About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಶೇ. 60ರಷ್ಟು ಜನರಿಗೆ ಡೊನಾಲ್ಡ್ ಟ್ರಂಪ್ ಇಷ್ಟವಾಗಲ್ಲ

ವಾಷಿಂಗ್ಟನ್ : ಅಮೆರಿಕದಲ್ಲಿ 1980ರ ಬಳಿಕ ಜನಿಸಿದ ನಾಗರೀಕರ ಪೈಕಿ ಶೇ. 60ರಷ್ಟು ಜನರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಇಷ್ಟಪಡುವುದಿಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ.

18 ರಿಂದ 37 ವಯೋಮಾನದ ಒಳಗಿನ ನಾಗರೀಕರಿಗೆ ಟ್ರಂಪ್ ಅವರಾಗಲೀ, ಅವರ ಟ್ವಿಟರ್ ಚಟುವಟಿಕೆಗಳಾಗಲೀ ಇಷ್ಟವಾಗುವುದಿಲ್ಲ ಎಂದು ಮೆಸಾಚುಸೆಟ್ಟ್‌ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಸಮೀಕ್ಷೆಗೆ ಒಳಪಟ್ಟವರ ಪೈಕಿ ತಾವು ಡೆಮಾಕ್ರಟಿಕ್ ಎಂದು ಶೇ 54ರಷ್ಟು ನಾಗರೀಕರು, ರಿಪಬ್ಲಿಕನ್ ಎಂದು ಶೇ 32ರಷ್ಟು ನಾಗರೀಕರು ಮತ್ತು ಶೇ.12 ರಷ್ಟು ಜನರು ತಾವು ಸ್ವತಂತ್ರರು ಎಂದು ಹೇಳಿದ್ದರೆ, ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಶೇ. 2ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ರಿಪಬ್ಲಿಕನ್ ಎಂದು ಹೇಳಿಕೊಂಡವರ ಪೈಕಿ ಶೇ. 80ರಷ್ಟು ಜನರು ಟ್ರಂಪ್ ಅವರನ್ನು ಒಪ್ಪುುವುದಾಗಿ ಹೇಳಿದ್ದಾರೆ. ಶೇ 40ರಷ್ಟು ಮಂದಿ, ಟ್ರಂಪ್ ಅವರು ಅತಿ ಹೆಚ್ಚು ಟ್ವೀಟ್ ಮಾಡುತ್ತಾರೆ ಎಂದು ಅಭಿಪ್ರಾಾಯಪಟ್ಟಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close