About Us Advertise with us Be a Reporter E-Paper

ಅಂಕಣಗಳು

ಅನ್ನಭಾಗ್ಯದ ಗೊಂದಲ ಬೇಡ

ರಾಜ್ಯವನ್ನು ಹಸಿವು ಮುಕ್ತಗೊಳಿಸಬೇಕೆಂಬ ದೃಷ್ಟಿಯಿಂದ ರಾಜ್ಯ ಸರಕಾರ ಕಳೆದ ಮೂರ್ನಾಲ್ಕು  ಅನ್ನಭಾಗ್ಯ ಯೋಜನೆಯನ್ನು ಕರುಣಿಸುತ್ತಿದೆ. ಅದರಂತೆ ಒಬ್ಬರಿಗೆ ಏಳು ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಲಕ್ಷಗಟ್ಟಲೆ ಕುಟುಂಬಗಳು ಅನ್ನಭಾಗ್ಯದ ಅಕ್ಕಿಯಿಂದ ಹಸಿವು ನೀಗಿಸಿಕೊಳ್ಳುತ್ತಿವೆ. ಆದರೆ, ಕಾಂಗ್ರೆಸ್ ಸರಕಾರದ ಅವಧಿ ನಂತರ ಬಂದಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಏಳು ಕೆಜಿ ಅಕ್ಕಿಯ ಬದಲಿಗೆ ಐದೇ ಕೆಜಿ ಕೊಡಲಾಗುತ್ತದೆ ಎಂದು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಎರಡ್ಮೂರು ಬಾರಿ ಪ್ರಕಟಿಸಿದ್ದರು. ಈ ಬಗ್ಗೆ ಸರಕಾರದಿಂದ ಯಾವುದೇ ಅಧಿಕೃತ ಆದೇಶವೂ ಹೊರಬಿದ್ದಿಲ್ಲ,  ಮತ್ತು ನಾಗರಿಕ ಪೂರೈಕೆ ಇಲಾಖೆಗೂ ಯಾವುದೇ ಸೂಚನೆಯೂ ಬಂದಿಲ್ಲ. ಹೀಗಾಗಿ, ಹಳೆಯ ಪದ್ಧತಿಯಂತೆ ಏಳು ಕೆಜಿ ಅಕ್ಕಿ ನೀಡಲಾಗುತ್ತದೆ ಎಂದು ಆಹಾರ ಸಚಿವ ಜಮೀರ್ ಹೇಳುತ್ತಿದ್ದಾರೆ. ಆದರೆ, ಮುಖ್ಯಮಂತ್ರಿಗಳ ಹೇಳಿಕೆಯನ್ನೇ ನೆಪ ಮಾಡಿಕೊಂಡಿರುವ ಗ್ರಾಮಾಂತರ ಪ್ರದೇಶಗಳಲ್ಲಿನ ಕೆಲವು ನ್ಯಾಯಬೆಲೆ ಅಂಗಡಿಯವರು ಏಳು ಕೆಜಿಗೆ ಬದಲಾಗಿ ಐದು ಕೆಜಿ ಅಕ್ಕಿಯನ್ನು ವಿತರಿಸುವ ಮೂಲಕ ವಂಚಿಸುತ್ತಿರುವ ಪ್ರಕರಣಗಳು ಹೊರಬರುತ್ತಿವೆ. ಸರಕಾರದ ಯಾವುದೇ ಆದೇಶವಿಲ್ಲದಿದ್ದರೂ ಅಕ್ಕಿಯನ್ನು ಕಡಿಮೆ ಕೊಡುತ್ತಿರುವ ನ್ಯಾಯಬೆಲೆ ಅಂಗಡಿಯವರು ಆ  ಏನು ಮಾಡುತ್ತಿದ್ದಾರೆಂಬುದನ್ನೂ ಪತ್ತೆ ಮಾಡಬೇಕಿದೆ. ಮತ್ತೊಂದೆಡೆ, ರಾಜ್ಯ ಸರಕಾರ ಈ ಬಗ್ಗೆ ಇರುವ  ಗೊಂದಲವನ್ನು ಕೂಡಲೇ ಪರಿಹರಿಸಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ನೀಡುತ್ತಿರುವ ಈ ಅನ್ನಭಾಗ್ಯ ಯೋಜನೆಯನ್ನು ಸಾರ್ಥಕಗೊಳಿಸಬೇಕಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close