಚೀನಾದ ಸಾಮಾ ಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹಬ್ಬಿದೆ. ಸೀತಾರಾಮನ್ ನಡೆಗೆ ಚೀನಾದ ರಾಜ ಕೀಯ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದರೂ ವಿದೇಶಾಂಗ ಸಚಿವಾಲಯ ಗಡಿ ವಿಚಾರವಾಗಿ ತನ್ನ ಹಳೆಯ ನಿಲುವನ್ನೇ ಮುಂದುವರೆಸಿದೆ.

ಗಡಿಗೆ ಭೇಟಿ ನೀಡಿದ ಸೀತಾರಾಮನ್‌ರನ್ನು ಧೈರ್ಯಶಾಲಿ ಮಹಿಳಾ ಸಚಿವೆ ಎಂದು ಬಣ್ಣಿಸಲಾಗಿದೆ. ಚೀನಾದ ಕಮ್ಯೂನಿಸ್ಟ್ ಸರಕಾರದಲ್ಲಿ ಯಾವುದೇ ಮಹಿಳಾ ಮಂತ್ರಿ ಇಲ್ಲ. ಭಾರತದ ಮಹಿಳಾ ರಕ್ಷಣಾ ಸಚಿವೆ ಖುದ್ದು ಮುಂದೆ ಬಂದು ಗಡಿ ಸಮಸ್ಯೆ ಎದುರಿಸುತ್ತಿದ್ದಾರೆ. ಎಂಥ ಧೈರ್ಯಶಾಲಿ ಮಹಿಳೆ ಎಂದು ಸಿನಾ ವೈಬೋ ಜಾಲತಾಣದಲ್ಲಿ ತು ಯುಯೆಯುಯೆ ಎಂಬ ಯುವಕ ಬರೆದಿದ್ದಾನೆ. ಸಿನಾ ವೈಬೋ ಚೀನಾದಲ್ಲಿ ಟ್ವಿಟರ್ ತತ್ಸಮಾನ ಜಾಲತಾಣವಾಗಿದೆ.

ಆದರೆ ಸೀತಾರಾಮನ್‌ರ ಈ ಸ್ನೇಹಪರ ನಡೆಯಿಂದ ಹೇಳಿಕೊಳ್ಳುವಂಥ ಪ್ರಯೋಜನವೇನೂ ಆಗುವುದಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.  ಚೀನಾ-ಭಾರತ ಗಡಿಯನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ನಾಥು ಲಾ ಕಣಿವೆ ಇದಕ್ಕೆ ಸ್ಪಷ್ಟ ಉದಹರಣೆಯಾಗಿದೆ. ಈ ಕುರಿತ ಐತಿಹಾಸಿಕ ಒಪ್ಪಂದಗಳನ್ನು ಭಾರತ ಗೌರವಿಸುತ್ತದೆ ಎಂದು ನಂಬಿದ್ದೇವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಚೀನಾದ ದಕ್ಷಿಣ ಏಷ್ಯಾ ಅಧ್ಯಯನ ತಜ್ಞ ಕಿಯಾನ್ ಫೆಂಗ್ ಸೀತಾರಾಮನ್‌ರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿ ಭಾರತದ ರಕ್ಷಣಾ ಸಚಿವರ ಈ ನಿಲುವು ಉಭಯ ದೇಶಗಳ ನಡುವಿನ ಸಂಬಂಧವನ್ನು ಮರಳಿ ಹಳಿಗೆ ತರಲು ನೆರವಾಗಲಿದೆ ಎಂದು ಫೆಂಗ್ ಹೇಳಿದ್ದಾರೆ.

Leave a Reply

Your email address will not be published. Required fields are marked *

fifteen − nine =

 
Back To Top