About Us Advertise with us Be a Reporter E-Paper

ವಿವಾಹ್

ಹೆಂಡತಿ ಫೋನ್ ಚೆಕ್ ಮಾಡ್ಬೇಡಿ!!

ಮೇಘನಾ ಎ.ಪಿ. ಶಿವಮೊಗ್ಗ

ಷ್ಟೋ ಸಮಯದ ನಂತರ ತನ್ನ ಮೊಬೈಲ್‌ಗೆ ತುಸು ಬಿಡುವು ನೀಡೋಣ ಎಂದು ಫೋನ್ ಚಾರ್ಜ್‌ನಲ್ಲಿಟ್ಟು ಸುಮ್ಮನೆ ಕೂತಳು. ಮೊಬೈಲ್‌ನಿಂದ ತುಂಬ ದೂರವೇನಲ್ಲ, ಯಾವ ನೋಟಿಫಿಕೇಷನ್ ಬಂದರೂ ಕಿವಿಗೆ ಬೀಳುವಷ್ಟು, ನೋಟಿಫಿಕೇಷನ್ ಬಂದಾಗ ಮೊಬೈಲ್‌ನ ಬೆಳಕು ಕಣ್ಣಿಗೆ ಕಾಣುವಷ್ಟು ದೂರದಲ್ಲೇ ಕುಳಿತಿದ್ದಳು. ಕಣ್ಣಿನ ಮೇಲೆ ಸೌತೆಕಾಯಿ ತುಂಡುಗಳಿದ್ದರೂ ಒಳದೃಷ್ಟಿ ಫೋನ್ ಮೇಲಿತ್ತು. ಮುಖಕ್ಕೆ ಹಾಕಿದ್ದ ಫೇಸ್‌ಪ್ಯಾಕ್ ಮಾತನಾಡದಂತೆ ಎಚ್ಚರ ವಹಿಸಿತ್ತು. ಕುಕ್ಕರ್ ವಿಶಲ್ ಆದಾಗಲೇ ನೆನಪಾದದ್ದು ಇಂದು ಭಾನುವಾರ! ಅಂದರೆ ಸಮಯದ ಹಿಂದೆ ಓಡುವವರಿಗೆ ನೆಮ್ಮದಿ ನಿಲ್ದಾಣ. ಗಂಡನಿಗೆ ಹೆಂಡತಿ ಮುಖ ನೋಡಲು, ಹೆಂಡತಿಗೆ ಗಂಡನನ್ನು ನೋಡಲು ವಾರದಲ್ಲಿ ಸಿಗುವುದು ಇದೊಂದೇ ದಿನ. ಹೆಂಡತಿಯೊಡನೆ ಏನೋ ಮಾತಡೋಣ ಎಂದು ಗಂಡ ಬಾಯಿ ತೆರೆದಾಗ, ನನ್ನ ಫೇಸ್‌ಪ್ಯಾಕ್ ಒಣಗುವವರೆಗೂ ಸ್ವಲ್ಪ ಸುಮ್ಮನೆ ಕೂರಿ ಎನ್ನುವಂಥ ರಿಯಾಕ್ಷನ್ ಹೆಂಡತಿ ಕಡೆಯಿಂದ ಬಂತು. ಪಾಪದ ಗಂಡ ಸುಮ್ಮನಾದ. ಆದರೆ ತನ್ನ ಹೆಂಡತಿ ಮುಂಚೆ ಹೀಗಿರಲಿಲ್ಲವಲ್ಲ? ಮೊಬೈಲ್ ಎಂದರೆ ಅಷ್ಟಕ್ಕಷ್ಟೆ. ಈಗ ಆಕೆಯ ಎಲ್ಲ ಗಮನ ಅದರ ಮೇಲೆಯೇ ಇದೆ ಯೋಚಿಸುತ್ತಿದ್ದ. ಮೀರಾ ಮುಖ ತೊಳೆಯಲು ಒಳಗೆ ಹೋದಳು, ಎರಡು ನಿಮಿಷದಲ್ಲೇ ಮೊಬೈಲ್‌ಗೆ ಮೆಸೇಜ್ ಬಂದ ಶಬ್ದ ಜೋರಾಗೇ ಕೇಳಿಸಿತ್ತು. ಅರ್ಧಂಬರ್ಧ ಮುಖ ತೊಳೆದ ಮೀರಾ, ಒಲೆ ಮೇಲೆ ಹಾಲು ಉಕ್ಕಿತೇನೋ ಎಂಬಂತೆ ಓಡಿ ಬಂದಳು. ಅಷ್ಟರೊಳಗಾಗಲೇ ಪತಿರಾಯ ಚಾರ್ಜ್‌ರ್‌ನ ಪ್ಲಗ್ ತೆಗೆದು ಫೋನ್ ಕೈನಲ್ಲಿ ಇಟ್ಟುಕೊಂಡಿದ್ದ. ಮೀರಾ ಫೋನ್‌ನನ್ನು ಕಸಿದುಕೊಂಡಾಗಿತ್ತು. ರೀತಿ ಮೀರಾಳನ್ನು ಆತ ಎಂದೂ ನೋಡಿಯೇ ಇರಲಿಲ್ಲ, ಫೇಸ್‌ಪ್ಯಾಕ್ ಬಗ್ಗೆ ಮಾತನಾಡುತ್ತಿಲ್ಲ! ಆಕೆಯ ಮುಖದ ಭಾವದಿಂದ, ರೀತಿ ರೌದ್ರಾವತಾರದಲ್ಲಿ, ಏರು ಧ್ವನಿಯಲ್ಲಿ, ‘ನನ್ನ ಫೋನ್ ಯಾಕೆ ಮುಟ್ಟಿದ್ರಿ? ನನ್ನ ಕೇಳದೇ ನನ್ನ ಫೋನ್ ಮುಟ್ಟೋಕೆ ಯಾರು ಹೇಳಿದ್ದು?’ಎಂದಳು.

ಇದು ಒಂದು ಮನೆಯ ಕಥೆ. ಇನ್ನೊಂದು ಮನೆಯ ಕಥೆ ಕೇಳಿ.

ರಾಘವನಿಗೆ ಮುಂಚಿನಿಂದಲೂ ಲವ್ ಮ್ಯಾರೇಜ್ ಆಗಬೇಕು ಎಂಬ ಆಸೆಯಿತ್ತು. ಆದರೆ ಅವನಿಗೆ ಇಷ್ಟ ಆದ ಹುಡುಗಿಯರು ಅವನನ್ನು ಇಷ್ಟಪಡುತ್ತಿರಲಿಲ್ಲ. ಇನ್ನು ಅವನನ್ನು ಹುಡುಗಿಯಾಗಿಯೇ ಬಂದು ಇಷ್ಟುಪಡುವಂತೆ ಅವನಿರಲಿಲ್ಲ. ಅವನ ಕೆಲಸ, ಅವನ ಪಾಡು, ಅದೇ ಬ್ಲಾಕ್ ವೀಕೆಂಡ್‌ನಲ್ಲಿ ನಿದ್ದೆ. ಹೀಗಿತ್ತು ಅವನ ದಿನಚರಿ.ಅಂತೂ ಮನೆಯವರೆಲ್ಲ ಸೇರಿ ರಾಘವನ ಲವ್ ಮ್ಯಾರೇಜ್ ಆಸೆಗೆ ತಣ್ಣೀರೆರೆಚಿ ಚಂದದ ಹುಡುಗಿಯೊಬ್ಬಳ ಜತೆ ಮದುವೆ ಮಾಡಿದರು. ಅವನಂತೆ ಸಾಫ್‌ಟ್ವೇರ್ ಕಂಪನಿಯಲ್ಲಿ ಆಕೆಯೂ ಕೆಲಸ ಮಾಡುತ್ತಿದ್ದಳು. ಒಬ್ಬರನ್ನೊಬ್ಬರು ತಕ್ಕಮಟ್ಟಿಗೆ ಅರ್ಥ ಮಾಡಿಕೊಳ್ಳಲು ವರ್ಷಗಳೇ ಕಳೆದು ಹೋದವು. ಎಂದಿನ ದಿನಚರಿಯಂತೆ ಊಟ ಮಾಡಿ ಮಲಗುವ ಹೊತ್ತಿನಲ್ಲಿ ರಾಘವನಿಗೆ ಆಫೀಸಿನಿಂದ ಕರೆ ಬಂತು. ರಾಘವನ ಫೋನ್ ಬ್ಯಾಟರಿ ಅಂತ್ಯಸಂಸ್ಕಾರಕ್ಕೆ ರೆಡಿಯಾಗಿತ್ತು. ಹೆಂಡತಿ ವಾಟ್ಸಾಪ್‌ನಲ್ಲಿ ಮುಳುಗಿದ್ದಳು. ಆಫೀಸಿಗೆ ಮಾಡುವುದಿದೆ ಎಂದು ಫೋನ್ ಕಸಿದ. ಆತ ಕರೆ ಮಾಡುವುದಕ್ಕೆ ಫೋನ್ ಎತ್ತುಕೊಂಡ ಎಂದು ತಿಳಿದಿದ್ದರೂ ಆಕೆಗೆ ಅದೇಕೋ ಅವ ಫೋನ್ ಕಸಿದುಕೊಂಡ ರೀತಿ ಇಷ್ಟವಾಗಲಿಲ್ಲ. ಕರೆ ಇಟ್ಟ ನಂತರ ವಾಟ್ಸಾಪ್ ಆನ್‌ನಲ್ಲಿಯೇ ಇದ್ದದ್ದು ಕಣ್ಣಿಗೆ ಬಿತ್ತು. ‘ಏನೇ ನಿನ್ನ ಸ್ನೇಹಿತೆಯರಿಗೂ ಕೆಲಸವಿಲ್ಲವಾ? ಬರೀ ಚಾಟ್ ಮಾಡ್ತಾರೆ ನಿದ್ದೆ ಇಲ್ಲದೆ ಬೆಳಗ್ಗೆ ಹೇಗೆ ಕೆಲಸ ಮಾಡುತ್ತಿ?’ ಎಂದ. ಗಂಡ ತನ್ನ ಸ್ನೇಹಿತೆಯರ ಗುಂಪಿನ ಬಗ್ಗೆ ಮಾತನಾಡಿದ್ದು, ಫೋನ್ ನೋಡಿದ್ದು ಆಕೆಗೆ ಏನೂ ಹೇಳದೇ ಸುಮ್ಮನೆ ಮಲಗಿದಳು. ಗಂಡ ತನ್ನ ಮೇಲೆ ಅನುಮಾನ ಪಟ್ಟನಾ ಎಂಬ ಸಣ್ಣ ಅನುಮಾನ ಆರಂಭವಾಗಿತ್ತು. ದಿನಗಳು ಉರುಳಿದವು. ಅಂದು ಭಾನುವಾರ. ಬಹಳ ದಿನದ ನಂತರ ರಾಘವನಿಗೆ ಅಡುಗೆ ಮಾಡುವ ಆಸೆಯಾಗಿ, ಅಡುಗೆ ಮನೆಯಲ್ಲಿ ಮುಳುಗಿ ಹೋದ. ಆಕೆಯೂ ತನ್ನ ಭಾನುವಾರದ ರಿಲ್ಯಾಕ್ಸಿಂಗ್ ಮೋಡ್‌ನಲ್ಲಿದ್ದಳು. ಹಾಲ್‌ನಲ್ಲಿದ್ದ ರಾಘವನ ಫೋನ್ ಪದೇ ಪದೆ ಕೂಗುತ್ತಿತ್ತು. ಎರಡು ಬಾರಿ ರಾಘವ್‌ನನ್ನು ಕೂಗಿ ಸುಸ್ತಾದಳು. ಹಿಂದೆ ಅವಳೆಂದೂ ಅವನ ಫೋನ್ ಅಂದು ಗಂಡ ತನ್ನ ಫೋನ್ ನೋಡಿದನಲ್ಲಾ? ನಾನು ನೋಡಲಾ? ಮನದ ಮಾತುಗಳು ಕಿವಿಗೆ ಕೇಳಿತಾದರೂ ಗಂಡನ ಮೇಲಿನ ನಂಬಿಕೆಯಿಂದ ಸುಮ್ಮನಾದಳು. ಗಂಡನ ಬಳಿ ಫೋನ್ ತಂದು ಕೊಟ್ಟಳು. ‘ಐದಾರು ಬಾರಿ ಕರೆ ಬಂದಿದೆ, ಎಮರ್ಜೆನ್ಸಿ ಇರಬಹುದು. ಕೈ ತೊಳೆದು ಫೋನ್ ನೋಡಿಎಂದಳು. ಬೋಂಡದ ಹಿಟ್ಟಿನಲ್ಲಿ ಕೈ ಮುಳುಗಿಸಿಕೊಂಡಿದ್ದವ ಫೋನ್ ಹೇಗೆ ನೋಡಿಯಾನು? ನೀನೇ ನೋಡು ಎಂದ. ಪಾಸ್‌ವರ್ಡ್ ಕೂಡ ಹೇಳಿದ. ‘ಯಾರೋ ಅಕ್ಷತಾ ಅಂತೆಎಂದಳು. ‘ಅಯ್ಯೋ ಅವಳು ಕೊಲೀಗ್, ಚಿಕನ್ ರೆಸಿಪಿ ಮೆಸೇಜ್ ಮಾಡುತ್ತೇನೆ ಎಂದು ಹೇಳಿದ್ದೆ. ಒಂದು ಕೆಲಸ ಮಾಡು ನಾನು ಹೇಳುತ್ತೇನೆ. ನೀನು ವಾಟ್ಸಾಪ್‌ನಲ್ಲಿ ಅವಳಿಗೆ ಮೆಸೇಜ್ ಕಳಿಸುಎಂದ. ದಿನ ತಾನು ಯೋಚಿಸಿದ ರೀತಿ ಬಗ್ಗೆ ಹೆಂಡತಿ ಮತ್ತೆ ಮತ್ತೆ ಯೋಚಿಸಿದಳು.

ಹೌದು. ಗಂಡ ಹೆಂಡತಿ ಒಬ್ಬರೊಬ್ಬರ ಫೋನ್ ನೋಡಬಹುದೇ? ಕೆಲವೊಬ್ಬರು ತಮ್ಮ ಫೋನ್‌ನನ್ನು ಯಾರೂ ನೋಡಬಾರದು ಎಂದು ಇಚ್ಛಿಸುತ್ತಾರೆ. ಇನ್ನು ಕೆಲವರು ಫೋನ್‌ನಲ್ಲೇನಿದೆ ಎಂದು ಸುಮ್ಮನಾಗುತ್ತಾರೆ.

Tags

Related Articles

Leave a Reply

Your email address will not be published. Required fields are marked *

Language
Close