About Us Advertise with us Be a Reporter E-Paper

ವಿ +

ವಿಕಲಚೇತನರ ಬಾಳಿಗೆ ಬೆಳಕಾದ ‘ದಿಯಾ’

- ಭವ್ಯ ಬೊಳ್ಳೂರು

ಕೈಕಾಲು ಸರಿಯಾಗಿದ್ದು, ಬುದ್ದಿವಂತಿಕೆಯಲ್ಲೂ ಯಾರಿಗೂ ಕಡಿಮೆಯಿಲ್ಲ ಅನ್ನಿಸಿಕೊಂಡವರೇ ಎಷ್ಟೋ ಸಂದರ್ಭದಲ್ಲಿ ಬದುಕಿನಲ್ಲಿ ಎಡವಿ ಬಿಡುತ್ತಾರೆ. ತಾವಂದುಕೊಂಡದ್ದನ್ನು ಸಾಧಿಸಲಾಗದೆ, ಮೂಲೆಗುಂಪಾಗುವುದೂ ಉಂಟು. ಇಂತವರ ಮದ್ಯೆ ದೈಹಿಕ ಸಮಸ್ಯೆಯನ್ನು ಮೆಟ್ಟಿನಿಂತು, ನಾಲ್ಕು ಜನ ಹುಬ್ಬೇರಿಸುವಂತೆ ಬದುಕಿ ತೋರಿಸುವವರೂ ಇದ್ದಾರೆ. ತಮ್ಮಲ್ಲಿರುವ ನ್ಯೂನತೆಗಳನ್ನು ಸಕರಾತ್ಮಕತೆಯೆಡೆಗೆ ಕೊಂಡೊಯ್ಯುವ ಮನಸ್ಥಿತಿಯುಳ್ಳವರಿಗೆ ಬೆನ್ನೆಲುಬಾಗಿ ನಿಂತು, ಸೂಕ್ತ ಕಲ್ಪಿಸುತ್ತಿದೆ ಬೆಂಗಳೂರಿನ ದಿಯಾ ಫೌಂಡೇಶನ್ ಸಂಸ್ಥೆ.

1999ರಲ್ಲಿ ಆರಂಭವಾದ ದಿಯಾ ಫೌಂಡೇಶನ್, ವಿಕಲಚೇತನರಿಗೆ ತರಬೇತಿಯನ್ನು ನೀಡುವ ಸಂಸ್ಥೆ. ಬೆಂಗಳೂರಿನ ಕಲ್ಯಾಣನಗರದಲ್ಲಿರುವ ಈ ಸ್ವಯಂ ಸೇವಾ ಸಂಸ್ಥೆ ಬದುಕಲ್ಲಿ ಅಂಧಕಾರ ಕವಿದಿರುವ ಅಸಹಾಯಕರನ್ನು ಬೆಳಕಿನತ್ತ ಕೊಂಡೊಯ್ಯುವ ಪ್ರಯತ್ನವನ್ನು ಮಾಡುತ್ತಿದೆ. ಕೇವಲ ದೈರ್ಯ ತುಂಬುವ ಕಾರ್ಯವನ್ನಷ್ಟೇ ಅಲ್ಲದೆ ವಿದ್ಯಾಭ್ಯಾಸ ನೀಡಿ, ಆರ್ಥಿಕವಾಗಿ ಸ್ವಾವಲಂಬಿಯಾಗಲು ಬೇಕಾದ ತರಬೇತಿಯನ್ನು ನೀಡುತ್ತಿದೆ.

ಇಲ್ಲಿರುವ ಹೆಚ್ಚಿನ ಸದಸ್ಯರು ಸೆರೆಬ್ರಲ್ ಫಾಲ್ಸಿಯಂತಹ ತೊಂದರೆಯಿಂದ ಬಳಲುತ್ತಿರುವವರು. ನೋಡಲು ವಿಚಿತ್ರವಾಗಿ ಕಂಡು, ಇತರರನ್ನು ಅವಲಂಬಿಸಿ ಬದುಕಬೇಕಾದ ಅನಿವಾರ್ಯತೆ ಇರುವವರು. ಇಂತವರನ್ನು ಮುಖ್ಯವಾಹಿನಿಗೆ ಕರೆ ತರುವ ಮಹತ್ ಕಾರ್ಯವನ್ನು ದಿಶಾ ಸಂಸ್ಥೆ ಮಾಡುತ್ತಿದೆ. ಜೀವನಕೌಶಲ್ಯ, ವೈಯಕ್ತಿಕ ಹಾಗೂ ಸಾಮಾಜಿಕ ಸಾಮರ್ಥ್ಯಗಳು, ಸಂವಹನ ಚಾಕಚಕ್ಯತೆ, ಗುಂಪು ಚಟುವಟಿಕೆ, ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳುವ ಮಾರ್ಗಗಳು, ಕೆಲಸದಲ್ಲಿ ಶಿಸ್ತು, ಜತೆಗೆ ಕುಟುಂಬವೇ ಹೆಮ್ಮೆ ಪಡುವಂತೆ ಬದುಕುವ ರೀತಿಯನ್ನು ಕಲಿಸಿಕೊಡುತ್ತದೆ. ಇಂತವರಿಗೆಂದೇ 2013ರಲ್ಲಿ ಗೃಹೋಪಯೋಗಿ ವಸ್ತುಗಳ ತಯಾರಿಸುವ ಫಾಕ್ಟರಿಯೊಂದನ್ನು ದಿಯಾ ಆರಂಭಿಸಿತ್ತು. ಇದೀಗ ಈ ಉದ್ಯಮವನ್ನು ವಿಸ್ತರಿಸಲಾಗಿದ್ದು, ಇಲ್ಲಿರುವ ವಿಕಲಚೇತನ ಅವರಿಗೆ ನೀಡಿದ್ದ ಕೆಲಸದ ಗುರಿಯನ್ನು ಸೂಕ್ತ ಸಮಯದಲ್ಲಿ ತಲುಪುತ್ತಿದ್ದಾರೆ. ಯಾರದ್ದೇ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆಯಿಲ್ಲದೆ ತಮ್ಮ ಕೆಲಸವನ್ನು ನಿಭಾಯಿಸುವಂತೆ ಮಾಡಿದ ಕ್ರೆಡಿಟ್ ದಿಯಾಗೆ ಸಲ್ಲಬೇಕು.

ಸದ್ಯ ಇಲ್ಲಿ 20 ವಿಕಲಚೇತನ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ನವೀನ ಮತ್ತು ಸೃಜನಶೀಲ ಉಡುಗೊರೆಗಳಾದ ಕ್ಯಾಂಡಲ್‌ಸ್, ಚಾಕೊಲೇಟ್‌ಸ್, ಗಿಫ್‌ಟ್ ಬ್ಯಾಗ್, ಕರಕುಶಲ ವಸ್ತುಗಳು ಇಲ್ಲಿ ತಯಾರಾಗುತ್ತಿವೆ.ದಿಯಾದ ವಿಶೇಷತೆ ಏನೆಂದರೆ ವಿದ್ಯಾರ್ಥಿಗಳ ಕೌಶಲ್ಯವನ್ನು ಗಮನಿಸಿ ಅದಕ್ಕೆ ತಕ್ಕಂತ ಕೆಲಸದ ಜವಬ್ಧಾರಿಯನ್ನು ನೀಡುವುದು. ಅದು ಪೇಪರ್ ಆಗಿರಬಹುದು, ಡೇಟಾ ಎಂಟ್ರಿ ಇರಬಹುದು ಅಥವಾ ಗಾರ್ಡನಿಂಗ್ ಕೆಲಸವೂ ಆಗಿರಬಹುದು. ಅದಕ್ಕೆ ಬೇಕಾದ ತರಬೇತಿಯನ್ನು ನೀಡಿ ಆ ಸದಸ್ಯರನ್ನು ಪೂರ್ಣ ಪ್ರಮಾಣದಲ್ಲಿ ತಯಾರು ಮಾಡುತ್ತಾರೆ. ಈ ತರಬೇತಿ ಇಲ್ಲಿನ ಸದಸ್ಯರಿಗೆ ಔದ್ಯೋಗಿಕ ಕ್ಷೇತ್ರದ ಮೊದಲ ಮೆಟ್ಟಿಲಾಗಿದ್ದು ಉತ್ತಮ ಗುಣಮಟ್ಟದ ಪ್ರಾಡಕ್‌ಟ್ಗಳು ದಿಯಾದಿಂದ ಮಾರುಕಟ್ಟೆಗೆ ಬಿಡುಗಡೆಯಾಗುವಂತೆ ಮಾಡಿದೆ.

‘ ಗಿಫ್‌ಟ್ ಉದ್ಯಮದಲ್ಲಿ ಗ್ರಾಹಕರನ್ನು ತೃಪ್ತಿ ಪಡಿಸುವ ಹೊಸ ಮತ್ತು ನಾವಿನ್ಯತೆಯುಳ್ಳ ಉತ್ಪನ್ನಗಳನ್ನು ತಯಾರಿ ಮಾಡುವುದು ಸುಲಭದ ಕೆಲಸವಲ್ಲ. ಉತ್ಪನ್ನಗಳನ್ನು ವಿನ್ಯಾಸಗೊಳಿಸುವುದು, ಅದಕ್ಕೊಂದು ರೂಪ ನೀಡುವುದು, ಜತೆಗೆ ಇಲ್ಲಿನ ವಿಕಲಚೇತನ ಉದ್ಯೋಗಿಗಳು ಅದನ್ನು ಕಾರ್ಯರೂಪಕ್ಕೆ ತರುವ ಪ್ರಕ್ರಿಯೆಯಲ್ಲಿ ಬಹಳಷ್ಟು ಅಡಚಣೆಗಳು ಎದುರಾಗುತ್ತವೆ. ಆದರೆ ಇವರ ಉತ್ಸಾಹ ಹಾಗೂ ಶಕ್ತಿ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಂತು ಉತ್ತಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆ ಮಾಡಿದೆ. – ಸುಮನ್ ಜೋನ್, ದಿಯಾ ಸಂಸ್ಥೆಯ ಸದಸ್ಯೆ,

ಸೆರೆಬ್ರೆಲ್ ಫಾಲ್ಸಿ ಸಮಸ್ಯೆಯಿಂದ ಬಳಲುತ್ತಿರುವ 22 ವರ್ಷ ವಯಸ್ಸಿನ ಸುರೇಶ್ ತನ್ನ 18ರ ಹರೆಯದಿಂದ ಸಂಸ್ಥೆಯ ಒಂದು ಭಾಗವಾಗಿದ್ದಾರೆ. ಇವರು ತನ್ನ ಹಣಕಾಸಿನ ನಿರ್ವಹಣೆ, ಮನೆಯನ್ನು ನಿಭಾಯಿಸುವುದು, ವೈಯಕ್ತಿಕ ಬೇಕು ಬೇಡಗಳು, ವೈಯಕ್ತಿಕ ಸುರಕ್ಷತೆ ಹಾಗೂ ಒಬ್ಬ ಜವಬ್ಧಾರಿಯುತ ಪ್ರಜೆಗೆ ಇರಬೇಕಾದ ಎಲ್ಲಾ ಗುಣಗಳನ್ನು, ಚಾಕಚಕ್ಯತೆಯನ್ನು ಇಲ್ಲಿ ಮೈಗೂಡಿಸಿಕೊಂಡಿದ್ದಾರೆ. ಸುರೇಶ್‌ರ ಅದಮ್ಯ ಆಸಕ್ತಿ ಹಾಗೂ ಏನನ್ನಾದರೂ ಕಲಿತುಕೊಳ್ಳಲೇ ಬೇಕು ಅನ್ನುವ ಛಲ ಇಲ್ಲಿಯವರೆಗೆ ಕರೆತಂದಿದೆ. ಇಲ್ಲಿನ ಗಳಿಕೆಯಿಂದ ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.

ವರ್ಷ ಪೂರ್ತಿ ಉದ್ಯೋಗವನ್ನು ನೀಡುತ್ತಿದ್ದು, ಹಬ್ಬ ಹರಿದಿನಗಳಲ್ಲಿ ಇಲ್ಲಿನ ಉದ್ಯೋಗಿಗಳ ಸದಸ್ಯರಿಗೂ ಕೆಲಸವನ್ನು ನೀಡಿ ಅವರಿಗೂ ಆದಾಯ ಗಿಟ್ಟುವಂತೆ ಮಾಡುತ್ತಿದೆ. ಒಟ್ಟಿನಲ್ಲಿ ಯಾರದ್ದೋ ಹಂಗಿನಲ್ಲಿ ಜೀವನಪೂರ್ತಿ ಬದುಕಬೇಕಾದ ಅನಿವಾರ್ಯತೆಯುಳ್ಳವರನ್ನು ಆತ್ಮಸ್ಥೈರ್ಯ ತುಂಬಿ, ತಮ್ಮ ಸ್ವಂತ ಕಾಲಿನಲ್ಲಿ ನಿಲ್ಲುವಂತೆ ಮಾಡಿದ ಹೆಗ್ಗಳಿಕೆ ದಿಯಾಗೆ ಸಲ್ಲಬೇಕು.

Tags

Related Articles

Leave a Reply

Your email address will not be published. Required fields are marked *

Language
Close