About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ರಮೇಶ್‌ ಜಾರಕಿಹೊಳಿ-ಡಿಕೆಶಿ ಮಧ್ಯೆ ಫೈಟ್‌…!

ಬೆಂಗಳೂರು: ಬೆಳಗಾವಿ ಲೋಕಸಭಾ ಕ್ಷೇತ್ರದ ನಾಯಕರ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಾಗ್ವಾದ ನಡೆಯಿತು.

ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಬೆಳಗಾವಿ ವಿಚಾರವಾಗಿ ಮಾತನಾಡುತ್ತಿದ್ದಾಗ ಇವರಿಬ್ಬರ ಮಧ್ಯ ಜಗಳ ನಡೆದಿದೆ. ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವಿಚಾರ ಪ್ರಸ್ತಾಪ ಮಾಡುತ್ತಿದ್ದಾಗ ರಮೇಶ್‌ ಜಾರಕಿಹೊಳಿ ನಿಮಗೂ ಬೆಳಗಾವಿಗೂ ಏನೂ ಸಂಬಂಧವಿಲ್ಲ ಎಂದು ಕೂಗಾಡಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ  ವಾಗ್ವಾದ ನಡೆಯಿತು.

ರಮೇಶ್‌ ಜಾರಕಿಹೊಳಿ ನೀವು ಸುಮ್ಮನಿರಿ ಶಿವಕುಮಾರ್‌ , ನಿಮಗೂ ಬೆಳಗಾವಿಗೂ ಸಂಬಂಧವಿಲ್ಲ. ಅಲ್ಲಿ ರಾಜಾಕಾರಣ ಮಾಡುವವರು ನಾವು ಎಂದಿದ್ದಕ್ಕೆ ಆಕ್ರೋಶಗೊಂಡ ಸಚಿವ ಡಿ.ಕೆ.ಶಿವಕುಮಾರ್‌, ಇದಕ್ಕೂ ನನಗೂ ಸಂಬಂಧವಿಲ್ಲವಾ..? ನನ್ನನ್ನು ನೀವು ಏನು ಅಂದುಕೊಂಡಿದ್ದೀರಾ ಎಂದು ಪ್ರಶ್ನಿಸಿದರು. ಇದರಿಂದ ಗಾಬರಿಗೊಂಡ ಕೆ.ಸಿ.ವೇಣುಗೋಪಾಲ್‌ ಇಬ್ಬರು ನಾಯಕರನ್ನು ಸಮಾಧಾನಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಾಗ್ವಾದ ನಡೆದ ಕಾರಣ ಐದೇ ನಿಮಿಷದಲ್ಲಿ ಸಭೆ ಮುಕ್ತಾಯವಾಯಿತು.

Tags

Related Articles

Leave a Reply

Your email address will not be published. Required fields are marked *

Language
Close