About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ನಿವೃತ್ತಿ ಸನಿಹದಲ್ಲಿರುವ ಮುಖ್ಯ ನ್ಯಾಯಾಧೀಶರ ಮುಂದಿವೆ ಮಹತ್ವದ ಪ್ರಕರಣಗಳು

ತಮ್ಮ ನಿವೃತ್ತಿಗೆ ಇನ್ನೊಂದೇ ತಿಂಗಳು ಬಾಕಿ ಇರುವ ವೇಳೆ ಮುಖ್ಯ ನ್ಯಾಯಾಧೀಶ ದೀಪಕ್‌ ಮಿಶ್ರಾ ಅನೇಕ ಪ್ರಮುಖ ವಿಚಾರಗಳ ಕುರಿತ ಆದೇಶಗಳನ್ನು ಮುಂದಿಟ್ಟುಕೊಂಡಿದ್ದಾರೆ.

ತಮ್ಮ ಬಳಿಕ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಹೆಸರನ್ನು ಸರಕಾರಕ್ಕೆ ದೀಪಕ್‌ ಮಿಶ್ರಾ ಸೂಚಿಸಬೇಕಿದೆ.

ಆಧಾರ್‌ ಕಾರ್ಡ್‌‌ನ ಮಾನ್ಯತೆ, ಇಸ್ಲಾಂನಲ್ಲಿ ಮಸೀದಿಗಳ ಸ್ಥಾನಮಾನ ಕುರಿತು ಎದ್ದಿರುವ ಹೊಸ ಪ್ರಶ್ನೆಯು ಅಯೋಧ್ಯೆಯ ರಾಮ ಮಂದಿರದ ತೀರ್ಪಿನ ಮೇಲೆ ಪರಿಣಾಮ ಬೀರಲಿದೆ. ಮುಖ್ಯ ನ್ಯಾಯಮೂರ್ತಿಯ ಮುಂದಿನ ಅಭ್ಯರ್ಥಿಗಳಲ್ಲಿ ನ್ಯಾಯಾಧೀಶ ರಂಜನ್‌ ಗೊಗೊಯ್‌ ಮುಂಚೂಣಿಯಲ್ಲಿದ್ದಾರೆ.

ಆಧಾರ್‌ ಕುರಿತಂತೆ ಕೇಂದ್ರ ಸರಕಾರದ ಯೋಜನೆಗಳು ಸಾಂವಿಧಾನಿಕ ಸಿಂಧುತ್ವ ಹೊಂದಿವೆಯೇ ಎಂಬ ಕುರಿತಂತೆ ಮಹತ್ವದ ಆದೇಶವನ್ನು ಮಿಶ್ರಾ ನೀಡುವ ಸಾಧ್ಯತೆ ಇದೆ. ಆಧಾರ್‌ ಮೂಲಕ ನಾಗರಿಕರ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತಿದೆ ಎಂದು ಕೆಲ ಕಾರ್ಯಕರ್ತರು ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಬಡವರಿಗೆ ನೀಡಲಾಗುತ್ತಿರುವ ಸಬ್ಸಿಡಿ ಆಹಾರ ಧಾನ್ಯಗಳಲ್ಲಿ ಆಗುತ್ತಿರುವ ಭಾರೀ ಸೋರಿಕೆಯನ್ನು ತಡೆಗಟ್ಟಲು ಆಧಾರ್‌ ಬಹಳ ಮಹತ್ವದ್ದಾಗಿದೆ ಎಂದು ಕೇಂದ್ರ ಸರಕಾರ ಇತ್ತೀಚೆಗೆ ತಿಳಿಸಿದೆ. ಅಲ್ಲದೇ ಅಸ್ಸಾಂಗೆ ಬಂದಿರುವ ಅಕ್ರಮ ವಲಸಿಗರನ್ನು ಸುಲಭವಾಗಿ ಪತ್ತೆ ಮಾಡಲು ಆಧಾರ್‌ ಬಹಳ ಅನುಕೂಲಕರವಾಗಲಿದೆ ಎಂದು ಸರಕಾರ ತಿಳಿಸಿದೆ. ಇವೆಲ್ಲಾ ಸುಪ್ರೀಂ ಕೋರ್ಟ್ ಆದೇಶದ ಮೇಲೆ ಅವಲಂಬಿತವಾಗಿವೆ.

ಅಲ್ಲದೇ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಹಾಗು ಅನೈತಿಕ ಸಂಬಂಧಗಳಲ್ಲಿ ಮಹಿಳೆಯರನ್ನೂ ದೋಷಿಗಳನ್ನಾಗಿ ನೋಡುವ ಕುರಿತ ನಿರ್ಧಾರಗಳೂ ನ್ಯಾಯಾಧೀಶರ ಮುಂದಿದೆ.

ಇಸ್ಲಾಂನಲ್ಲಿ ಮಸೀದಿಗಳ ಪಾತ್ರದ ಕುರಿತಂತೆ ಈ ಹಿಂದೆ ನೀಡಲಾಗಿರುವ ತೀರ್ಪನ್ನು ಮತ್ತೊಮ್ಮೆ ಪ್ರಶ್ನಿಸುವ ಮೂಲಕ ಅಯೋಧ್ಯೆ ಪ್ರಕರಣದ ತೀರ್ಪನ್ನು ಮತ್ತಷ್ಟು ವಿಳಂಬ ಮಾಡಲು ನೋಡಲಾಗುತ್ತಿದೆ. ಈ ಕುರಿತಂತೆ ಮಿಶ್ರಾ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.

ಅಕ್ಟೋಬರ್‌ನಲ್ಲಿ ಮಿಶ್ರಾ ಮುಖ್ಯ ನ್ಯಾಯಾಧೀಶರ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close