About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಬರೀ ಬೊಗಳೆ ಮಾತನಾಡಿಕೊಂಡು ಮೋದಿ ಕಾಲ ಕಳೆಯುತ್ತಿದ್ದಾರೆ: ದಿನೇಶ್ ಗುಂಡೂರಾವ್

ಮೈಸೂರು: ಅಭಿವೃದ್ಧಿ ವಿಷಯಕ್ಕಿಂತ ಬರೀ ಸುಳ್ಳು, ಬೊಗಳೆ ಮಾತನಾಡಿಕೊಂಡು ಪ್ರಧಾನಿ ಮೋದಿ ಕಾಲ ಕಳೆಯುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರು ಬರೀ ಮಾತಿನಲ್ಲಿ ಜೈಶ್ರೀರಾಮ ಎನ್ನುತ್ತಾರೆ. ಆದರೆ ಮಾಡೋದೆಲ್ಲಾ ಅನೈತಿಕ, ಅಧರ್ಮದ ಕೆಲಸ. ಉಗ್ರ ಬಲಪಂಥೀಯ ವಾದದಿಂದ ದೇಶಕ್ಕೆ ದೊಡ್ಡ ಗಂಡಾಂತರವಿದೆ. ಎಡಪಂಥೀಯ ವಾದದ ನಕ್ಸಲರಂತೆ, ಬಲಪಂಥೀಯರೂ ಸಮಾಜಕ್ಕೆ ಅಪಾಯಕಾರಿಯಾಗಿದ್ದಾರೆ. ಮೋದಿಯವರ ಸ್ನೇಹಿತರು ಬ್ಯಾಂಕ್ ಲೂಟಿ ಮಾಡಿ ದೇಶ ಬಿಟ್ಟು ಓಡಿ ಹೋಗಿದ್ದಾರೆ, ಇದೆಲ್ಲಾ ಗೊತ್ತಿದ್ದೂ ನರೇಂದ್ರ ಮೋದಿ ಸುಮ್ಮನಿದ್ದಾರೆ. ನಾಲ್ಕೂವರೆ ವರ್ಷಗಳಿಂದ ಲೋಕಪಾಲರ ನೇಮಕ ಆಗಿಲ್ಲ, ಮಹಾದಾಯಿ ವಿಚಾರದಲ್ಲಿ ರಾಜಕೀಯ ಮಾಡಿದ್ದು ಬಿಟ್ಟರೆ, ಸಮಸ್ಯೆಗೆ ಪರಿಹಾರ ಕಲ್ಪಿಸಲಿಲ್ಲ. ಇವರ ಆಡಳಿತದಲ್ಲಿ ದೇಶದಲ್ಲಿ ತೀವ್ರ ಭ್ರಷ್ಟಾಚಾರ ನಡೆಯುತ್ತಿದೆ ಎಂದರು.

ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ವೈಷಮ್ಯದ ವಾತಾವರಣ ನಿರ್ಮಾಣವಾಗಿದೆ. ನಿರುದ್ಯೋಗ ಹೆಚ್ಚಾಗಿದೆ. ರೈತರಿಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿಲ್ಲ. ಮಾಜಿ ಪ್ರಧಾನಿ ವಾಜಪೇಯಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಹೋದ ಸ್ವಾಮಿ ಅಗ್ನಿವೇಶ್‌ರನ್ನು ಹೊಡೆಯುತ್ತಾರೆ. ದೇಶದಲ್ಲಿ ಲಿಂಚಿಂಗ್ ಎಂಬ ಪದ ಬಳಕೆಯೇ ಇರಲಿಲ್ಲ. ಇವರಿಂದ ಮಾಬ್ ಲಿಂಚಿಂಗ್ ಪದ ಹುಟ್ಟಿಕೊಂಡಿದೆ ಎಂದು ತರಾಟೆಗೆ ತಗೆದುಕೊಂಡರು.

Tags

Related Articles

Leave a Reply

Your email address will not be published. Required fields are marked *

Language
Close