About Us Advertise with us Be a Reporter E-Paper

Breaking Newsರಾಜ್ಯ

ವಿಚಿತ್ರ ಮಗು ಜನನ: ಕ್ಷಣಾರ್ಧದಲ್ಲಿ ಮರಣ

ಸೋಮವಾರಪೇಟೆ: ಶನಿವಾರಸಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಚಿತ್ರ ದೇಹವುಳ್ಳ ಮಗು ತಾಯಿ ಗರ್ಭದಿಂದ ಹೊರ ಬಂದ ಕೆಲವೇ ಕ್ಷಣದಲ್ಲಿ ಮೃತಪಟ್ಟಿದೆ.

ಮಗುವಿನ ಹಿಂಬದಿಯಲ್ಲಿ ಬಾಲವೊಂದಿದ್ದು, ಬೃಹತ್ ಗಾತ್ರವಿರುವ ಒಂದೇ ಕಾಲು ಇದ್ದು, ಮಗುವಿನ ಲಿಂಗ ತಿಳಿಯಲು ಯಾವುದೇ ಕುರುಹುಗಳಿಲ್ಲದೆ ನೋಡುಗರನ್ನು ಆಶ್ಚರ್ಯ ಚಕಿತರಾಗುವಂತೆ ಮಾಡಿದೆ.

ಪತಿ ಮೂರ್ತಿ ಎಂಬುವವರು ಪತ್ನಿ ಚಿನ್ನಮ್ಮಳನ್ನುಸೋಮವಾರ ಸಂಜೆ ಶನಿವಾರಸಂತೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆರಿಗೆಗಾಗಿ ದಾಖಲಿಸಿದ್ದಾರೆ. ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ಈ ಮಗುವಿಗೆ ಜನ್ಮ ನೀಡಿದ್ದಾಳೆ. ಶುಶ್ರೂಷಕಿ ಗೀತಾ ಎಂಬವವರು ಹೆರಿಗೆಯನ್ನು ಸುಸೂತ್ರವಾಗಿ ನಡೆಸಿದ್ದಾರಾದರೂ ಮಗುವನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೆ ಅದಾಗಲೇ ಮಗು ಇಹಲೋಕ ತ್ಯಜಿಸಿತ್ತು.

ಚಿನ್ನಮ್ಮಳ ಆರೋಗ್ಯ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಮಂಗಳವಾರ ವಿಚಿತ್ರ ಮಗುವನ್ನು ನೋಡಲು ಆಸ್ಪತ್ರೆಯಲ್ಲಿ ಜಮಾಯಿಸಿ, ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close