About Us Advertise with us Be a Reporter E-Paper

ಅಂಕಣಗಳು

ದ್ವೇಷ ರಾಜಕೀಯದ ಅಸ್ತ್ರವಾಗದಿರಲಿ

ನಿರ್ಮೂಲನೆಗಾಗಿ ನಮ್ಮ ರಾಜ್ಯದಲ್ಲಿದ್ದ ಲೋಕಾಯುಕ್ತ ಸಂಸ್ಥೆಯನ್ನು ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಚ್ಚಿ ಭ್ರಷ್ಟಾಚಾರ ನಿಗ್ರಹ ದಳ ರಚಿಸಿತು. ಅದಕ್ಕೆ ಆರಂಭದಿಂದಲೂ ವಿರೋಧವಿದ್ದೇ ಇತ್ತು. ಆದರೂ ಅದಕ್ಕೆ ಸರಕಾರ ಮಣಿಯಲಿಲ್ಲ. ಇಂಥ ಯಾವುದೇ ಸಂಸ್ಥೆ ಅಸ್ತಿತ್ವಕ್ಕೆ ಬಂದರೆ ಅದು ಆಳುವ ಸರಕಾರದ ಬಾಲಂಗೋಚಿಯಂತೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ನಿರ್ವಿವಾದ. ಏಕೆಂದರೆ ಅದರ ರಕ್ತ, ಮಾಂಸಖಂಡಗಳೆಲ್ಲ ಆಳುವ ಸರಕಾರದವೇ ಆಗಿರುತ್ತದೆ. ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆಯದೂ ಅದೇ ಕತೆ. ಆಳುವ ಹೇಳಿದಂತೆ ಹುಲ್ಲು ತಿಂದು ಸಗಣಿ ಹಾಕುವುದನ್ನು ಬಿಟ್ಟರೆ ಅದಕ್ಕೆ ಇನ್ನೊಂದು ಕೆಲಸ ಗೊತ್ತಿರುವುದಿಲ್ಲ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಆಳುವ ಪಕ್ಷ ಸೇರಿದಂತೆ ಎಲ್ಲ ಪಕ್ಷಗಳೂ ಕೊಟ್ಟ ಭರವಸೆ ಎಂದರೆ ನಾವು ಅಧಿಕಾರಕ್ಕೆ ಬಂದರೆ ಎಸಿಬಿ ಮುಚ್ಚಿ, ಲೋಕಾಯುಕ್ತವನ್ನು ಮತ್ತೆ ಜಾರಿಗೆ ತರುತ್ತೇವೆ.’ ಇಂಥದ್ದೊಂದು ಭರವಸೆ ಈಗ ಆಳುವವರಿಗೂ, ಪ್ರತಿಪಕ್ಷದವರಿಗೂ ಮರೆತಿದೆ. ಈಗ ಸಮ್ಮಿಶ್ರ ಸರಕಾರ ಬಂದಿರುವುದರಿಂದ ಎರಡೂ ಪಕ್ಷದ ನಾಯಕರು ಮಾನತಾಡುತ್ತಿಲ್ಲ. ಬಹಳ ಮುಖ್ಯವಾಗಿ ಮಾಜಿ ಪ್ರಧಾನಿ ದೇವೇಗೌಡರು ಸಹ ಇದರ ಬಗ್ಗೆ ಚಕಾರವೆತ್ತಿಲ್ಲ. ಲೋಕಾಯುಕ್ತ ಪುನಾರಂಭ ಅವರ ಪಕ್ಷದ ಪ್ರಣಾಳಿಕೆಯ ಪ್ರಮುಖ ಅಂಶವಾಗಿತ್ತು. ಈಗ ಮಾತನಾಡದಿರಲು ಪ್ರಮುಖ ಕಾರಣ, ವಿರೋಧಿಗಳನ್ನು ಹಣಿಯಲು ಇರುವ ಅಸ್ತ್ರವನ್ನು ಕಳೆದುಕೊಳ್ಳದಿರುವುದು.

ಸರಕಾರ ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆಂಬ ಮಾತುಗಳ ಬೆನ್ನಲ್ಲೇ ಯಡಿಯೂರಪ್ಪ ವಿರುದ್ಧದ ಕಾಂಗ್ರೆಸ್ ಸಂಸ್ಥೆಯನ್ನು ಬಳಸಿಕೊಳ್ಳಲು ಮುಂದಾಗಿದೆ. ಚುನಾವಣೆಯ ನಂತರ ಸರಕಾರ ರಚಿಸುವ ಸಂದರ್ಭದಲ್ಲಿ ಬಿಜೆಪಿ ನಾಯಕರು ಶಾಸಕರಿಗೆ ಹಣ ಹಾಗೂ ಸಚಿವಸ್ಥಾನದ ಆಮಿಷವೊಡ್ಡಿದ್ದರು ಎಂಬ ಮರುಜೀವ ನೀಡಲು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ, ಗಾಲಿ ಜನಾರ್ದನ ರೆಡ್ಡಿ ಸೇರಿ ಹಲವು ಬಿಜೆಪಿ ನಾಯಕರು ದೂರವಾಣಿ ಮೂಲಕ ಆಮಿಷವೊಡ್ಡಿದ್ದರೆಂದು ಆರೋಪಿಸಿ ಸಲ್ಲಿಕೆಯಾಗಿದ್ದ ದೂರಿನ ತನಿಖೆಯನ್ನು ಎಸಿಬಿಗೆ ವಹಿಸಲಾಗುತ್ತಿದೆ. ಸಮ್ಮಿಶ್ರ ಸರಕಾರ ರಚನೆಯಾದ ಸಂದರ್ಭದಲ್ಲೇ ಯಡಿಯೂರಪ್ಪನವರು ಇದನ್ನು ವಿಧಾನ ಸಭೆಯಲ್ಲೇ ಮಾತನಾಡಿ, ‘ಹೌದು ನಾನು ಪಕ್ಷಕ್ಕೆ ಆಹ್ವಾನ ನೀಡಿದ್ದು ನಿಜಎಂದಿದ್ದರು. ಆದರೂ ಇಷ್ಟುದಿನ ಸುಮ್ಮನಿದ್ದ ಸಮ್ಮಿಶ್ರ ನಾಯಕರು ಇದಕ್ಕೆ ಈಗ ಜೀವ ತುಂಬಿರುವುದು ದ್ವೇಷ ರಾಜಕಾರಣಕ್ಕೆ ಮುನ್ನುಡಿಯಾಗಿದೆ. ಸರಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆಎಂದು ದೂರುತ್ತಿರುವ ಕಾಂಗ್ರೆಸ್ ನಾಯಕರು ಇಲ್ಲಿ ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಸಹಜವಾಗಿಯೇ ಜನಸಾಮಾನ್ಯರಲ್ಲಿ ಮೂಡುತ್ತಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವವರು ನೀಡಿದ ದೂರಿನ ಅನ್ವಯ ವಿಚಾರಣೆ ಆರಂಭಿಸಿರುವ ಎಸಿಬಿ ತನಿಖಾಧಿಕಾರಿಗಳು, ಸದ್ಯದಲ್ಲಿಯೇ ಯಡಿಯೂರಪ್ಪ, ಜನಾರ್ದನ ರೆಡ್ಡಿ ಸೇರಿ ಹಲವು ಬಿಜೆಪಿ ನಾಯಕರಿಗೆ ನೋಟಿಸ್ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇವನ್ನೆಲ್ಲ ನೋಡಿದಾಗ ಕರ್ನಾಟಕದಲ್ಲಿ ದ್ವೇಷ ರಾಜಕಾರಣ ಮತ್ತೆ ಹೆಡೆ ಎತ್ತುತ್ತಿರುವುದು ಕಳೆದ ನಾಲ್ಕೈದು ತಿಂಗಳಿಂದ ಕರ್ನಾಟಕದಲ್ಲಿ ಸರಕಾರವಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಎಲ್ಲ ನಾಯಕರೂ ರಾಜಕೀಯ ಮೇಲಾಟ ಶುರು ಮಾಡಿದರೆ ಸದ್ಯಕ್ಕೆ ಇದು ಕೊನೆಯಾಗುವುದಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close