Breaking Newsಕ್ರೀಡೆಪ್ರಚಲಿತ
ಜೊಕೊವಿಚ್ಗೆ ಆರಂಭಿಕ ಗೆಲುವು

ಲಂಡನ್: ವಿಶ್ವದ ಅಗ್ರ ಶ್ರೇಯಾಂಕಿತ ಸರ್ಬಿಯಾದ ಅನುಭವಿ ಟೆನಿಸ್ ತಾರೆ ನೊವಾಕ್ ಜೊಕೊವಿಚ್ ಅವರು ಎಟಿಪಿ ಫೈನಲ್ಸ್ನಲ್ಲಿ ಆರಂಭಿಕ ಜಯ ದಾಖಲಿಸಿದರು.
ಇಲ್ಲಿ ನಡೆದ ಗುಂಪು ಸುತ್ತಿನ ಮೊದಲ ಪಂದ್ಯದಲ್ಲಿ ಜೊಕೊವಿಚ್ ಅಮೆರಿಕಾದ ಜಾನ್ ಐಸ್ನರ್ ಅವರನ್ನು 6-4, 6-3 ನೇರಸೆಟ್ಗಳಿಂದ ಪರಾಭವಗೊಳಿಸುವಲ್ಲಿ ಯಶಸ್ವಿಯಾದರು. ಪಂದ್ಯ ಆರಂಭದಿಂದಲೂ ಉತ್ತಮ ಆಟವಾಡಿದ ನೊವಾಕ್ ಮೊದಲ ಸೆಟ್ನಲ್ಲಿ ಎರಡು ಹಾಗೂ ಎರಡನೇ ಸೆಟ್ನಲ್ಲಿ ಮೂರು ಅಂಕ ಮುನ್ನಡೆಯಾಗಿ ಗೆಲುವಿನ ನಗೆ ಬೀರಿದರು.
ಅವರು ಮುಂದಿನ ಪಂದ್ಯದಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಎದುರಿಸಲಿದ್ದಾರೆ. ‘ಟೂರ್ನಿಯ ಮೊದಲ ಪಂದ್ಯದಲ್ಲಿ ಜಯ ದಾಖಲಿಸಿರುವುದಕ್ಕೆ ಖುಷಿಯಾಗಿದೆ. ಮುಂದಿನ ಪಂದ್ಯಗಳಲ್ಲಿ ಹೆಚ್ಚಿನ ಆಟವಾಡುವ ಮೂಲಕ ಎದುರಾಳಿಯನ್ನು ಮಣಿಸಿ ಪ್ರಶಸ್ತಿ ಗೆಲ್ಲುತ್ತೇನೆ’ ಎಂದು ನೊವಾಕ್ ವಿಶ್ವಾಸ ವ್ಯಕ್ತಪಡಿಸಿದರು.
ಜ್ವೆರೆವ್ ಮೊದಲ ಪಂದ್ಯದಲ್ಲಿ ಮರಿನ್ ಸಿಲಿಚ್ ಅವರನ್ನು 7-6, 7-6 ನೇರಸೆಟ್ಗಳಿಂದ ಸೋಲಿಸುವಲ್ಲಿ ಯಶಸ್ವಿಯಾದರು. ಪಂದ್ಯದ ಮೊದಲ ಸೆಟ್ನಲ್ಲಿ ಹಾಗೂ ಎರಡನೇ ಸೆಟ್ನಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ಜ್ವೆರೆವ್ ಸಫಲರಾದರು. ಮುಂದಿನ ಪಂದ್ಯದಲ್ಲಿ ಸರ್ಬಿಯಾ ತಾರೆಯನ್ನು ಮಣಿಸುವ ಯೋಜನೆಯೊಂದಿಗೆ ಅಂಗಳಕ್ಕೆ ಆಗಮಿಸಲಿದ್ದಾರೆ.