ವಿಶ್ವವಾಣಿ

ಬಿಎಸ್‌ವೈಗೆ ಟಾಂಗ್‌ ಕೊಟ್ಟ ಡಿಕೆಶಿ

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಿಗೆ ಯಾಕಿಷ್ಟು ಅತುರ ಎನ್ನುವುದು ತಿಳಿಯುತ್ತಿಲ್ಲ. ಸ್ವಲ್ಪ ತಾಳ್ಮೆಯಿಂದ ವರ್ತಿಸಲಿ, ಅಧಿಕಾರ ಯಾರಿಗೂ ಶಾಶ್ವತವಲ್ಲ ಅದನ್ನು ದರುಪಯೋಗ ಮಾಡಿಕೊಳ್ಳುವುದು ಒಳ್ಳೆಯದಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪಗೆ ಸಚಿವ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿರುವುದು ಫೇಕ್‌ ಅಗಿದ್ದರೆ ಸಂತಸ. ಎಫ್‌ಐಆರ್ ದಾಖಲಾಗಿದ್ದು, ಡಿ.ಕೆ ಸಹೋದರರನ್ನು ಬಂಧಿಸುತ್ತಾರೆ ಎಂದು ಏಕೆ ಹೇಳುತ್ತಾರೆ. ಕೆಲವು ಬಿಜೆಪಿ ಅತುರದಲ್ಲಿದ್ದಾರೆ ಎನ್ನುವುದು ನನಗೂ ಗೊತ್ತು. ನಮಗೆ ಅಧಿಕೃತವಾಗಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಂದ ಯಾವುದೇ ಮಾಹಿತಿ ಇಲ್ಲ. ಅಧಿಕಾರಿ ಗಳಿಗೆ ಗೌರವ ಕೊಡುತ್ತೇವೆ ಯಾವ ಅಧಿಕಾರಿಗಳು ಇದೂವರೆಗೂ ಕರೆದು ಕೇಳಿಲ್ಲ. ಯಡಿಯೂರಪ್ಪ ಅಧಿಕಾರಿಗಳಿಗೆ ಬರೆದಿರುವ ಪತ್ರ ಫೇಕ್ ಅಗಿದ್ದಾರೆ ಸಂತೋಷ. ಯಡಿಯೂರಪ್ಪನವರ ರೆಕೆಮೆಂಡೇಷನ್ ಮೇಲೆ ಕವರಿಂಗ್ ಲೆಟರ್ ಕೊಟ್ಟಿದ್ದಾರೆ. ಪುಟ್ಟಸ್ವಾಮಿಗೌಡರಿಗೆ ಕೊಟ್ಟಿದ್ದಾರೆ. ಈಗಾಗಲೆ ಆ ಪತ್ರದಿಂದ ನಾನು ಮತ್ತು ಸುರೇಶ್ ಸಾಕಷ್ಟು ಅನುಭವಿಸಿದ್ದೇವೆ.

ಯಾವುದು ಶಾಶ್ವತ ಅಲ್ಲ. ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವುದು ಬೇಡ. ರಾಜಕೀಯ ಮಾಡುವುದು ಬೇಡ ಬಿಎಸ್ ಯಡಿಯೂರಪ್ಪಗೆ ಪರೋಕ್ಷವಾಗಿ ಸಚಿವ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದರು.

ನನ್ನ ವಿರುದ್ಧ ಯಾಕೆ ಎಫ್‌ಐಆರ್ ದಾಖಲು ಮಾಡುತ್ತಾರೆ ಕೆಲವು ಬಿಜೆಪಿ ನಾಯಕರು ಅನಗತ್ಯವಾಗಿ ಮಾತಾನಾಡುತ್ತಿದ್ದಾರೆ. ಅಧಿಕೃತ ವಾಗಿ ನನಗೆ ಯಾವ ದಾಖಲೆ ಅಥವಾ ಮಾಹಿತಿ ನೀಡಿಲ್ಲ. ಪ್ರಾಸಿಕ್ಯೂಷನ್ ವಿಚಾರ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ನ್ಯಾಯಾಲಯಕ್ಕೆ ನಾವು ಗೌರವಿಸುತ್ತೇವೆ. ಯಾವ ಅಧಿಕಾರಿಗಳು ಈ ಬಗ್ಗೆ ನನ್ನ ಕರೆದು ಕೇಳಿಲ್ಲ ಈ ಹಿಂದೆ ವಿಚಾರಣ ಸಮಯದಲ್ಲಿ ಅಧಿಕಾರಿಗಳು ಕರೆದು ಕೇಳಿದ್ದರು ಅದಕ್ಕೆ ಸೂಕ್ತವಾದ ಉತ್ತರವನ್ನು ನೀಡಿದ್ದೇನೆ.

ಬಿಜೆಪಿ ನಾಯಕರು ತಾಳ್ಮೆಯಿಂದ ಇದ್ದರೆ ಒಳ್ಳೆಯದು ರಾಜಕೀಯ ಮಾಡುವುದು ಸರಿಯಲ್ಲ ಹಣ, ಅಧಿಕಾರ ಪ್ರಭಾವದಿಂದಲೇ ರಾಜಕೀಯ ಮಾಡಿದರೆ ಅದಕ್ಕೂ ನಾನು ಸಿದ್ದನಾಗಿದ್ದೇನೆ. ಯಾವುದೇ ಮುಚ್ಚುಮರೆ ಏನೂ ಇಲ್ಲ ಬಿಜೆಪಿ ಮುಖಂಡರು ಕಾಂಗ್ರೆಸ್ ನ ಯಾವ ಶಾಸಕರನ್ನ ಭೇಟಿ ಮಾಡಿದ್ದಾರೆ.  ಮಾತುಕತೆ ನಡೆಸಿದ್ದಾರೆ ಎಲ್ಲ ನನಗೆ ಗೊತ್ತು. ಇಲ್ಲಿ ಯಾವುದು ಶಾಶ್ವತವಲ್ಲ, ನಾನೂ ಕೂಡ ಶಾಶ್ವತ ಅಲ್ಲ ಎಂದು ತಿರುಗೇಟು ನೀಡಿದರು.